ಕೃಷಿ ಅಂದರೆ ಒಂದು ಅದ್ಭುತ ಲೋಕ ಏಕೆಂದರೆ….. ? | ಕೃಷಿಕ ಟಿ ಆರ್‌ ಸುರೇಶ್ಚಂದ್ರ ಬರೆಯುತ್ತಾರೆ…. |

July 2, 2022
9:51 AM

ಕೃಷಿ ಅಂದರೆ ಒಂದು ಅದ್ಭುತ ಲೋಕ. ತಾಳ್ಮೆ,ಜಾಣ್ಮೆ,ನಿರೀಕ್ಷೆ, ತಿತೀಕ್ಷೆಗಳನ್ನು ಬಯಸುವ ಸುಂದರ ಲೋಕ.ನಾವು ಪ್ರೀತಿಸಿದಷ್ಟು ಹತ್ತಿರ ಬಂದು ಒಲಿವ ಲೋಕ. ವಿಚಾರ ಏನೂಂದ್ರೇ……

Advertisement
Advertisement
ಮಳೆಗಾಲದ ಈ ಮೊದಲ ದಿನಗಳಲ್ಲಿ ಗಾಳಿಗೋ, ಭಾರಕ್ಕೋ, ಮಣ್ಣು ಮೆತ್ತಗಾದ ಕಾರಣಕ್ಕೋ ಕಾಳುಮೆಣಸಿನ ಬಳ್ಳಿಗಳಿರುವ ಅಡಿಕೆ ಮರ ಧರಾಶಾಹಿಯಾಗಿರುವ ಸಮಯ. ಇಂತಹ ಸಂಧರ್ಭದಲ್ಲಿ ಈ ಬಿದ್ದ ಬಳ್ಳಿಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸರಿಯಾದ ಸಮಯವಿದು. ಸಾಂಪ್ರದಾಯಿಕವಾಗಿ ಈಗ ಆರ್ಧಾ ನಕ್ಷತ್ರದ ದಿನಗಳು, ಕಾಳುಮೆಣಸಿನ ಬಳ್ಳಿಗಳನ್ನು ನೆಡಲು ಸರಿಯಾದ ಸಮಯ. ಅಂತೆಯೇ ಬಿದ್ದ ಬಳ್ಳಿಗಳನ್ನು ಅಡಿಕೆ ಮರಕ್ಕೆ ಪುನಃ ಎತ್ತಿ ಕಟ್ಟಲೂ ಸರಿಯಾದ ಸಮಯ. ಆದರೆ ಅತೀ ಉದ್ದದ ಬಳ್ಳಿಗಳನ್ನು ಎತ್ತಿ ಕಟ್ಟುವುದು ಸುಲಭವಲ್ಲ. ಅದಕ್ಕಾಗಿ ಉದ್ದ ಬಳ್ಳಿಗಳ ತುದಿಯನ್ನು ತುಂಡರಿಸಿ ಹತ್ತು ಹದಿನೈದು ಫೀಟ್ ಗಳಷ್ಟು ಉದ್ದದ ಮೂಲ ಬಳ್ಳಿಯನ್ನು ಪುನಃ ಅಡಿಕೆ ಮರಕ್ಕೆ ಕಟ್ಟಿ , ತುಂಡರಿಸಿದ ತುದಿಯ ಬಳ್ಳಿಗಳನ್ನು ನಾಲ್ಕೈದು ಪೀಟ್ ಗಳಷ್ಟು ಉದ್ದಕ್ಕೆ ತುಂಡರಿಸಿ ಅಡಿಕೆ ಮರಕ್ಕೋ,ತೆಂಗಿನ ಮರಕ್ಕೋ, ಮನೆಯ ಪರಿಸರದ ಬರೆಗಳಿಗೋ ನೆಟ್ಟಾಗ , ಬಿದ್ದ ಒಂದು ಬಳ್ಳಿಗೆ ಪ್ರತಿಯಾಗಿ ಹತ್ತು ಬಳ್ಳಿಗಳನ್ನು ಅಭಿವೃದ್ಧಿ ಮಾಡಿದಂತಹ ಸಂತೃಪ್ತಿ ಮತ್ತು ಬಳ್ಳಿಗಳು ಒಂದೆರಡು ವರ್ಷದಲ್ಲೇ ಫಸಲೂ ಕೊಟ್ಟಾಗ ಮಾಡಿದ ಕೆಲಸಕ್ಕೊಂದು ಪ್ರತಿಫಲವೂ ಲಭಿಸೀತಲ್ಲವೇ.

ಪ್ರಕೃತಿಯ ನಿಯಮವೂ ಅದುವೇ…”ಏಕೋಹಂ ಬಹುಸ್ಯಾಮಹ” ಅಂದರೆ ಒಬ್ಬನಿರುವವ ಬಹುವಾಗಿ ಪ್ರಕಟನಾಗುವುದೇ ಪ್ರಕ್ರೃತಿ ಧರ್ಮವಂತೆ.

ಬರಹ :
# ಟಿ ಆರ್‌ ಸುರೇಶ್ಚಂದ್ರ, ಕಲ್ಮಡ್ಕ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ
ಬದುಕು ಪುರಾಣ | ಎಲ್ಲರೊಳಗೂ ಏಕಲವ್ಯನಿದ್ದಾನೆ!
May 25, 2025
6:00 AM
by: ನಾ.ಕಾರಂತ ಪೆರಾಜೆ
ಮಹಿಳಾ ಗ್ರಾಮಸಭೆ | ರಾಷ್ಟೀಯ ಕೃಷಿ ವಿಕಾಸ ಯೋಜನೆ ಬಗ್ಗೆ ಮಾಹಿತಿ ನೀಡಿದ ವಿಜ್ಞಾನಿ
May 25, 2025
5:57 AM
by: The Rural Mirror ಸುದ್ದಿಜಾಲ
50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18
May 24, 2025
10:37 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group