ಕೃಷಿಕರಿಗೆ ಜಾಗೃತಿಗಾಗಿ | ಬಿಸಿಲು ಹೆಚ್ಚಾಗುತ್ತಿದೆ… ವಾತಾವರಣದ ಉಷ್ಣತೆ ಏರುತ್ತಿದೆ… | ಕೃಷಿಕರು ತೋಟದಲ್ಲಿ ಓಡಾಡುವಾಗ ಇರಲಿ ಎಚ್ಚರ.. |

February 25, 2024
2:34 PM
ಕೃಷಿ ಚಟುವಟಿಕೆಯ ವೇಳೆ ಈಗ ಎಚ್ಚರ ಇರಬೇಕಾದ್ದು ಅಗತ್ಯ ಇದೆ. ಹಾವು ಕಡಿತಕ್ಕೆ ಒಳಗಾಗದಂತೆ ವಹಿಸಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಏನು ?

ಬಿಸಲಿನ ಕಾವು ಏರುತ್ತಿದೆ. ವಾತಾವರಣದ ಉಷ್ಣತೆ ಏರುತ್ತಿದೆ. 30 ಡಿಗ್ರಿ ಕಳೆದು 34 ಡಿಗ್ರಿಯವರೆಗೂ ಉಷ್ಣತೆ ಏರುತ್ತಿದೆ, ಸಹಜವಾಗಿಯೇ ವಾತಾವರಣದಲ್ಲಿ ಹ್ಯಮುಡಿಟಿ ಕಡಿಮೆಯಾಗುತ್ತಿದೆ. ಮನುಷ್ಯರಿಂದ ತೊಡಗಿ ಪ್ರಾಣಿಗಳವರೆಗೂ ಬಾಯಾರಿ ನೀರಿಗಾಗಿ ಹಾತೊರೆಯುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ತಂಪು ತಂಪಾಗಿರಲಿ ಎಂದು ಭಾವಿಸುತ್ತೇವೆ. ಪ್ರಾಣಿಗಳು, ಸರಿಸೃಪಗಳು ಕೂಡಾ ತಂಪನ್ನು ಈಗ ಹೆಚ್ಚು ಆಶ್ರಯಿಸುತ್ತವೆ. ಹೀಗಾಗಿ ಈಗ ಕೃಷಿಕರೂ ಎಚ್ಚರ ಇರಬೇಕಾದ್ದು ತೋಟಕ್ಕೆ ತೆರಳುವಾಗ. ಈ ಹೊತ್ತಲ್ಲಿ ವಿಷ ಜಂತುಗಳಲ್ಲಿ ವಿಷದ ಪ್ರಮಾಣವೂ ಹೆಚ್ಚಾಗಿದ್ದರೆ, ಶುಷ್ಕವಾಗುತ್ತಿರುವ ಮನುಷ್ಯ, ಪ್ರಾಣಿಗಳ ದೇಹದಲ್ಲೂ ವಿಷ ಬೇಗನೆ ಏರುತ್ತದೆ. ಹೀಗಾಗಿ ರೈತರು ತೋಟದಲ್ಲಿ ಎಚ್ಚರದಿಂದ ಇರಬೇಕು. ರೈತರೊಬ್ಬರು ಎಚ್ಚರಿಸಿದ ಬರಹ ಇಲ್ಲಿದೆ…

