ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯಲ್ಲಿಂದು ಆಯೋಜಿಸಿದ್ದ ಸುಸ್ಥಿರ ಮಣ್ಣಿನ ಆರೋಗ್ಯ, ಜೀವನೋಪಾಯ ಕುರಿತ ಕಾರ್ಯಾಗಾರಕ್ಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ ಚಾಲನೆ ನೀಡಿದರು.
ಈ ವೇಳೆ ವಿಶ್ರಾಂತ ಕುಲಪತಿ ಡಾ. ಡಿ. ಪಿ ಬಿರಾದಾರ್, ಬಳ್ಳಾರಿ ಐಸಿಎಆರ್ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಬಿ. ಕೃಷ್ಣರಾವ್, ವಿಸ್ತರಣಾ ನಿರ್ದೇಶಕ ಡಾ. ಎನ್. ಶಿವಶಂಕರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಡಾ. ಎಂ. ಹನುಮಂತಪ್ಪ, 21 ದಿನಗಳ ಕಾಲ ಕಾರ್ಯಗಾರ ಹಮ್ಮಿಕೊಳ್ಳಲಾಗಿದ್ದು, ಮಣ್ಣಿನ ಸವೆತ, ಫಲವತ್ತತೆ ಕಾಪಾಡುವಲ್ಲಿ ಗುಣಮಟ್ಟದ ಸುಧಾರಣೆ ತರಲು ಈ ಕಾರ್ಯಗಾರ ಪ್ರಮುಖವಾಗಲಿದೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಡಾ. ಎಂ. ಎ. ಬಸವಣೇಪ್ಪ, ಸಾವಯವ ಕೃಷಿ ಮತ್ತು ಆಧುನಿಕ ಕೈಗಾರಿಕೆ ತಂತ್ರಜ್ಞಾನಗಳ ಬಗ್ಗೆ ಹೊಸ ಆವಿಷ್ಕಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಚಿಂತನಾ-ಮಂಥನ ನಡೆಯಲಿದೆ. ಪ್ರಗತಿಪರ ರೈತರನ್ನು ಭೇಟಿ ಮಾಡಿ ಮಾಹಿತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಾಗಾರದಲ್ಲಿ ದೇಶದ 8 ರಾಜ್ಯಗಳಿಂದ 25ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ ಎಂದರು.