ಸಾಮಾನ್ಯವಾಗಿ ಯಾವುದೇ ಕೃಷಿ ತ್ಯಾಜ್ಯದಲ್ಲಿ(Agricultural waste) ಎಲ್ಲಾ ರೀತಿಯ ಪೋಷಕಾಂಶ(Nutrition) ಲಭ್ಯವಾಗುತ್ತದೆ. ಪ್ರಧಾನವಾಗಿ ಪರಿಗಣಿಸುವ NPK(ಸಾರಾಜನಕ(Nitrogen), ರಂಜಕ(Phosphorus), ಪೊಟಾಷ್(Potash )ತೆಗೆದುಕೊಂಡರೆ, ಪ್ರತಿ ಟನ್ ಒಂದಕ್ಕೆ 5.5 ಕೆಜಿ ಸಾರಾಜನಕ, 2.5 ಕೆಜಿ ರಂಜಕ, 25 ಕೆಜಿ ಪೊಟ್ಯಾಸಿಯಂ ರೀತಿ 04 ಟನ್ ಕೃಷಿ ತ್ಯಾಜ್ಯದಲ್ಲಿ 22 ಕೆಜಿ ಸಾರಾಜನಕ, 10 ಕೆಜಿ ರಂಜಕ, 100 ಕೆಜಿ ಪೊಟ್ಯಾಸಿಯಂ ಲಭ್ಯವಾಗುತ್ತದೆ.
ಈ ಪ್ರಮಾಣದ NPK ಯನ್ನು ರಸಗೊಬ್ಬರ(Fertilizer) ಮೂಲಕ ಬೆಳೆಗಳಿಗೆ ನೀಡಬೇಕಾದರೆ ಯೂರಿಯಾ :100 ಕೆಜಿ, ಡಿ.ಎ.ಪಿ:20 ಕೆಜಿ, ಮ್ಯೂರೇಟ್ ಆಫ್ ಪೊಟಾಷ್ (MOP):167 ಕೆಜಿ ನೀಡಬೇಕಾಗುತ್ತದೆ. ಈ ಪ್ರಮಾಣದ ರಾಸಾಯನಿಕ ಗೊಬ್ಬರಕ್ಕೆ ತಗುಲುವ ಮೂಲ ಬೆಲೆ ಸುಮಾರು ರೂ 16,000/ ಗಳು, ಈ ಪ್ರಕಾರ 01 ಟನ್ ಕೃಷಿ ತ್ಯಾಜ್ಯದ ಮೌಲ್ಯವನ್ನು ಕೇವಲ ರಸಗೊಬ್ಬರಕ್ಕೆ(NPK) ಸರಿಸಾಮಾನವಾಗಿ ನೋಡಿದಾಗ ರೂ 4000/.
01 ಟನ್ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಿ ಸುಟ್ಟರೆ 1460 ಕೆಜಿ ಕಾರ್ಬನ್ ಡೈಆಕ್ಸೈಡ್ ಜೊತೆಗೆ ನೈಟ್ರಸ್ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಮೀಥೇನ್ ಮತ್ತು ಇನ್ನಿತರೇ ವಿಷಕಾರಕ ಅನಿಲಗಳು ವಾತಾವರಣಕ್ಕೆ ಸೇರುವುದರಿಂದ ಹವಾಮಾನ ಬದಲಾವಣೆಗೆ ಕಾರಣವಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಾಕುವುದರಿಂದ ಮಣ್ಣಿನಲ್ಲಿರುವ ಸೊಕ್ಷ್ಮಜೀವಿಗಳು ಸಾಯುತ್ತದೆ. ಮಣ್ಣಿನ ಫಲವತ್ತತೆ ಕುಂಠಿತವಾಗುತ್ತದೆ. ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗಿ ನೀರನ್ನು ಹಿಡಿದಿಟ್ಟುಕೊಳ್ಳಲು ವಿಫಲವಾಗುತ್ತದೆ,ಕೃಷಿ ತ್ಯಾಜ್ಯವನ್ನು ಸುಡುವುದರಿಂದ ಮತ್ತು ಮಣ್ಣಿಗೆ ಸೇರಿಸುವುದರಿಂದ ಪರಿಸರದ ಮೇಲೆ ಆಗುವ ನಷ್ಟ ಮತ್ತು ಲಾಭವನ್ನು ಹಣದ ರೂಪದಲ್ಲಿ ಲೆಕ್ಕ ಹಾಕಲಾಗದು.
