ಪಾಕಿಸ್ತಾನದ ಆರ್ಥಿಕತೆಯ ಬೆನ್ನೆಲುಬು ಎಂದು ಪರಿಗಣಿಸಲ್ಪಟ್ಟ ಪಾಕಿಸ್ತಾನದ ಕೃಷಿ ವಲಯವು 2025 ರಲ್ಲಿ ಅತ್ಯಂತ ಸಂಕಷ್ಟ ಎದುರಿಸಿದೆ ಎಂದು ವರದಿಯಾಗಿದೆ. ಹವಾಮಾನ ಸಂಕಷ್ಟ ಮತ್ತು ಕೃಷಿ ನೀತಿಯಲ್ಲಿ ತಪ್ಪು ಹೆಜ್ಜೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದವು. ಹೀಗಾಗಿ ಪಾಕಿಸ್ತಾನದ ಕೃಷಿ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿದೆ.
ಪಾಕಿಸ್ತಾನದ ಜಿಡಿಪಿಯ ಸುಮಾರು ಕಾಲು ಭಾಗದಷ್ಟು ಕೊಡುಗೆ ನೀಡುವ ಮತ್ತು ಜನಸಂಖ್ಯೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡುವ ಕೃಷಿಯ ಕುಸಿತವು ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನೋಪಾಯದ ಬಗ್ಗೆ ಸಮಸ್ಯೆಯನ್ನು ಹುಟ್ಟುಹಾಕಿದೆ ಎಂದೂ ವರದಿ ಹೇಳಿದೆ.
ಪಾಕಿಸ್ತಾನದ ಆಹಾರ ಧಾನ್ಯಗಳ ಸುಮಾರು 70 ಪ್ರತಿಶತವನ್ನು ಉತ್ಪಾದಿಸುವ ಪಂಜಾಬ್‌ನಲ್ಲಿ ಪರಿಸ್ಥಿತಿ ವಿಶೇಷವಾಗಿ ಕಷ್ಟಕರವಾಗಿತ್ತು. ಅಸ್ಥಿರ ಹವಾಮಾನ, ಹೆಚ್ಚುತ್ತಿರುವ ವೆಚ್ಚಗಳು ಮತ್ತು ಅಸಮರ್ಪಕ ಸರ್ಕಾರಿ ನೀತಿಗಳು ಕೃಷಿ ಚಟುವಟಿಕೆಯನ್ನು ಸಂಕಷ್ಟಗೊಳಿಸಿದೆ. 2024-25 ರ ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯಲ್ಲಿ ಕೇವಲ 0.56 ಪ್ರತಿಶತದಷ್ಟು ಕೃಷಿ ಬೆಳವಣಿಗೆಯನ್ನು ದಾಖಲಿಸಿದೆ, ಇದು ನಿರೀಕ್ಷೆಗಳಿಗಿಂತ ತೀರಾ ಕಡಿಮೆಯಾಗಿದೆ. ಆದರೆ ಕಡಿಮೆಯಾದ ಕೃಷಿ ಪ್ರದೇಶ, ಇಳುವರಿ ಕುಸಿತ ಮತ್ತು ಮಾರುಕಟ್ಟೆ ಅಸ್ಥಿರತೆಯಿಂದಾಗಿ ಕೃಷಿ ವಲಯವು ಪ್ರಮುಖ ಹಿನ್ನಡೆಯನ್ನು ಅನುಭವಿಸಿತು. ಮಾನ್ಸೂನ್ ಋತುವಿನಲ್ಲಿ ಪ್ರವಾಹವು ಕೃಷಿ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿತು. ಗಡಿಯಾಚೆಯಿಂದ ಹಠಾತ್ ನೀರಿನ ಹರಿವು ಧಾರಾಕಾರ ಮಳೆಯು ಮಧ್ಯ ಮತ್ತು ದಕ್ಷಿಣ ಪಂಜಾಬ್‌ನಲ್ಲಿನ ಕೃಷಿಭೂಮಿಯನ್ನು ಮುಳುಗಿಸಿತು ಎಂದು ವರದಿ ಹೇಳಿದೆ.
ಗೋಧಿ, ಹತ್ತಿ, ಕಬ್ಬು ಮತ್ತು ಭತ್ತದಂತಹ ಬೆಳೆಗಳು ನಾಶವಾದವು, ಆದರೆ, ನೀರಾವರಿ ಜಾಲಗಳು ಮತ್ತು ಗ್ರಾಮೀಣ ಮೂಲಸೌಕರ್ಯಗಳು ಹಾನಿಗೊಳಗಾದವು ಚೇತರಿಕೆಗೆ ವಿಳಂಬವಾಯಿತು. ಅಧಿಕೃತ ಅಂದಾಜಿನ ಪ್ರಕಾರ ದೇಶಾದ್ಯಂತ ಕೃಷಿ ನಷ್ಟವು 430 ಬಿಲಿಯನ್ ರೂ.ಗಳನ್ನು ಮೀರಿದೆ, ಇದರಲ್ಲಿ ಪಂಜಾಬ್ ಅತಿ ಹೆಚ್ಚು ಪಾಲನ್ನು ಹೊಂದಿದೆ. ಕೊಯ್ಲು ಮಾಡುವ ಕೆಲವೇ ವಾರಗಳ ಮೊದಲು ಅನೇಕರು ಸಂಪೂರ್ಣ ಫಸಲನ್ನು ಕಳೆದುಕೊಂಡರು ಎಂದು ವರದಿ ಹೇಳಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




