ನವೆಂಬರ್ ತಿಂಗಳಲ್ಲಿ ರಾಮನಗರ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬರೋಬ್ಬರಿ 41,644 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರಿಗೆ ಸರ್ಕಾರದಿಂದ ಪರಿಹಾರ ಧನ ವಿತರಣೆ ಕಾರ್ಯ ನಡೆದಿದೆ. ಸುಮಾರು 46,225 ರೈತರ ಖಾತೆಗಳಿಗೆ ಈಗಾಗಲೇ ಪರಿಹಾರ ಹಣ ಜಮೆಯಾಗಿದೆ. ಮಾತ್ರವಲ್ಲದೆ 24,314 ಹೆಕ್ಟೆರ್ ಪ್ರದೇಶಕ್ಕೆ ಒಟ್ಟು ರೂ. 16.55 ಕೋಟಿ ಹಣ ಜಮೆಯಾಗಿದೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕೃಷಿ, ಕಂದಾಯ ಇಲಾಖೆಗಳ ಜೊತೆಯಲ್ಲಿ ತೋಟಗಾರಿಕೆ ಇಲಾಖೆಯಿಂದಲೂ ಜಿಲ್ಲೆಯ ರೈತರಿಗೆ ಪರಿಹಾರ ಸಿಗಲಿವೆ. ಬುಧವಾರದವರೆಗೆ ಒಟ್ಟು 1,27,695 ಅರ್ಜಿಗಳನ್ನು ಸಲ್ಲಿಕೆಯಾಗಿದ್ದು, ಇದರಲ್ಲಿ ಕೆಲ ಅರ್ಜಿಗಳನ್ನು ಪರೀಶೀಲನೆ ಮಾಡಲಾಗಿದೆ. ಇನ್ನು ಉಳಿದಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ರೈತರಿಗೆ ಸರಿಯಾದ ಪರಿಹಾರ ಧನವನ್ನು ನೀಡಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement