ಸಾರಡ್ಕದಲ್ಲಿ ಕೃಷಿ ಹಬ್ಬ | ಅಡಿಕೆ ಇಲ್ಲದ ಕೃಷಿ ಚಿಂತನೆ ಆರಂಭವಾಗಲಿ – ಶ್ರೀಪಡ್ರೆ |

January 7, 2024
9:38 PM
ಅಡ್ಯನಡ್ಕದ ಸಾರಡ್ಕದಲ್ಲಿ ಕೃಷಿ ಹಬ್ಬ ನಡೆಯಿತು.

 ಮುಂದಿನ ದಿನಗಳಲ್ಲಿ ಅಡಿಕೆ ಇಲ್ಲದ ಕೃಷಿ ಚಿಂತನೆಗಳು ಕೃಷಿಕರಲ್ಲಿ ಆರಂಭವಾಗಬೇಕಿದೆ.ಅಡಿಕೆಯೇ ಅಂತಿಮ ಕೃಷಿ ಅಲ್ಲ. ಧಾರಣೆ ದೃಷ್ಠಿಯಿಂದ ಮಾತ್ರವಲ್ಲ ಏಕ ಕೃಷಿಯೂ ಅಪಾಯಕಾರಿ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳಿದರು.

Advertisement
Advertisement
Advertisement

ಅವರು ಅಡ್ಯನಡ್ಕ ಬಳಿಯ ಸಾರಡ್ಕದ ಆರಾಧನಾ ಕಲಾಕೇಂದ್ರದ ಆಶ್ರಯದಲ್ಲಿ ನಡೆದ ಕೃಷಿ ಹಬ್ಬದ ಉದ್ಘಾಟನಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಅಡಿಕೆ ಕೃಷಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಈಗಾಗಲೇ ನಡೆದಿದೆ. ಅಡಿಕೆ ಕೊಯ್ಲು, ತೆಂಗಿನ ಕೊಯ್ಲು, ಔಷಧಿ ಸಿಂಪಡಣೆ ಸೇರಿದಂತೆ ತಾಂತ್ರಿಕವಾದ ಎಲ್ಲಾ ಅಗತ್ಯಗಳೂ ಪೂರೈಕೆ ವೇಳೆಯೇ ಮಾರುಕಟ್ಟೆ ಬಗ್ಗೆ ಚರ್ಚೆ ಆರಂಭವಾಗಿದೆ. ವಿವಿಧ ರೋಗಗಳ ಸಮಸ್ಯೆ ಬಂದಿದೆ. ಹೀಗಿರುವಾಗ ಅಡಿಕೆಯ ಬಗ್ಗೆಯೇ ಮೋಹ ಹೆಚ್ಚಾಗುವ ಬದಲಾಗಿ ಪರ್ಯಾಯವಾದ ಯೋಚನೆಗಳೂ ಅಗತ್ಯವಾಗಿದೆ ಎಂದರು.  ಹಾಗೆಂದು ತಕ್ಷಣವೇ ನಿರಾಸೆಯ ಅಗತ್ಯವೂ ಇಲ್ಲ. ಅಡಿಕೆ ಇರಲಿ, ಆದರೆ ಅಡಿಕೆಯ ಭವಿಷ್ಯದ ಬಗ್ಗೆಯೂ ಯೋಚನೆ ನಡೆಯಲಿ.  ಮುಂದೆ ಸಣ್ಣ ಸಣ್ಣ ಯಂತ್ರಗಳ ಆವಿಷ್ಕಾರ, ಬಳಕೆಯ ಕಡೆಗೆ ಹೆಚ್ಚು ಗಮನ ಅಗತ್ಯ ಇದೆ ಎಂದು ಶ್ರೀಪಡ್ರೆ ಹೇಳಿದರು.

Advertisement

ಅತಿಥಿಗಳಾಗಿದ್ದ ಅಡ್ಯನಡ್ಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗೋವಿಂದ ಪ್ರಕಾಶ್‌ ಸಾಯ, ಕೋವಿಡ್‌ ನಂತರ ಕೃಷಿಗೆ ವರವಾಗಿದೆ. ಕೃಷಿಗೆ ಭವಿಷ್ಯ ಇಲ್ಲ ಎನ್ನುವ ಮನೋಸ್ಥಿತಿ ಬೇಕಾಗಿಲ್ಲ. ಕೃಷಿಗೂ, ಕೃಷಿಕನಿಗೂ ಮಾನ ಸಿಗುವ ಕೆಲಸ ಆಗಬೇಕಿದೆ ಎಂದರು.

Advertisement

ಕಾರ್ಯಕ್ರಮವನ್ನು ಕೇಪು  ಪಂಚಾಯತ್ ಅಧ್ಯಕ್ಷರಾದ ರಾಘವ ಸಾರಡ್ಕ ಉದ್ಘಾಟಿಸಿದರು. ಅತಿಥಿಗಳಾಗಿ  ಅಖಿಲ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ ಕಿನಿಲ ಭಾಗವಹಿಸಿದ್ದರು. ಇದೇ ಸಂದರ್ಭ ಜಲಶೋಧಕರಾದ ಉದಯ ಅವರನ್ನು ಗೌರವಿಸಲಾಯಿತು.

Advertisement

ಕೃಷಿ ಹಬ್ಬದ ಸಂಚಾಲಕ ಶಂಕರ ಸಾರಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಆರಾಧನಾ ಕಲಾಭವನದ ಮಾಲಕಿ ಗೀತಾ ಸಾರಡ್ಕ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾಧಕ ಕೃಷಿಕರೊಂದಿಗೆ ಸಂವಾದ, ಕೃಷಿ ಉಪಕರಣ ಸಾಧಕ ಕೃಷಿಕರ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror