ಅಡಿಕೆ ಕೊಳೆರೋಗಕ್ಕೆ ಬೋರ್ಡೋದಲ್ಲಿ ಹೊಸಪೀಳಿಗೆಯ ಕಾಪರ್ ಸಲ್ಪೇಟ್ ಬಗ್ಗೆ ಮಾಹಿತಿ ಹಾಗೂ ಅಡಿಕೆ ಕೊಯಿಲು ಹಾಗೂ ಬೋರ್ಡೋ ಸಿಂಪಡಣೆಗೆ ಸುಧಾರಿತ ಫೈಬರ್ ದೋಟಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ಎ.3 ರಂದು ಪುತ್ತೂರಿನ ತೆಂಕಿಲದ ಚುಂಚಶ್ರೀ ಸಭಾಭವನದಲ್ಲಿ ನಡೆಯಲಿದೆ.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ಯುಪಿಎಲ್ ಲಿಮಿಟೆಡ್ ಮುಂಬಯಿ ಇವರ ಸಹಕಾರದಲ್ಲಿ ಎ.3 ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹೊಸ ಪೀಳಿಗೆಯ ಕಾಪರ್ ಸಲ್ಫೇಟ್ ಬಗ್ಗೆ ಮಾಹಿತಿ ಹಾಗೂ ತಂತ್ರಜ್ಞಾನದ ಪರಿಚಯ ನಡೆಯಲಿದೆ. ಅದರ ಜೊತೆಗೆ ಸುಮಾರು 8 ತಿಂಗಳು ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಜೋಳದ ತ್ಯಾಜ್ಯದಿಂದ ತಯಾರಿಸಿದ ಉತ್ಪನ್ನದ ಪರಿಚಯವೂ ನಡೆಯಲಿದೆ. ಇದೇ ವೇಳೆ ಅಡಿಕೆ ಮರ ಏರದೆ ಔಷಧಿ ಸಿಂಪಡನೆ ಹಾಗೂ ಅಡಿಕೆ ಕೊಯಿಲಿಗೆ ಅಗತ್ಯವಾದ ಸುಧಾರಿತ ಫೈಬರ್ ದೋಟಿಯ ಬಗ್ಗೆ ಮಾಹಿತಿಯನ್ನು ಎಂಜಿನಿಯರ್ ಆಗಿರುವ ಬಾಲಸುಬ್ರಹ್ಮಣ್ಯ ಅವರು ನೀಡಲಿದ್ದಾರೆ. ಆಸಕ್ತ 100 ಕೃಷಿಕರಿಗೆ ಮಾತ್ರಾ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರಕಟಣೆ ತಿಳಿಸಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement