ಹೆಚ್ಚುವರಿ ಹಾಗೂ ಆಕಾಲಿಕ ಮಳೆ ಹಾಗೂ ಕೀಟ ಭಾದೆಯಿಂದ ಆಂಧ್ರಪ್ರದೇಶದ ಅನಂತಪುರದಲ್ಲಿ ಶೇಂಗಾ ಮತ್ತು ಕೆಂಪಕ್ಕಿ ಇಳುವರಿ ಕುಸಿದಿದೆ. ಈ ಬೆಳೆ ಹಂಗಾಮಿನಲ್ಲಿ 4.95 ಲಕ್ಷ ಹೆಕ್ಟೇರ್‌ನಲ್ಲಿ ಶೇಂಗಾ ಬೆಳೆಯಲಾಗಿದ್ದು, ಒಟ್ಟು 3,000 ಕೋಟಿ ರೂ. ಆದಾಯ ನಿರೀಕ್ಷೆಯು ಕಳೆದ ವರ್ಷ ಜೂನ್ ಮತ್ತು ಜುಲೈನಲ್ಲಿ ಇದ್ದರೂ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದೆ.
ಬೆಳೆ ನಷ್ಟವಾದರೂ ಅಲ್ಲಿನ ಅಧಿಕಾರಿಗಳು ಶೇಂಗಾ ಬೆಳೆ ಹಾನಿಯನ್ನು ಪರಿಗಣಿಸಿಲ್ಲ. ಈ ಪ್ರದೇಶದಲ್ಲಿ ಅಕಾಲಿಕ ಮಳೆಯಿಂದಾಗಿ 2 ಲಕ್ಷ ಎಕರೆ ದ್ವಿದಳ ಧಾನ್ಯಗಳ ನಷ್ಟವಾಗಿದೆ. ಪ್ರತೀ ರೈತರು ಸುಮಾರು 10 ಎಕರೆಯಲ್ಲಿ ಶೇಂಗಾ ಕೃಷಿ ಮಾಡಿದ್ದು, ಬಿತ್ತನೆಗೆ 50 ಸಾವಿರ ಖರ್ಚು ಮಾಡಿದ್ದಾರೆ. ಅಕಾಲಿಕ ಮಳೆಯಿಂದ ಇಳುವರಿ ಕಡಿಮೆಯಾಗಿ ಮೂರು ಕ್ವಿಂಟಾಲ್‌ಗೆ 3500 ರೂ.ಗೆ ಮಾರಾಟ ಮಾಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


