ವಿದ್ಯುತ್‌ ಬಾರದ ಪ್ರದೇಶದಲ್ಲಿ ಸೋಲಾರ್‌ ಪಂಪ್‌ | ಕೃಷಿಯಲ್ಲಿ ಯಶಸ್ಸು ಕಂಡ ಕೃಷಿಕ |

August 25, 2024
11:59 AM

ಇಂದು ಕೃಷಿ ಬೆಳವಣಿಗೆಗೆ ವಿದ್ಯುತ್‌ ಕೂಡಾ ಅನಿವಾರ್ಯವಾಗಿದೆ. ಕೃಷಿಗೆ ಸರಿಯಾಗಿ ನೀರುಣಿಸಲು ಪಂಪ್‌ ಅಗತ್ಯ, ಪಂಪ್‌ ಚಾಲೂ ಆಗಲು ಸಾಮಾನ್ಯವಾಗಿ ವಿದ್ಯುತ್‌ ಅಗತ್ಯ. ಆದರೆ ವಿದ್ಯುತ್‌ ತಂತಿ ಅಳವಡಿಕೆ ಮಾಡಲಾಗದ ಪ್ರದೇಶದಲ್ಲಿ ಕೃಷಿ ಬೆಳವಣಿಗೆ ಹೇಗೆ ? ಸೋಲಾರ್‌ ಪಂಪ್‌ ಅಳವಡಿಕೆ ಮೂಲಕ ಒರಿಸ್ಸಾದ ಹಳ್ಳಿ ಪ್ರದೇಶದ ಕೃಷಿಕರೊಬ್ಬರು ಯಶಸ್ಸು ಕಂಡಿದ್ದಾರೆ. …..ಮುಂದೆ ಓದಿ….

Advertisement
Advertisement

ದೇಶದಲ್ಲಿ ಕಾಡು ಪ್ರದೇಶಗಳ ನಡುವೆಯೇ ಅಥವಾ ತೀರಾ ಗ್ರಾಮೀಣ ಭಾಗದಲ್ಲಿಯೂ ಕೃಷಿ ಚಟುವಟಿಕೆ ನಡೆಯುತ್ತದೆ, ಅನೇಕರು ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಾರೆ.ಅಂತಹ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದೇ ಸಾಹಸದ ಕೆಲಸ. ಇಂತಹ ಸಂದರ್ಭದಲ್ಲಿ ಸರ್ಕಾರವು ಸೋಲಾರ್‌ ಯಂತ್ರಗಳುಗಳಿಗೆ ಆದ್ಯತೆ ನೀಡಿ ಮೂಲಭೂತ ಸೇವೆ ಒದಗಿಸುವ ಕೆಲಸ ಮಾಡುತ್ತದೆ. ಅದೇ ರೀತಿ ಒಡಿಸ್ಸಾದ ನುವಾಪದ ಜಿಲ್ಲೆಯ ಸುಣಬೇಡ ಅಭಯಾರಣ್ಯದ ನಡುವಿನ ಹಳ್ಳಿಯಲ್ಲಿ ವಾಸಿಸುವ  ವಿಜಯ್ ಝಂಕರ್ ಅವರು ಸೋಲಾರ್‌ ಪಂಪ್‌ ಮೂಲಕ ತನ್ನ ಕೃಷಿಯನ್ನು ಯಶಸ್ಸುಗೊಳಿಸಿದ್ದಾರೆ.…..ಮುಂದೆ ಓದಿ….

