ಕೃಷಿಯಲ್ಲಿ ಕೆಲಸಗಾರರ ಕೊರತೆ ನೀಗಿಸಲು, ರೈತರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡಲು ಹಾಗೂ ಹೊಲದ ಕೆಲಸಗಳನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸನ ಯೋಜನೆ, ಕೃಷಿ ಯಾಂತ್ರೀಕರಣ ಉಪಯೋಜನೆ ಹಾಗೂ ರಾಜ್ಯದ ಕೃಷಿ ಇಲಾಖೆಯ ಸಹಯೋಗದೊಂದಿಗೆ ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಸರ್ಕಾರವು ಹಲವು ಕೃಷಿ ಉಪಕರಣಗಳ ಖರೀದಿಗೆ ಸಬ್ಸಿಡಿ ನೀಡುತ್ತಿದೆ. ಟ್ರಾಕ್ಟರ್, ಪವರ್ ಟಿಲ್ಲರ್ ಬೀಜಬಿತ್ತನೆ ಯಂತ್ರ ರೋಟಾವೇಟರ್, ಮಲ್ಚಿಂಗ್ ಯಂತ್ರ, ಹಾರ್ವೆಸ್ಟರ್, ನೀರಾವರಿ ಪಂಪ್, ಸೀಡ್ ಕ್ಯೂಮಿನೇಟರ್ ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುವುದು ಮಾತ್ರವಲ್ಲ ರೈತರ ವರ್ಗ ಆದಾರದ ಮೇಲೇ ಸಬ್ಸಿಡಿ ಪ್ರಮಾಣವನ್ನು ವಿತರಿಸಲಾಗುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

