ಸುದ್ದಿಗಳು

ಕೃಷಿ ಹಬ್ಬದಲ್ಲಿ ಕೃಷಿಕರೊಂದಿಗಿನ ಸಂವಾದ | ಕೃಷಿಗೆ ಯುವಾಕರ್ಷಣೆ ಹೇಗೆ ? ಹಳ್ಳಿಗಳು ವೃದ್ಧಾಶ್ರಮವಾಗುವುದರ ತಡೆ ಹೇಗೆ..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೃಷಿ ಬೆಳವಣಿಗೆಗೆ ಪೂರಕವಾದ ಸಂಗತಿಗಳು. ಕೃಷಿಗೆ ಡಿಜಿಟಲ್‌ ಟಚ್‌, ಕಾಳುಮೆಣಸು ಕೃಷಿ, ಹಣ್ಣುಗಳ ಮೌಲ್ಯವರ್ಧನೆ, ಗೋಸಾಕಾಣಿಕೆ, ಎಗ್ರಿ ಟೂರಿಸಂ, ಕೃಷಿಕರೇ ಅಭಿವೃದ್ಧಿ ಪಡಿಸಿದ ಕೃಷಿಯಂತ್ರಗಳು… ಇದಿಷ್ಟು ಕೃಷಿಕರೊಂದಿಗೆ ಕೃಷಿಕರೇ ನಡೆಸಿದ ಸಂವಾದ. ಇದೆಲ್ಲದರ ಜೊತೆಗೆ ಕೃಷಿಗೆ ಯುವಾಕರ್ಷಣೆ ಹೇಗೆ..? ಮತ್ತು ಹಳ್ಳಿಗಳು ವೃದ್ಧಾಶ್ರಮವಾಗದಂತೆ ನೋಡುವುದು  ಹೇಗೆ..? ಇದೆಲ್ಲಾ ಚರ್ಚೆಯಾದ್ದು ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕ ಬಳಿಯ ಸಾರಡ್ಕದಲ್ಲಿ  ನಡೆದ ಕೃಷಿ ಹಬ್ಬದಲ್ಲಿ.

Advertisement

ಸಾರಡ್ಕದ ಆರಾಧನಾ ಕಲಾಭವನದಲ್ಲಿ ಕೃಷಿ ಹಬ್ಬ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಧಕ ಕೃಷಿಕರೊಂದಿಗೆ ಸಂವಾದ ನಡೆಯಿತು. ಕೃಷಿಕ ಸುರೇಶ್‌ ಬಲ್ನಾಡು ಮಾತನಾಡಿ, ಮಕ್ಕಳಿಗೂ ಕೃಷಿ ಜವಾಬ್ದಾರಿ ನೀಡಬೇಕಿದೆ. ಹೀಗೆ ಬಂದಾಗ ಕೃಷಿ ಜವಾಬ್ದಾರಿ ಮಾತ್ರವಲ್ಲ ಆರ್ಥಿಕ ಸ್ವಾತಂತ್ರ್ಯವೂ ಅಗತ್ಯವಾಗಿ ನೀಡಬೇಕು ಎಂದರು. ಹಳ್ಳಿ ವೃದ್ಧಾಶ್ರಮವಾಗದಂತೆ, ಕೃಷಿಗೆ ಯುವಾಕರ್ಷಣೆಗೆ ಹೆತ್ತವರೇ ಅಗತ್ಯವಾಗಿ ನೋಡಿಕೊಳ್ಳಬೇಕಿದೆ ಎಂದರು. ಯುವಕರು ಹಾಗೂ ಕೃಷಿಕರು ಒಂದಾದರೆ ಕೃಷಿಯಲ್ಲೂ ಹೊಸ ಸಾಧ್ಯತೆ ಸಾಧ್ಯವಿದೆ ಎಂದರು. (ಆಡಿಯೋ ಇಲ್ಲಿದೆ...)

ಹಿಪ್ಪಲಿ ಕಾಳುಮೆಣಸು ಕೃಷಿಯ ಬಗ್ಗೆ ಮಾತನಾಡಿದ ವಿಜಯಾನಂದ ಶರ್ಮ ಪಂಜಿಕಲ್ಲು, ಕೃಷಿಕರೇ ಕಸಿ ಕಟ್ಟುವುದಕ್ಕೆ ಕಲಿತುಕೊಳ್ಳಬೇಕು. ಉಲ್ಟಾ ಕಸಿ ಮಾಡಿದರೆ ಹೆಚ್ಚು ಪ್ರಯೋಜನಕಾರಿಯಾಗಿದೆ. ನಿಮ್ಮ ತೋಟದಲ್ಲಿ ಬೆಳೆಯುವ ಉತ್ತಮ ತಳಿಯನ್ನೇ ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಉತ್ತಮ ಎಂದರು.

ಹಣ್ಣುಗಳ ಮೌಲ್ಯವರ್ಧನೆ ಮಾಡುವ ವೆಂಕಟಕೃಷ್ಣ ಶರ್ಮ ಮಾತನಾಡಿ, ಮನೆಯಲ್ಲಿ ಹಾಳಾಗುವ ಹಣ್ಣುಗಳಿಗೆ ಮಾನ-ಮೌಲ್ಯವರ್ಧನೆ ಮಾಡಿದರೆ ಕೃಷಿಯಲ್ಲಿ ಸೋಲಿಲ್ಲ. ಪ್ರಯೋಗದ ಮೂಲಕವೇ ಕೃಷಿಕ ಬೆಳೆಯಬೇಕಿದೆ ಎಂದರು.