 

ಒರಿಸ್ಸಾದ ಸುನಬೇಡ ಪಂಚಾಯತ್‌ನ ಸುನಬಹಲಿ ಗ್ರಾಮದ ವ್ಯಾಪ್ತಿಯ ಹಳ್ಳಿಗಾಡಿನಲ್ಲಿರುವ ವಿಜಯ್ ಝಂಕರ್ ಅವರು ಭತ್ತ ಸೇರಿದಂತೆ ಇತರ ಕೃಷಿ ಮಾಡುತ್ತಾರೆ. ಸಾಕಷ್ಟು ನೀರಿದ್ದರೂ ಕೃಷಿಗೆ ನೀರುಣಿಸಲು ಕಷ್ಟವಾಗುತ್ತಿತ್ತು. ಇದಕ್ಕೆ ವಿದ್ಯುತ್‌ ಪಂಪ್‌ ಅಳವಡಿಕೆ ಮಾಡಲು ಲೈನ್‌ ಬರುವುದೇ ಕಷ್ಟದ ಕೆಲಸ. ಅರಣ್ಯ ನಡುವಿನ ದಾರಿಯಲ್ಲಿ ಬರಬೇಕಾದ್ದರಿಂದ ವಿದ್ಯುತ್‌ ತಂತಿ ಬರುವುದೇ ಅಸಾಧ್ಯವಾಗಿತ್ತು. ಇದಕ್ಕಾಗಿ ಸೋಲಾರ್‌ ಪಂಪ್‌ ಅಳವಡಿಕೆ ಸ್ಥಳೀಯ ಪಂಚಾಯತ್‌ ಹಾಗೂ ಆಡಳಿತವು ನೆರವು ನೀಡಿದೆ. ಇದೀಗ ಸೋಲಾರ್‌ ಪಂಪ್‌ ಮೂಲಕ ನೀರು ಹಾಯಿಸಿ ಕೃಷಿ ಮಾಡುತ್ತಿದ್ದಾರೆ. ಈಗ ಮಾದರಿ ಕೃಷಿಯ ಮೂಲಕ ಗಮನ ಸೆಳೆದಿದ್ದಾರೆ.

Advertisement

ದೇಶದಲ್ಲಿ ಹಲವು ಗ್ರಾಮೀಣ ಪ್ರದೇಶಗಳು ಇವೆ. ಮೂಲಭೂತ ವ್ಯವಸ್ಥೆಗೆ ಅದರಲ್ಲೂ ವಿದ್ಯುತ್‌ ಸೇರಿದಂತೆ ಇತರ ಸೌಲಭ್ಯಗಳಿಗೆ ಸರ್ಕಾರದ ನೆರವಿನಿಂದ ಸೋಲಾರ್‌ ಪಂಪ್‌ ಅಥವಾ ವಿದ್ಯುತ್‌ ಅಳವಡಿಕೆ ಕಡೆಗೆ ಗ್ರಾಮೀಣ ಆಡಳಿತ, ಸ್ಥಳೀಯಾಡಳಿತ ಯೋಚಿಸಬಹುದಾಗಿದೆ.…..ಮುಂದೆ ಓದಿ….

Electricity is crucial for the growth of agriculture today. Proper irrigation is essential for agricultural success, and this usually requires the use of a pump, which in turn requires electricity to operate. However, what can be done in areas where installing traditional electricity infrastructure is not feasible? A farmer in a village in Orissa has found success by implementing a solar pump system.

ಕೃಪೆ : ಡಿ ಡಿ

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ
May 29, 2025
7:40 AM
by: The Rural Mirror ಸುದ್ದಿಜಾಲ
ಭಾರತ್ ಮುನ್ಸೂಚನಾ ವ್ಯವಸ್ಥೆ | ಭಾರತದಿಂದ ವಿಶ್ವದ ಅತ್ಯಂತ ನಿಖರವಾದ ಹವಾಮಾನ ಮಾದರಿಗೆ ಚಾಲನೆ | ಸಣ್ಣ ಪ್ರಮಾಣದ ಹವಾಮಾನ ಸ್ಥಿತಿಗತಿಗಳ ನಿಖರವಾದ ಮಾಹಿತಿ ಲಭ್ಯ|
May 29, 2025
7:37 AM
by: ದ ರೂರಲ್ ಮಿರರ್.ಕಾಂ
ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ
May 29, 2025
7:22 AM
by: The Rural Mirror ಸುದ್ದಿಜಾಲ
14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ
May 29, 2025
7:12 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group