ಕೃಷಿ ಏಳು-ಬೀಳುಗಳ ನಡುವೆ ಸಮತೋಲನ ಹೇಗೆ | ಕೃಷಿಕ ಟಿ ಆರ್‌ ಸುರೇಶ್ಚಂದ್ರ ಬರೆಯುತ್ತಾರೆ… |

September 21, 2022
8:37 PM

ದೊಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುತ
ತೆರೆಯ ಮೇಗಡೆ ಸಾಗಲೀ..
ನಾವು ಲೀಲಾ ಮಾತ್ರ ಜೀವರು
ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ
ಇರಲಿ ನಾಳೆಯು ನಾಳೆಗೇ…

Advertisement

ಕೃಷಿ(Agriculture) ಬದುಕು ಇಷ್ಟೇ ಅಲ್ವೇ… ,ಹೌದು…. , ಅದರಿಂದಾಚೆಗಿನ ದಿನಗಳು ನಮ್ಮದಾಗಬೇಕಾದರೆ ಪ್ರಕೃತಿಯೊಂದಿಗೆ ಹೊಂದಿ ಸಾಗುವ ಮನಪರಿಸ್ಥಿತಿ ನಮಗಿರಬೇಕು. ಮಳೆ,ಗಾಳಿ, ರೋಗಗಳು,ಬರಗಾಲ ಇದೆಲ್ಲ ಕಾಣದ ,ಊಹಿಸಲಾರದ ಸಮಸ್ಯೆಗಳು. ಅದನ್ನು ಸಹಿಸಿಕೊಳ್ಳುವ, ಎದುರಿಸುವ ಪ್ರಯತ್ನ ನಮ್ಮಲ್ಲಿದ್ದಾಗ ಏಳು ಬೀಳುಗಳಲ್ಲೊಂದು ಲಯ ಕಾಣಬಹುದು.

ಕೃಷಿಕರಾದವರಿಗೆ ಕೆಲವು ಸೂತ್ರಗಳು ಅತೀ ಅಗತ್ಯ. ಅದು ಯಶಸ್ಸಿನ ಸೂತ್ರವೂ ಹೌದು.

13 ಸೂತ್ರಗಳು....
  • ಪ್ರತಿ ವರ್ಷವೂ ಅಡಿಕೆ/ತೆಂಗು/ಕಾಳುಮೆಣಸು ಗಿಡಗಳನ್ನು ಮಾಡಿಟ್ಟುಕೊಳ್ಳಲೇಬೇಕು.
  • ಪ್ರತೀ ವರ್ಷ ಖಾಲಿಯಾದ ಜಾಗಕ್ಕೆ ಸಮಯಕ್ಕನುಗುಣವಾಗಿ ಎಡೆ ಗಿಡಗಳನ್ನು ನೆಡಲೇಬೇಕು.
  • ಬಸಿಗಾಲುವೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.
  • ವೈಜ್ಞಾನಿಕವಾಗಿ, ಪ್ರಕೃತಿಗೆ ಹಾನಿಯಾಗದಂತೆ ಗೊಬ್ಬರ ನಿರ್ವಹಣೆ ಮಾಡಬೇಕು.
  • ಕಾಲಕಾಲಕ್ಕೆ ರೋಗ ನಿರೋಧಕ ವ್ಯವಸ್ಥೆಗಳನ್ನು ಗಮನವಿಟ್ಟು ನಿರ್ವಹಿಸಲೇಬೇಕು.
  • ಸರಿಯಾದ, ಅತಿಯಾಗದ ನೀರಾವರಿ ವ್ಯವಸ್ಥೆ ಮಾಡಬೇಕು.
  • ಸ್ವಂತ ನರ್ಸರಿ ಬಗ್ಗೆ ಸರಿಯಾದ ತಿಳುವಳಿಕೆ ಪಡಕೊಳ್ಳಬೇಕು.
  • ಹಣಕಾಸಿನ ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಬೇಕು.
  • ಕೃಷಿ/ವ್ಯವಹಾರ/ಮುಂತಾಗಿ ಸ್ವಂತ ತೀರ್ಮಾನ ಮಾಡುವಂತಿರಬೇಕು.
  • ಹತ್ತಾರು ತೋಟ, ಕೃಷಿ ಕ್ರಮಗಳನ್ನು ನೋಡಬೇಕು, ವಿಮರ್ಶಿಸಬೇಕು.
  • ಎಲ್ಲಕ್ಕಿಂತಲೂ ಹೆಚ್ಚು ನಮ್ಮ ತೋಟದೊಳಗೆ ದಿನಕ್ಕೆರಡು ಸುತ್ತು ಓಡಾಡಲೇಬೇಕು.
  • ಸದಾ ಜಾಗೃತನಾಗಿರಬೇಕು.
  • ಕೃಷಿ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಂಡು ಕಾಲಕಾಲಕ್ಕೆ ಕೆಲಸ ಕಾರ್ಯಗಳು ಆಗುವಂತೆ ನೋಡಿಕೊಳ್ಳಬೇಕು

ಅಂತೂ ಕೃಷಿ ಎನ್ನುವಂತಹದ್ದೂ ಒಂದು ಉದ್ಯಮ, ಸಮಯ ಪ್ರಕಾರದ ಕೆಲಸ ನಿರ್ವಹಣೆ ಅತೀ ಮುಖ್ಯ ಎನ್ನುವುದನ್ನು ಗಮನವಿರಿಸಿ ನಡೆದರೆ ಏಳು ಬೀಳುಗಳನ್ನು ಸಹಿಸುತ್ತಾ ಸಾಗಬಹುದು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನೀವೀಗ ಕಾಳುಮೆಣಸು ಕೃಷಿ ಆಸಕ್ತರೇ….?, ಹಾಗಿದ್ದರೆ ಗಮನಿಸಿ….| ಕಾಳುಮೆಣಸು ಕೃಷಿಯ ಕಾರ್ಯ ಚಟುವಟಿಕೆಗಳು
July 9, 2025
2:25 PM
by: ಅರುಣ್‌ ಕುಮಾರ್ ಕಾಂಚೋಡು
ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?
July 8, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಬದುಕು ಪುರಾಣ | ದಾನಕ್ಕೆ ಬಂದ ಮಾನ 
July 6, 2025
8:00 AM
by: ನಾ.ಕಾರಂತ ಪೆರಾಜೆ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಚಂದನ್‌ ಕೆ ಪಿ
July 5, 2025
11:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group