ಎಗ್ರಿ ಟೂರಿಸಂ ಬಗ್ಗೆ ಮಾತನಾಡಿದ ಪಾರ್ಥ ವಾರಣಾಸಿ, ಕೃಷಿಯೊಂದಿಗೆ ಆದಾಯ ತರುವ ಸಾಕಷ್ಟು ಯೋಚನೆಗಳು ಯುವಕರಲ್ಲಿದೆ. ಅದನ್ನು ಕೃಷಿ ಪ್ರವಾಸೋದ್ಯಮದ ಅಡಿಗೆ ತಂದರೆ ಆದಾಯವೂ ಇದೆ. ಕೃಷಿ ಒಂದು ಆಸಕ್ತಿಯಾಗಿ ಬೆಳೆಸಿದರೆ ಸೋಲಿಲ್ಲ ಎಂದರು.

ದೇಸೀ ತಳಿ ಗೋವು ಸಾಕಾಣಿಗೆ ಬಗ್ಗೆ ಮಾತನಾಡಿದ ಸುಬ್ರಹ್ಮಣ್ಯ ಪ್ರಸಾದ್‌ ನೆಕ್ಕರಕಳೆಯ ಗೋವು ಒಂದು ಸಂಪತ್ತು. ಗೋವಿನ ಮೂಲಕವೇ ಬದುಕು ಸಾಧ್ಯವಿದೆ. ಕಳೆದ ಹಲವು ವರ್ಷಗಳಿಂದ ಅಡಿಕೆ ಇಲ್ಲದೆಯೇ ಬದುಕ ಬೇಕು ಎಂಬ ಛಲ ಇದೆ. ಅದು ಸಾಕಾರವಾಗುತ್ತಿದೆ ಎಂದು ಹೇಳಿದರು.

ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ಚಂದ್ರ ಎಸ್‌ ಆರ್‌, ಕೃಷಿ ಸಾಧಕರಲ್ಲಿ ಸಾಕಷ್ಟು ಅನುಭವದ ಮಾಹಿತಿಗಳು ಇರುತ್ತದೆ. ಕೃಷಿ ಬೆಳೆಯಲು ಅನುಭವವೇ ಮುಖ್ಯವಾಗಿದೆ. ಕೃಷಿಗೆ ಯುವಕರು ಬರಬೇಕು ಹಾಗೂ ಹಳ್ಳಿಗಳು ವೃದ್ಧಾಶ್ರಮವಾಗುವುದು ತಪ್ಪಬೇಕಾದರೆ ಹೊಸಹೊಸ ಆವಿಷ್ಕಾರಗಳ ಬಳಕೆ ಅಗತ್ಯ ಇದೆ ಎಂದರು.

ಆ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಿಂಗಾರ ದೋಟಿ ಕೊಯ್ಲು ಬಗ್ಗೆ ರಾಮ ಕಿಶೋರ ಮಂಚಿ ಮಾತನಾಡಿದರು.‌ ಕೃಷಿ ಸಲಕರಣೆಗಳ ಬಗ್ಗೆ ಸೀತಾರಾಮ ಭಟ್, ಡಂಪರ್‌ ಸ್ಕೂಟರ್‌ ರಿಕ್ಷಾ ಬಗ್ಗೆ ಪುರುಷೋತ್ತಮ ಸವಣೂರು, ಅಡಿಕೆ ಸುಲಿಯುವ ಯಂತ್ರದ ಬಗ್ಗೆ ನಾರಾಯಣ ನೆಲ್ಲಿತ್ತಾಯ, ಕೃಷಿ ಉತ್ಪನ್ನಗಳ ಸೋಶಿಯಲ್‌ ಮೀಡಿಯಾ ಮಾರುಕಟ್ಟೆ ಬಗ್ಗೆ ಸುದರ್ಶನ ಭಟ್‌ ನೀರ್ಚಾಲು ಮಾತನಾಡಿದರು. ಸಂವಾದದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ವಹಿಸಿದ್ದರು. ಡಾ.ಅಶ್ವಿನಿ ಕೃಷ್ಣಮೂರ್ತಿ ವಾರಣಾಸಿ ಸಂವಾದವನ್ನು ಸಮನ್ವಯಗೊಳಿಸಿದರು.ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ , ಮಹೇಶ್ ಪುಚ್ಚಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಶಂಕರ್‌ ಸಾರಡ್ಕ ಸ್ವಾಗತಿಸಿ ಗೀತಾ ಸಾರಡ್ಕ ವಂದಿಸಿದರು.

An agricultural festival was held at Aradhana Kalabhavan in Saradka. In this program there was an interaction with the professional farmers. On this occasion, agricultural professionals gave solutions to many agricultural problems.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…

10 hours ago

ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ

ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ.  ಏಕೆಂದರೆ ಈಗ ಕರ್ಕಾಟಕ…

10 hours ago

ಬದುಕು ಕಲಿಸುವ ಪಾಠಗಳು

ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…

10 hours ago

82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ

ಸಕಲಜೀವಿಗಳ ಆಡುಂಬೊಲ ನಮ್ಮೀ  ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…

10 hours ago

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

19 hours ago