ರೈತರು ತಮ್ಮ ಬೆಳೆ ಸಾಲ, ಪಶುಪಾಲನೆ, ಸಸ್ಯ ಸಂಸ್ಕರಣೆಗೆ ಬ್ಯಾಂಕ್ ನಲ್ಲಿ ಹೆಚ್ಚಿನ ಬಡ್ಡಿಯಲ್ಲಿ ಸಾಲ ಪಡೆದು ಕಷ್ಟಕ್ಕೆ ಸಿಲುಕುತ್ತಿದ್ದರೆ, ಈ ಕಾರಣದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಶೂನ್ಯ ಬಡ್ಡಿ ಕೃಷಿ ಸಾಲವನ್ನು ಜಾರಿಗೊಳಿಸಿದೆ. ಆರ್ ಬಿ ಐ ಮಾರ್ಗಸೂಚಿಯ ಪ್ರಕಾರ, ಈ ಸಾಲಗಳ ಬಡ್ಡಿ ದರ 0% ಮತ್ತು ಸಹಕಾರಿ ಬ್ಯಾಂಕ್ ಗಳು 5 ಲಕ್ಷದವರೆಗೆ ಇದನ್ನು ವಿಸ್ತರಣೆ ಮಾಡಿವೆಯಾದರೂ ಸದ್ಯ 3 ಲಕ್ಷಕ್ಕಿಂತ ಅಧಿಕ ಸಾಲ ನೀಡುತ್ತಿಲ್ಲ.
ಭಾರತೀಯ ರಿಸರ್ವ ಬ್ಯಾಂಕ್ ಮಾರ್ಗಸೂಚಿಯ ಪ್ರಕಾರ ಈ ಸಾಲಗಳು ರೈತ ಕ್ರೆಡಿಟ್ ಸ್ಕೋರ್ ಸುಧಾರಿಸಿ, ಭವಿಷ್ಯದಲ್ಲಿ ಹೆಚ್ಚಿ ಸಹಾಯಕ್ಕೆ ಮಾರ್ಗ ಸುಗಮಗೊಳಿಸುತ್ತವೆ. ಈಗಾಗಲೇ ಈ ನಿಯಮದ ಅಡಿಯಲ್ಲಿ 14ಕೋಟಿ ರೈತರು ಲಾಭ ಪಡೆದಿದ್ದಾರೆ.
ಅಗತ್ಯ ದಾಖಲೆಗಳು:
• ಆಧಾರ್ ಕಾರ್ಡ್
• ಭೂಮಿ ಸಾಬೀತು
• ಆದಾಯ ಪ್ರಮಾಣ ಪತ್ರ
• ಬ್ಯಾಂಕ್ ವಿವರಗಳು
• ಪೋಟೋ
• ಜಾತಿ ಪತ್ರ
ಅರ್ಜಿ ಸಲ್ಲಿಸುವ ವಿಧಾನ: ಹತ್ತಿರದ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಥವಾ ಪ್ರಾಥಮಿಕ ಕೃಷಿ ಸಹಕಾರಿ ಸಂಸ್ಥೆಗೆ ತೆರಳಿ ಶೂನ್ಯ ಬಡ್ಡಿ ಕೃಷಿ ಸಾಲದ ಮಾಹಿತಿ ಪಡೆದುಕೊಳ್ಳಿ.