Advertisement
Advertisement

ಈಗ ಬಿರುಬೇಸಗೆಯ ಕಾಲ.ಮಧ್ಯಾಹ್ನ ಕಾಲದ ಬಿಸಿ ಎಷ್ಟಿರುತ್ತದೆ ಅಂತ ಕೃಷಿಕ ಮಿತ್ರರಿಗಂತೂ ಅನುಭವ ಇದೆಯಲ್ಲಾ? ಈ ಬೇಸಗೆಯ ಬಿಸಿ, ಹಾವುಗಳನ್ನು ತಣ್ಣನೆಯ ತಂಪಿರುವ ಜಾಗಕ್ಕೆ ಸೆಳೆಯುತ್ತದೆ. ಮೇಲಾಗಿ ಈ ಬೇಸಗೆ ಅವಕ್ಕೆ ಪ್ರಣಯ ಕಾಲ. ಸಾಯಂಕಾಲಗಳಲ್ಲಿ ರಾತ್ರಿಗಳಲ್ಲಿ ಆಹಾರ/ಜೊತೆಯನ್ನು ಅರಸಿಕೊಂಡೋ ತಿರುಗಾಟ ಹೆಚ್ಚು.ಹಾಗಾಗಿ…ಕೃಷಿಕ ಬಂಧುಗಳು.

1.ರಾತ್ರಿ ತಿರುಗಾಟದಲ್ಲಿ ಗಮ್ ಬೂಟ್ಸ್ ದಯವಿಟ್ಟು ಬಳಸಿ.
2. ಪ್ರಕಾಶಮಾನವಾದ ಟಾರ್ಚ್ ಒಂದು ಜೊತೆಗಿರಲಿ.( ಮೊಬೈಲ್ ಲೈಟ್ ಸಾಕು ಅನ್ನುವ ಅಸಡ್ಡೆ ದಯವಿಟ್ಟು ಬೇಡ)
3 ಪಂಪ್ ಶೆಡ್/ ಪಂಪ್ ಬೋರ್ಡ್ ಬಳಸುವ ಮೊದಲು ಒಮ್ಮೆ ದಯವಿಟ್ಟು ಪರಿಶೀಲಿಸಿ.
4. ಮೊಬೈಲ್ ನೋಡಿಕೊಂಡು ನಡೆಯುವ ಅಭ್ಯಾಸ ಇದ್ದರೆ ದಯವಿಟ್ಟು ಕಡಿಮೆ ಮಾಡಿ.
5. ತೋಟದಲ್ಲಿ ಬಲ್ಲೆ ಹುಲ್ಲು ಇದ್ದರೆ ಅಡಿಕೆ ತೆಂಗಿನ ಮರದ ಬುಡಕ್ಕೋ ಕೈ ಹಾಕುವಾಗ ನಡೆದಾಡುವಾಗ ದಯವಿಟ್ಟು ಜಾಗ್ರತೆಯಿಂದಿರಿ.
6. ಕಟ್ಟಿಗೆ ರಾಶಿ ಸೊಪ್ಪಿನ ರಾಶಿಗೆ ನೇರವಾಗಿ ಕೈ ಹಾಕದಿರಿ. ಕೋಲಲ್ಲಿ ಶಬ್ದ ಮಾಡಿ ಪರಿಶೀಲಿಸಿ.
7. ಸಾಧ್ಯ ಆದಷ್ಟು ಹಾವುಗಳನ್ನ , ಅವುಗಳ ನಡವಳಿಕೆಯನ್ನ ಗುರುತಿಸಲು ಕಲಿಯಿರಿ. ಹಾವುಗಳ ಗುರುತಿಸುವಿಕೆ, ಒಂದು ವೇಳೆ ಅನಾಹುತವಾದಲ್ಲಿ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅನ್ನುವುದು ನೆನಪಿನಲ್ಲಿರಲಿ.
8. ಒಂದು ವೇಳೆ ಸುರಕ್ಷಾ ಕ್ರಮಗಳನ್ನು ಅನುಸರಿಸಿಯೂ ಅನಾಹುತವಾದಲ್ಲಿ ದಯವಿಟ್ಟು ಅಸಡ್ಡೆ ಬೇಡ. ತೆಕ್ಕೊಳ್ಳಬೇಕಾದ ಪ್ರಥಮ ಚಿಕಿತ್ಸೆ / ವೈದ್ಯಕೀಯ ನೆರವಿನ ಬಗ್ಗೆ ದಯವಿಟ್ಟು ಅರಿವಿರಲಿ. ಅಡಿಕೆಯೋ ಕಾಯಿಯೋ ಹೋದರೆ ಬರುವ ವರ್ಷ ಸಿಕ್ಕೀತು.. ಜೀವ ಬರಲಾರದು ಹಿಂದೆ ಅನ್ನುವುದು ಅರಿವಿರಲಿ.

