ಕೃಷಿ ಶಿಕ್ಷಣ ಕಾರ್ಯಕ್ರಮಗಳಲ್ಲಿ ಒಟ್ಟು ದಾಖಲಾತಿಯಲ್ಲಿ ಮಹಿಳೆಯರು ಶೇ. 30-40 ರಷ್ಟಿದ್ದರೂ, ಈ ವಲಯದಲ್ಲಿ ಉದ್ಯೋಗಕ್ಕೆ ಪರಿವರ್ತನೆಗೊಳ್ಳುವ ಪ್ರಮಾಣ ಬಹಳ ಕಡಿಮೆ ಎಂದು ಭಾರತದ ಕೃಷಿ ವಲಯದಲ್ಲಿನ ಹೊಸ ವರದಿಯೊಂದು ಗಮನ ಸೆಳೆದಿದೆ. ಕೃಷಿ ಕಾರ್ಯಪಡೆಯಲ್ಲಿ ಮಹಿಳೆಯರು 64.4% ರಷ್ಟಿದ್ದರೂ, ಕೇವಲ 6-10% ಮಾತ್ರ ಉನ್ನತ ಕೃಷಿ ವ್ಯವಹಾರ ಮತ್ತು ಸಂಬಂಧಿತ ಕಂಪನಿಗಳಲ್ಲಿ ಸ್ಥಾನಗಳನ್ನು ಹೊಂದಿದ್ದಾರೆ.
ಭಾರತದ ಕೃಷಿ ವಲಯದಲ್ಲಿನ ತೀವ್ರ ವ್ಯತಿರಿಕ್ತತೆಯ ವರದಿ ಇದು ಎಂದು ವರದಿ ಹೇಳಿದೆ.
“ಕೃಷಿ ವ್ಯವಹಾರದಲ್ಲಿ ಮಹಿಳೆಯರು – ಅವಕಾಶಗಳು ಮತ್ತು ಸವಾಲುಗಳು” ಎಂಬ ಶೀರ್ಷಿಕೆಯ ಈ ವರದಿಯನ್ನು ಗೋದ್ರೇಜ್ ಆಗ್ರೋವೆಟ್ ಲಿಮಿಟೆಡ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್ ಮತ್ತು ಗೋದ್ರೇಜ್ ಲ್ಯಾಬ್ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡನೇ ಕೃಷಿ ಮಹಿಳಾ ಸಭೆಯಲ್ಲಿ ಈ ವರದಿಯನ್ನು ಅನಾವರಣಗೊಳಿಸಲಾಯಿತು ಹಾಗೂ ವಿಶ್ಲೇಷಿಸಲಾಯಿತು. ಮಹಿಳೆಯರನ್ನು ಕೃಷಿ ಕ್ಷೇತ್ರದಲ್ಲೂ ಸಬಲೀಕರಣಗೊಳಿಸುವ ಮೂಲಕ ಕೃಷಿಯ ಭವಿಷ್ಯವನ್ನು ಇನ್ನಷ್ಟು ಗಟ್ಟಿ ಮಾಡಬಹುದು ಎನ್ನುವುದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕೃಷಿ ಶಿಕ್ಷಣ ಕಾರ್ಯಕ್ರಮಗಳಲ್ಲಿ ಒಟ್ಟು ದಾಖಲಾತಿಯಲ್ಲಿ ಮಹಿಳೆಯರು ಶೇ. 30-40 ರಷ್ಟಿದ್ದರೂ, ಈ ವಲಯದಲ್ಲಿ ಉದ್ಯೋಗಕ್ಕೆ ಪರಿವರ್ತನೆಗೊಳ್ಳುವ ಪ್ರಮಾಣ ಬಹಳ ಕಡಿಮೆ ಎಂದು ವರದಿ ಗಮನಸೆಳೆದಿದೆ.
ಐಐಎಂಎಯ ಅಧ್ಯಾಪಕ ಸದಸ್ಯೆ ವಿದ್ಯಾ ಅವರು ಈ ಡಾಟಾವು ವಿರೋಧಾಭಾಸವಾಗಿದೆ ಎಂದಿದ್ದಾರೆ. ಕೃಷಿ ಕಾರ್ಯಪಡೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರು ಗುರುತಿಸಿಕೊಂಡರೂ ಕೃಷಿ ಉದ್ಯೋಗ ದ ವೇಳೆ ಹಿಂದೆ ಉಳಿಯುವುದರ ಬಗ್ಗೆ ಕಾರಣ ಹುಡುಕಬೇಕಿದೆ ಎಂದಿದ್ದಾರೆ.
ಕೃಷಿಯ ಭವಿಷ್ಯವು ಭಾರತದಲ್ಲಿ ಇನ್ನಷ್ಟು ಗಟ್ಟಿಯಾಗಲು ಮಹಿಳಾ ಪ್ರಾತಿನಿಧ್ಯ ಕೃಷಿಯಲ್ಲೂ ಹೆಚ್ಚಾಗಬೇಕು, ಅದು ಉದ್ಯೋಗವಾಗಿ ಪರಿವರ್ತನೆಯಾಗಬೇಕು, ಅಷ್ಟೇ ಅಲ್ಲ ಕೃಷಿ ಸಂಸ್ಥೆಗಳಲ್ಲೂ ಮಹಿಳೆಯರು ಉದ್ಯೋಗ ಪಡೆಯಬೇಕು.ಈ ಮೂಲಕ ಕೃಷಿಯ ಉಳಿವು ಕೂಡಾ ಸಾಧ್ಯವಿದೆ ಎನ್ನುವುದು ವರದಿಯ ಸಾರಂಶ.