ಮುಂದಿನ ದಿನಗಳಲ್ಲಿ ಅಡಿಕೆ ಇಲ್ಲದ ಕೃಷಿ ಚಿಂತನೆಗಳು ಕೃಷಿಕರಲ್ಲಿ ಆರಂಭವಾಗಬೇಕಿದೆ.ಅಡಿಕೆಯೇ ಅಂತಿಮ ಕೃಷಿ ಅಲ್ಲ. ಧಾರಣೆ ದೃಷ್ಠಿಯಿಂದ ಮಾತ್ರವಲ್ಲ ಏಕ ಕೃಷಿಯೂ ಅಪಾಯಕಾರಿ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳಿದರು.
ಅವರು ಅಡ್ಯನಡ್ಕ ಬಳಿಯ ಸಾರಡ್ಕದ ಆರಾಧನಾ ಕಲಾಕೇಂದ್ರದ ಆಶ್ರಯದಲ್ಲಿ ನಡೆದ ಕೃಷಿ ಹಬ್ಬದ ಉದ್ಘಾಟನಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಅಡಿಕೆ ಕೃಷಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಈಗಾಗಲೇ ನಡೆದಿದೆ. ಅಡಿಕೆ ಕೊಯ್ಲು, ತೆಂಗಿನ ಕೊಯ್ಲು, ಔಷಧಿ ಸಿಂಪಡಣೆ ಸೇರಿದಂತೆ ತಾಂತ್ರಿಕವಾದ ಎಲ್ಲಾ ಅಗತ್ಯಗಳೂ ಪೂರೈಕೆ ವೇಳೆಯೇ ಮಾರುಕಟ್ಟೆ ಬಗ್ಗೆ ಚರ್ಚೆ ಆರಂಭವಾಗಿದೆ. ವಿವಿಧ ರೋಗಗಳ ಸಮಸ್ಯೆ ಬಂದಿದೆ. ಹೀಗಿರುವಾಗ ಅಡಿಕೆಯ ಬಗ್ಗೆಯೇ ಮೋಹ ಹೆಚ್ಚಾಗುವ ಬದಲಾಗಿ ಪರ್ಯಾಯವಾದ ಯೋಚನೆಗಳೂ ಅಗತ್ಯವಾಗಿದೆ ಎಂದರು. ಹಾಗೆಂದು ತಕ್ಷಣವೇ ನಿರಾಸೆಯ ಅಗತ್ಯವೂ ಇಲ್ಲ. ಅಡಿಕೆ ಇರಲಿ, ಆದರೆ ಅಡಿಕೆಯ ಭವಿಷ್ಯದ ಬಗ್ಗೆಯೂ ಯೋಚನೆ ನಡೆಯಲಿ. ಮುಂದೆ ಸಣ್ಣ ಸಣ್ಣ ಯಂತ್ರಗಳ ಆವಿಷ್ಕಾರ, ಬಳಕೆಯ ಕಡೆಗೆ ಹೆಚ್ಚು ಗಮನ ಅಗತ್ಯ ಇದೆ ಎಂದು ಶ್ರೀಪಡ್ರೆ ಹೇಳಿದರು.
ಅತಿಥಿಗಳಾಗಿದ್ದ ಅಡ್ಯನಡ್ಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ, ಕೋವಿಡ್ ನಂತರ ಕೃಷಿಗೆ ವರವಾಗಿದೆ. ಕೃಷಿಗೆ ಭವಿಷ್ಯ ಇಲ್ಲ ಎನ್ನುವ ಮನೋಸ್ಥಿತಿ ಬೇಕಾಗಿಲ್ಲ. ಕೃಷಿಗೂ, ಕೃಷಿಕನಿಗೂ ಮಾನ ಸಿಗುವ ಕೆಲಸ ಆಗಬೇಕಿದೆ ಎಂದರು.
ಕಾರ್ಯಕ್ರಮವನ್ನು ಕೇಪು ಪಂಚಾಯತ್ ಅಧ್ಯಕ್ಷರಾದ ರಾಘವ ಸಾರಡ್ಕ ಉದ್ಘಾಟಿಸಿದರು. ಅತಿಥಿಗಳಾಗಿ ಅಖಿಲ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ ಕಿನಿಲ ಭಾಗವಹಿಸಿದ್ದರು. ಇದೇ ಸಂದರ್ಭ ಜಲಶೋಧಕರಾದ ಉದಯ ಅವರನ್ನು ಗೌರವಿಸಲಾಯಿತು.
ಕೃಷಿ ಹಬ್ಬದ ಸಂಚಾಲಕ ಶಂಕರ ಸಾರಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಆರಾಧನಾ ಕಲಾಭವನದ ಮಾಲಕಿ ಗೀತಾ ಸಾರಡ್ಕ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಧಕ ಕೃಷಿಕರೊಂದಿಗೆ ಸಂವಾದ, ಕೃಷಿ ಉಪಕರಣ ಸಾಧಕ ಕೃಷಿಕರ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…