ಹಾವು ಕಡಿತ ಹಾಗೂ ಎಚ್ಚರಿಕೆಗಳು : ಹಾವು ಕಡಿತವು  ಬಡತನ ಹಾಗೂ ಮಧ್ಯಮ ವರ್ಗದ ಜನರಿಗೆ ತೀರಾ ತಲೆನೋವಿನ, ಆರ್ಥಿಕ ಶಕ್ತಿಯನ್ನೇ ಕುಂಠಿತ ಮಾಡುವ ಸಮಸ್ಯೆಯಾಗಿದೆ. ವಿಶ್ವಾದ್ಯಂತ ಅಂದಾಜು 1.8–2.7 ಮಿಲಿಯನ್ ಜನರು ವಾರ್ಷಿಕವಾಗಿ ಹಾವು ಕಡಿತಕ್ಕೆ ಒಳಗಾಗುತ್ತಾರೆ. ಆಗ್ನೇಯ ಏಷ್ಯಾ ಪ್ರದೇಶವು ವಿಷಪೂರಿತ ಹಾವುಗಳ ಜೀವವೈವಿಧ್ಯದ ಹಾಟ್‌ಸ್ಪಾಟ್. ಇದೇ ಪ್ರದೇಶವೂ  ಕೃಷಿ ಸಮುದಾಯಗಳಿಗೆ ನೆಲೆಯಾಗಿದೆ. ಅಂದಾಜು ಜಾಗತಿಕವಾಗಿ ಹಾವು ಕಡಿತದಿಂದ ಸುಮಾರು 70% ಸಾವುಗಳಿಗೆ  ಹಾವು ಕಡಿತಗಳು ಕಾರಣವಾಗುತ್ತದೆ. ಪ್ರತಿ ವರ್ಷ ಹಾವು ಕಡಿತದ 0.77-1.24 ಮಿಲಿಯನ್ ಪ್ರಕರಣಗಳಿಂದ 58 000 ಸಾವುಗಳು ಸಂಭವಿಸುತ್ತವೆ ಎಂದು ಭಾರತದ ಸಂಶೋಧನೆಯು ಸೂಚಿಸುತ್ತದೆ.

ಹಾವು ಕಡಿತದ ಹೆಚ್ಚಿನ ಸಾವುಗಳು ಮತ್ತು ಗಂಭೀರ ಪರಿಣಾಮಗಳನ್ನು ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯಿಂದ ಹಾಗೂ ಮುನ್ನೆಚ್ಚರಿಕಾ ಕ್ರಮಗಳಿಂದ ತಡೆಯಬಹುದು. ಅರಿವಿನ ಕೊರತೆ, ಸೂಕ್ತ ಚಿಕಿತ್ಸೆಗಳಿಗೆ ಮಾಹಿತಿಗಳು ಅಗತ್ಯ ಇದೆ. ಇದಕ್ಕಾಗಿ ಆಕಸ್ಮಿಕವಾಗಿ ಹಾವು ಕಡಿತಕ್ಕೆ ಒಳಗಾದರೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಚಿಕಿತ್ಸೆಗೆ ಒಳಪಡಿಸಬೇಕು.ಚಿಕಿತ್ಸೆ ಲಭ್ಯವಾಗುವವರೆಗೆ ಧೈರ್ಯ, ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹಾಗೂ ವಿಷದ ಪ್ರಮಾಣ ತಗ್ಗಿಸುವ ಕೆಲವೊಂದು ಚಿಕಿತ್ಸೆಗಳಿಗೆ ಆದ್ಯತೆ ನೀಡಬೇಕು.

Advertisement

Care should be taken not to get bitten by snakes during agricultural activities. Farmers need information about the steps that can be taken for this.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group