ಕೃಷಿ ಭೂಮಿಯಲ್ಲಿ ಉತ್ಪತ್ತಿಯಾಗುವ ಕೃಷಿ ತ್ಯಾಜ್ಯಗಳನ್ನು ನಿರ್ವಹಣೆ ಮಾಡಲು ಕಾರ್ಮಿಕರ ಅಭಾವ, ತಿಳುವಳಿಕೆ ಕೊರತೆ, ಕೃಷಿ ತ್ಯಾಜ್ಯ ಪುಡಿ ಮಾಡುವ ಯಂತ್ರಗಳ ಅಲಭ್ಯತೆಯಿಂದಾಗಿ ಅತ್ಯಮೂಲ್ಯ ನೈಸರ್ಗಿಕ ಸಂಪತ್ತನ್ನು ಬೆಂಕಿ ಹಾಕಿ ಸುಟ್ಟು ಹಾಕಲಾಗುತ್ತಿದೆ. ಕೃಷಿ ತ್ಯಾಜ್ಯಗಳನ್ನು ಸುಡುವುದರಿಂದ ಪರಿಸರ ಮಾಲಿನ್ಯ ಮತ್ತು ಮಣ್ಣಿನ ಫಲವತ್ತತೆ ನಾಶವಾಗುತ್ತಿರುವುದರಿಂದ ಸಕಲ ಜೀವ ರಾಶಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗುತ್ತಿದೆ.
ಕೃಷಿ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಭೌತಿಕ ಮತ್ತು ಜೈವಿಕ ರಚನೆ ಸುಧಾರಿಸುತ್ತದೆ.ಸೂಕ್ಷ್ಮಜೀವಿಗಳ ಸಂಖ್ಯೆ ವೃದ್ಧಿಸುತ್ತದೆ. ಪೋಷಕಾಂಶ ಕೊರತೆ ನೀಗುವುದರಿಂದ ಗೊಬ್ಬರ ಕೊಡುವ ಅವಶ್ಯಕತೆ ಬರುವುದಿಲ್ಲ. ಸಾವಯವ ಇಂಗಾಲ ಹೆಚ್ಚಾಗಿ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚುತ್ತದೆ. ಪೌಷ್ಟಿಕಭರಿತ ಆಹಾರ ಉತ್ಪತ್ತಿಯಾಗುತ್ತದೆ. ಕೃಷಿ/ತೋಟಗಾರಿಕೆ ಇಲಾಖೆಯವರು ಕೃಷಿ ತ್ಯಾಜ್ಯಗಳನ್ನು ಪುಡಿ ಮಾಡುವ ಯಂತ್ರಗಳನ್ನು (Farm waste Shredder machine) ರೈತರಿಗೆ ಬಾಡಿಗೆ ಆಧಾರದಲ್ಲಿ ಸೇವೆ ನೀಡಲು ಮತ್ತು ರೈತರು ಖರೀದಿಸಲು ಸಬ್ಸಿಡಿ ಮತ್ತು ತಾಂತ್ರಿಕ ಮಾಹಿತಿ ಒದಗಿಸಿ ಕೃಷಿ ತ್ಯಾಜ್ಯಗಳನ್ನು ಬೆಂಕಿಗೆ ಹಾಕೋದಲ್ಲ. ಮಣ್ಣಿಗೆ ಹಾಕಬೇಕು ಅನ್ನೋ ಕಾರ್ಯಕ್ರಮಗಳನ್ನು ವ್ಯಪಾಕವಾಗಿ ಮಾಡಿ ರೈತರಲ್ಲಿ ಜಾಗೃತಿ ಉಂಟು ಮಾಡುವಂತಾಗಲಿ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…