ಕೈ ಕೆಸರಾದರೆ ಬಾಯಿ ಮೊಸರು ಬಹಳ ಹಳೆಯ ಗಾದೆ ಮಾತು. ಈಗ ಕೈ ಕೆಸರಾದರೆ ಬಾಯಿ ಮೊಸರು ಎನ್ನಲು ಕೆಲ ಕಾಲ ಬೇಕಾಗುತ್ತದೆ. ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಕೃಷಿ ಫಲ ನೀಡಿದರೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೃಷಿ ಉಳಿಸುವುದೇ ಈಗ ಹಲವು ಕಡೆ ಕೃಷಿಕರಿಗೆ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಕಾಡು ಪ್ರಾಣಿಗಳ ಹಾವಳಿ, ಅದರಲ್ಲೂ ಕಾಡಾನೆ ಹಾವಳಿ.
ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಕಾಡಾನೆ ಹಾವಳಿ ಇದೆ. ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಹಾವಳಿ ತೀವ್ರವಿದೆ. ಹಗಲು ಹೊತ್ತಿನಲ್ಲಿಯೇ ಕಾಡಾನೆ ಕಾಣ ಸಿಗುತ್ತದೆ. ಈಚೆಗೆ ಆನೆಗಳ ಹಿಂಡೇ ಕಂಡುಬಂದಿತ್ತು. ಅದೇ ಮಾದರಿಯ ಪರಿಸ್ಥಿತಿ ಈಗ ಕೊಲ್ಲಮೊಗ್ರ , ಬಾಳುಗೋಡು, ಕಲ್ಮಕಾರು, ಕಟ್ಟ ಪ್ರದೇಶದಲ್ಲಿ ಕಂಡುಬಂದಿದೆ. ಕಾಡಾನೆ ಮಾತ್ರವಲ್ಲ ಕಾಡುಕೋಣ, ಕಾಡೆಮ್ಮೆ, ಕಡವೆ, ಮಂಗಗಳ ಕಾಟವೂ ಸುಳ್ಯ ತಾಲೂಕಿನ ಕೃಷಿಕರಿಗೆ ವಿಪರೀತವಾಗಿ ಹಲವು ವರ್ಷಗಳಿಂದ ಬಾಧಿಸುತ್ತಿದೆ. ಇತ್ತೀಚೆಗೆ ಮಂಗಗಳ ಕಾಟಗಳಿಂದ ತೆಂಗಿನಕಾಯಿ ಫಸಲೇ ಕಡಿಮೆಯಾಗಿದೆ. ಈಗ ಆನೆಗಳ ಕಾಟದಿಂದ ಕೃಷಿಕರ ಬದುಕಿನ ಬೆಳೆಯಾದ ಅಡಿಕೆ, ತೆಂಗು ಕೂಡಾ ನಾಶವಾಗುತ್ತಿದೆ.
ಕೊಲ್ಲಮೊಗ್ರ , ಕಟ್ಟ ಪ್ರದೇಶದಲ್ಲಿ ಈಚೆಗ ಕಾಡಾೆನೆಗಳ ಹಾವಳಿ ಹೆಚ್ಚಾಗಿದ್ದು ಚೆನ್ನಾಗಿ ಬೆಳೆದಿರುವ ಕೃಷಿ ಕೈಗೆ ಸಿಗುವ ಮೊದಲೇ ಕಾಡು ಪ್ರಾಣಿಗಳಿಂದ ಹಾನಿಗೊಳಗಾಗುತ್ತಿದೆ. ಕಟ್ಟದ ಶಂಕರ ಭಟ್ ಎಂಬವರ ತೋಟಕ್ಕೆ ಈಚೆಗೆ ಕಾಡಾನೆ ದಾಳಿ ಮಾಡಿ ಅಡಿಕೆ, ಬಾಳೆ, ತೆಂಗು ಸಹಿತ ಕೃಷಿಯನ್ನು ನಾಶ ಮಾಡಿದೆ. ಕೃಷಿ ಮಾಡಿ ಫಸಲು ಬರುವ ಹೊತ್ತಿಗೆ ಹೀಗೆ ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿ ನಾಶವಾದರೆ ಕೃಷಿಕನ ವೇದನೆ ಯಾರ ಬಳಿ ಹೇಳುವುದು ? ಕೃಷಿ ನಾಶದ ಚಿತ್ರಣವೇ ಭಯಾನಕವಾಗಿದೆ. ಅನೇಕ ವರ್ಷಗಳ ಶ್ರಮ ವ್ಯರ್ಥವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಇಲಾಖೆಗಳಿಗೆ, ಸರಕಾರಕ್ಕೆ, ಜನನಾಯಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೃಷಿ ನಾಶಕ್ಕೆ ಸೂಕ್ತ ಪರಿಹಾರ ಕ್ರಮದ ಬಗ್ಗೆ ಈಗ ಚಿಂತನೆ ನಡೆಯಬೇಕಿದೆ. ಸುಳ್ಯದ ಸಚಿವರೇ ಈಗ ಇರುವುದರಿಂದ ಸೂಕ್ತ ಕ್ರಮಕ್ಕಾಗಿ ಸರಕಾರವನ್ನು ಒತ್ತಾಯ ಮಾಡಬೇಕು ಎಂದು ಕೃಷಿಕರು ಹೇಳುತ್ತಾರೆ.
ವಿವಿದೆಡೆ ತೋಟದಲ್ಲಿ ಓಡಾಡುವ ಕಾಡೆಮ್ಮೆ ಹಾಗೂ ಆನೆಗಳು ಹಿಂಡುಗಳ ವಿಡಿಯೋ :
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾಟವು ಮಂಗಳೂರು ಟೌನ್ ಹಾಲ್ ನಲ್ಲಿ…
ರಾಜ್ಯದ ಬಹುತೇಕ ಕಡೆಗಳಲ್ಲಿ ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಈಗಿನಂತೆ…
ರಾಜ್ಯದಲ್ಲಿ ಈ ಬಾರಿ ಅಡಿಕೆ ಬೆಳೆಗೆ ಉತ್ತಮ ಧಾರಣೆ ಲಭಿಸುವ ನಿರೀಕ್ಷೆ ಇದೆ.…
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವ ಕಲಾವಿದ ಮಿಥುನ್ ಕುಮಾರ್ ಸೋನ…
ಮುಂದಿನ 7 ದಿನಗಳವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಉತ್ತರ ಒಳನಾಡಿನ…