ಕೇಂದ್ರ ಸರ್ಕಾರ ಹೊಸದಾಗಿ ಮಂಡನೆ ಮಾಡಿರುವ ಕೃಷಿ ಮಸೂದೆಗಳಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಅಖಿಲ ಭಾರತ ರೈತ ಸಂಘಟನೆಗಳ ಒಕ್ಕೂಟ ಹೇಳಿದೆ.
Advertisement
ಈ ಕಾಯ್ದೆಯ ಮೂಲಕ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮುಕ್ತ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ರಾಜ್ಯದ ಗಡಿಯಾಚೆಗೂ ಸುಲಭವಾಗಿ, ಯಾವುದೇ ನಿಬಂಧನೆಗಳು ಇಲ್ಲದೆಯೇ ತಮ್ಮ ಬೆಳೆಗಳನ್ನು ಮಾರಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ತಮ್ಮ ಉತ್ಪನ್ನಗಳ ಮಾರಾಟಗಾರರು ತಾವೇ ಆಗಲು ಅವಕಾಶ ಕಲ್ಪಿಸಿದೆ ಎಂದು ಒಕ್ಕೂಟ ತಿಳಿಸಿದೆ.
Advertisement
ಈ ಹೊಸ ಕೃಷಿ ಕಾಯ್ದೆಗಳ ಮೂಲಕ ಕೇಂದ್ರ ಸರ್ಕಾರ ರೈತರ ಸಬಲೀಕರಣಕ್ಕೆ ಮುಂದಾಗಿದೆ. ಈ ಮಸೂದೆ ರೈತರ ಆದಾಯ ಹೆಚ್ಚಳಕ್ಕೂ ಸಹಕಾರಿಯಾಗಲಿದೆ. ಈ ಎರಡು ಹೊಸ ಮಸೂದೆಗಳು ರೈತರ ಅಭಿವೃದ್ಧಿಗೆ ಸುಸ್ಥಿರ ಮತ್ತು ಲಾಭದಾಯಕ ಭವಿಷ್ಯವನ್ನು ಖಾತರಿಪಡಿಸುತ್ತದೆ ಎಂದೂ ಒಕ್ಕೂಟ ಅಭಿಪ್ರಾಯ ವ್ಯಕ್ತಪಡಿಸಿದೆ.
ರೈತರು ತಮ್ಮ ಉತ್ಪನ್ನಗಳ ಮೇಲೆ ತಾವೇ ನಿಯಂತ್ರಣ ಹೊಂದಲಿದ್ದಾರೆ. ರಾಜ್ಯ, ಅಂತರರಾಜ್ಯಗಳಲ್ಲಿ ತಮ್ಮಿಷ್ಟದ ಪ್ರಕಾರವೇ ಖರೀದಿ ಮತ್ತು ಮಾರಾಟ ಮಾಡಲು ಅವಕಾಶ ದೊರೆತಂತಾಗಿದೆ. ರೈತರ ವಿಚಾರದಲ್ಲಿ ಕೇಂದ್ರ ಸರ್ಕಾರದ ಈ ನಿಲುವು ದೂರದೃಷ್ಟಿಯುಳ್ಳದ್ದಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ವಿ. ಜವರೇಗೌಡ ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement