ಅಡಿಕೆ ಕೃಷಿಯೊಂದೇ ಅಲ್ಲ…! | ಇದೊಂದು ಕೃಷಿಯ ಕಡೆಗೂ ಲಕ್ಷ್ಯ ವಹಿಸಬೇಕು ಕೃಷಿಕರು… |

June 2, 2023
12:20 PM

ಕರಾವಳಿ ಹಾಗೂ ಮಲೆನಾಡಲ್ಲಿ ಅಡಿಕೆ ಕೃಷಿಯೇ ಫೇಮಸ್ಸು. ಇದೀಗ ವಿಸ್ತರಣೆಯ ವೇಗ ಹೆಚ್ಚಿ ರಾಜ್ಯದ ವಿವಿಧ ಜಿಲ್ಲೆಗಳಿಗೂ ತಲಪಿದೆ, ತಮಿಳುನಾಡು, ಆಂಧ್ರಪ್ರದೇಶಕ್ಕೂ ವ್ಯಾಪಿಸಿದೆ. ಅಡಿಕೆ ಮಾತ್ರ ಅಲ್ಲ, ಹಲವು ಕಡೆ ಒಂದೇ ಬಗೆಯ ಕೃಷಿಯನ್ನೇ ಕೃಷಿಕರು ನೆಚ್ಚಿರುತ್ತಾರೆ. ಹೊಸ ಕೃಷಿಯ ಕಡೆ ಮನಸ್ಸು ಮಾಡುವವರು ಕಡಿಮೆ.  ವಾಣಿಜ್ಯ ಬೆಳೆಯ ಹೊರತಾದ ಕೃಷಿಯ ಕಡೆಗೆ ಈಚೆಗೆ ಕೆಲವರು ಮಾತನಾಡುತ್ತಿದ್ದಾರೆ.  ದೆಹಲಿಯ ರೈತನೊಬ್ಬ ಈಗ ಹಣ್ಣು, ತರಕಾರಿ, ಔಷಧಿ ಕೃಷಿಯ ಕಡೆಗೆ ಮನಸ್ಸು ಮಾಡಿ ಯಶಸ್ಸು ಕಂಡಿದ್ದಾರೆ. 

Advertisement

ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳತ್ತಾ ವಾಲುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿಯಿಂದ  ಹೆಚ್ಚೇನು ಲಾಭ ಸಿಗದ ಕಾರಣ ಅನ್ನದಾತರು ಹೆಚ್ಚಾಗಿ ತೋಟಗಾರಿಕೆಗೆ ಮುಂದಾಗಿದ್ದಾರೆ. ಹಣ್ಣುಗಳು, ತರಕಾರಿಗಳು, ಔಷಧಿ ಗಿಡಗಳ​ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಅಂತಹ ಬೆಳೆಗಳಲ್ಲಿ ನಮ್ಮ ಮನೆ ಸುತ್ತ ಬೆಳೆಯುವ ತುಳಸಿ ಬೆಳೆಯು ಒಂದು. ಈ ಕೃಷಿಯಿಂದ ಆದಾಯ ಗಳಿಸಬಹುದು. ತುಳಸಿಯನ್ನು ಬೆಳೆಸಲು ಹೆಚ್ಚಿನ ಬಂಡವಾಳವೂ ಬೇಕಾಗಿಲ್ಲ. ಇದರೊಂದಿಗೆ ಇದಕ್ಕೆ ಸಾಕಷ್ಟು ಬೇಡಿಕೆಯೂ ಇದೆ. ಇಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ತುಳಸಿ ಗಿಡ  ಇದೆ. ಇದಲ್ಲದೇ ಔಷಧಿಗಳಲ್ಲಿ, ಪೂಜೆಯಲ್ಲಿ ಹೀಗೆ ಹಲವು ವಿಧಗಳಲ್ಲಿ ಬಳಸುತ್ತಾರೆ. ತುಳಸಿ ಕೃಷಿಯ ಮೂಲಕ ಹೇಗೆ ಆದಾಯ ಗಳಿಸಬಹುದು?.

ಆಯುರ್ವೇದ ಮತ್ತು ನೈಸರ್ಗಿಕ ಔಷಧಗಳತ್ತ ಜನರ ಒಲವು ಹೆಚ್ಚುತ್ತಿದ್ದು, ಈ ಕಾರಣದಿಂದಾಗಿ ಅವರ ಬೇಡಿಕೆಯಲ್ಲಿ ಸಾಕಷ್ಟು ಹೆಚ್ಚಳ ಕಂಡು ಬರುತ್ತಿದೆ. ಈಗಿನ ಕಾಲದಲ್ಲಿ ಮಾರುಕಟ್ಟೆ ವಿಸ್ತಾರಗೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ,  ಔಷಧೀಯ ಸಸ್ಯಗಳನ್ನು ಬೆಳೆಸುವ ವ್ಯವಹಾರವನ್ನು ಪ್ರಾರಂಭಿಸಿದರೆ, ಅದು  ತುಂಬಾ ಪ್ರಯೋಜನಕಾರಿ. ಸರಿಯಾದ ಯೋಜನೆ ಹಾಗೂ ಯೋಜನೆಯನ್ನು ರೂಪಿಸಬೇಕಷ್ಟೆ.ತುಳಸಿ ಕೃಷಿ ಪ್ರಾರಂಭಿಸಲು ಬಹಳಷ್ಟು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಅಲ್ಲದೆ, ಇದಕ್ಕಾಗಿ  ದೀರ್ಘ ಮತ್ತು ವಿಶಾಲವಾದ ಕೃಷಿ ಭೂಮಿಯ ಅಗತ್ಯವೂ ಇಲ್ಲ. ಕೆಲವು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕವೂ  ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಅನೇಕ ಆಯುರ್ವೇದ ಕಂಪನಿಗಳು ತುಳಸಿಯನ್ನು ಕೊಳ್ಳುತ್ತವೆ.

ಬಾರಾಬಂಕಿ ಜಿಲ್ಲೆಯ ತೆಹಸಿಲ್ ಫತೇಪುರ್ ಪ್ರದೇಶದ ಬಂಭನಪುರ ಗ್ರಾಮದ ರೈತ ರಾಜೇಶ್ ವರ್ಮಾ, ಔಷಧೀಯ ಕೃಷಿಯ ಮೂಲಕ ಗಮನಸೆಳೆದಿದ್ದಾರೆ. ತುಳಸಿ ಬೇಸಾಯದಿಂದ ಕೇವಲ 20 ಗುಂಟೆ ಜಾಗದಲ್ಲಿ ಕೃಷಿ ಆರಂಭಿಸಿದ್ದರು. ನಂತರ ರೈತ ರಾಜೇಶ್ ವರ್ಮಾ ಅವರು ಸುಮಾರು 4  ಸಾಲುಗಳಲ್ಲಿ ತುಳಸಿ ಕೃಷಿ ಮಾಡುವ ಮೂಲಕ ಒಂದೇ ಬೆಳೆಯಲ್ಲಿ 2 ಲಕ್ಷ ರೂ.ವರೆಗೆ  ಗಳಿಸುತ್ತಿದ್ದಾರೆ. ರಾಜೇಶ್ ವರ್ಮಾ ಅವರ ಔಷಧೀಯ ಕೃಷಿ ನೋಡಿ ಗ್ರಾಮದ ಹಲವು ರೈತರು ತುಳಸಿ ಕೃಷಿಗೆ ಮುಂದಾಗಿದ್ದಾರೆ.

ಈ ಹಿಂದೆ ಸಾಂಪ್ರದಾಯಿಕ ಕೃಷಿಯಲ್ಲಿ ಹೆಚ್ಚಿನ ಲಾಭ ಸಿಗದೇ ತೀವ್ರ ನೊಂದಿದ್ದೆವು ಎನ್ನುತ್ತಾರೆ ತುಳಸಿ ಕೃಷಿ ಮಾಡುತ್ತಿರುವ ರೈತ ರಾಜೇಶ್ ವರ್ಮಾ. ನಮಗೆ ಈ ಔಷಧೀಯ ಕೃಷಿಯ ಬಗ್ಗೆ ಎಲ್ಲಾ ಮಾಹಿತಿ ಸಿಕ್ಕಿತು, ಅಂದಿನಿಂದ ತುಳಸಿ ಬೇಸಾಯವನ್ನು ಪ್ರಾರಂಭಿಸಿದೆವು, ಒಂದು ಎರಡುವರೆ ಎಕರೆಯಲ್ಲಿ 15 ಸಾವಿರದಷ್ಟು ಖರ್ಷು ಮಾಡಿದರೆ 2.5- 3 ಲಕ್ಷ ರೂಪಾಯಿ ಸಿಗುತ್ತದೆ ಎಂದು ತಿಳಿಸಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ
April 14, 2025
7:28 AM
by: ದ ರೂರಲ್ ಮಿರರ್.ಕಾಂ
ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ
April 14, 2025
6:20 AM
by: The Rural Mirror ಸುದ್ದಿಜಾಲ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ
April 14, 2025
6:16 AM
by: The Rural Mirror ಸುದ್ದಿಜಾಲ
ಈ 5 ವಸ್ತು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುವುದು ಗ್ಯಾರಂಟಿ
April 14, 2025
6:06 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group