ಕೃಷಿ ಮತ್ತು ಹವಾಮಾನ ಬದಲಾವಣೆ | ನೈಸರ್ಗಿಕ ಸಂಪನ್ಮೂಲಗಳ ಸಂ‌‌‌‌‌‌‌‌‌‍ರಕ್ಷಣೆ ಮತ್ತು ನಿರ್ವಹಣೆ ಬಗ್ಗೆ ಸಮಾಲೋಚನಾ ಸಭೆ

January 15, 2024
1:16 PM

ಕೃಷಿ ಮತ್ತು ಹವಾಮಾನ ಬದಲಾವಣೆಗೆ(Agriculture and climate change) ಸಂಬಂಧಿಸಿದಂತೆ – ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ(Natural resources) ಮತ್ತು ನಿರ್ವಹಣೆ(maintain) ಬಗ್ಗೆ ಸಮಾಲೋಚನಾ ಸಭೆಯು ಜ.21  ರಂದು ಚಾಮರಾಜನಗರದಲ್ಲಿ ನಡೆಯಲಿದೆ.

Advertisement
Advertisement

ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ಇವರ ವತಿಯಿಂದ, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ & ಹಸಿರು ಸೇನೆ, ಚಾಮರಾಜನಗರ ಶಾಖೆ, ಗಾಂಧಿಜೀ ಸಹಜ ಬೇಸಾಯ ಶಾಲೆ, ತುಮಕೂರು ಮತ್ತು ಕಾರ್ಯನಿರತ ಪತ್ರಕರ್ತರ ಸಂಘ, ಚಾಮರಾಜನಗರ ಜಿಲ್ಲಾ ಘಟಕ, ಇವರುಗಳ ಸಹಯೋಗದಲ್ಲಿ, ತಾಂತ್ರಿಕ ಪರಿಣಿತರೊಂದಿಗೆ ಈ ಸಂವಾದ ನಡೆಯಲಿದೆ.

Advertisement

ಹವಾಮಾನ ಬದಲಾವಣೆಗೆ ನೂರಾರು ಕಾರಣಗಳಿದ್ದರೂ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಇವುಗಳಲ್ಲಿ ಪ್ರಮುಖವಾದದ್ದು. ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯ ಪರಿಣಾಮ ಭೂಮಿಯ ತಾಪಮಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸಿ ಪ್ರಕೃತಿಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತಿದೆ. ಮನುಷ್ಯನು ತನ್ನ ಅಗತ್ಯ ಮತ್ತು ದುರಾಸೆಯಿಂದ ಪರಿಸರಕ್ಕೆ ಮಾತ್ರವಲ್ಲದೆ ತನಗೂ ಹಾನಿ ಮಾಡುವ ಅನೇಕ ಚಟುವಟಿಕೆಗಳನ್ನು ಮಾಡಿದ್ದಾನೆ. ಮಾನವ ಚಟುವಟಿಕೆಯಿಂದಾಗಿ ಅನೇಕ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ನಾಶವಾಗುತ್ತಿವೆ.

ಈ ಹವಾಮಾನ ಬದಲಾವಣೆಗಳು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ, ಸಾಗರದ ಮಟ್ಟ ಏರುತ್ತಿದೆ, ನದಿಗಳು ಹಿಂಗುತ್ತಿವೆ, ಹಿಮನದಿಗಳು ಕರಗುತ್ತಿವೆ, ಗಾಳಿಯಲ್ಲಿ ಇಂಗಾಲದ ಡೈಆಕ್ಸೈಡ್ ಹೆಚ್ಚುತ್ತಿದೆ, ಅರಣ್ಯ ಮತ್ತು ವನ್ಯಜೀವಿಗಳು ಕ್ಷೀಣಿಸುತ್ತಿವೆ, ನೀರಿನಲ್ಲಿ ಜೀವಿಸುವ ಜೀವಿಗಳು ತೊಂದರೆಗೊಳಗಾಗುತ್ತಿವೆ. ಇದಲ್ಲದೆ, ಈ ಬದಲಾವಣೆಯು ಮುಂದುವರಿದರೆ ಅನೇಕ ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳು ನಾಶವಾಗುತ್ತವೆ ಹಾಗೂ ಪರಿಸರಕ್ಕೆ ಭಾರೀ ನಷ್ಟವಾಗಲಿದೆ.

Advertisement

ನಾವು ಏನನ್ನೂ ಮಾಡದಿದ್ದರೆ ಮತ್ತು ಈಗಿನಂತೆಯೇ ಕೆಲಸಗಳು ಮುಂದುವರಿದರೆ, ಭವಿಷ್ಯದಲ್ಲಿ ಮಾನವರು ಭೂಮಿಯ ಮೇಲ್ಮೈಯಿಂದ ನಿರ್ನಾಮವಾಗುವ ದಿನ ಬರುತ್ತದೆ. ಈ ಸಮಸ್ಯೆಗಳನ್ನು ನಿರ್ಲಕ್ಷಿಸುವ ಬದಲು ನಾವು ಕಾರ್ಯನಿರ್ವಹಿಸಲು ಪ್ರಾರಂಭಿಸೋಣ.. ಆಗ ನಾವು ಭೂಮಿ ಮತ್ತು ನಮ್ಮ ಭವಿಷ್ಯವನ್ನು ಉಳಿಸಬಹುದು..

ಹವಾಮಾನ ಬದಲಾವಣೆಯು ಮಾನವ ಮತ್ತು ನೈಸರ್ಗಿಕ ಕಾರಣಗಳಿಂದ ಸಂಭವಿಸುವ ವಿದ್ಯಮಾನವಾಗಿದೆ ಮತ್ತು ಇದು ಪರಿಸರದ ಮೇಲೆ ಮಾತ್ರವಲ್ಲದೆ ಮಾನವರು ಮತ್ತು ಇತರೆ ಎಲ್ಲಾ ಜೀವಿಗಳ ಮೇಲೂ ಪರಿಣಾಮ ಬೀರುವ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಪರಿಸರದ ಮೇಲೆ ಪರಿಣಾಮ ಬೀರುವ ನಮ್ಮ ಕೆಟ್ಟ ಅಭ್ಯಾಸಗಳನ್ನು ಕಡಿಮೆ ಮಾಡುವ ಮತ್ತು ನಿಯಂತ್ರಿಸುವ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಹವಾಮಾನ ಬದಲಾವಣೆಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು.

Advertisement

ಕೃಷಿ, ಆಹಾರ, ಆರೋಗ್ಯದ ವ್ಯವಸ್ಥೆಯನ್ನು ಪರಿಸರದ ಅವಿಭಾಜ್ಯ ಅಂಗವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಿದೆ ಮತ್ತು ಪರಿಸರಕ್ಕೆ ಪೂರಕವಾಗಿ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವುದು, ಕೃಷಿಯನ್ನು ತಂತ್ರಜ್ಞಾನಕ್ಕಿಂತ ಪರಿಸರ ವಿಜ್ಞಾನವೆಂದು ಒತ್ತಿ ಹೇಳುವ ಅನಿವಾರ್ಯತೆ ಎದುರಾಗಿದೆ. ನಗರ ಪ್ರದೇಶಗಳ ವಿಸ್ತರಣೆ, ಕ್ಷೀಣಿಸುತ್ತಿರುವ ಕೃಷಿ ಭೂಮಿ, ಹೆದ್ದಾರಿ ಅಭಿವೃದ್ಧಿಗಾಗಿ ಫಲವತ್ತಾದ ಕೃಷಿ ಮತ್ತು ಹುಲ್ಲುಗಾವಲು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಬೃಹತ್ ಪ್ರಮಾಣದ ನೀರಾವರಿ ಯೋಜನೆಗಳಿಗೆ ಅರಣ್ಯ ನಾಶ, ಪರಿಸರ ಮಾಲಿನ್ಯ ಇವುಗಳು ಭವಿಷ್ಯದ ಆಹಾರ ಉತ್ಪಾದನೆಗೆ ಅಪಾಯವನ್ನು ಉಂಟುಮಾಡುತ್ತದೆ.

ಕೃಷಿ ಮತ್ತು ಆಹಾರ ವ್ಯವಸ್ಥೆಯ ಭವಿಷ್ಯದ ಸುಸ್ಥಿರತೆಗಾಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ ಬಗೆಗಿನ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲು ಅವಕಾಶ ಇದೆ.  ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಾಯಿಸಲು  ಶಶಿಕುಮಾರ ಎಸ್., 9880949689 ಅವರನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

Advertisement
ಬರಹ :
 ಪ್ರಶಾಂತ್ ಜಯರಾಮ್
 9342434530

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ
ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |
May 4, 2024
10:32 AM
by: ದ ರೂರಲ್ ಮಿರರ್.ಕಾಂ
ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror