Advertisement
ಸಂಪಾದಕೀಯ ಆಯ್ಕೆ

2026 ರಲ್ಲಿ ಕೃಷಿ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಹಾಗೂ ಪರಿಸರ

Share

2025 ಮುಗಿಯಿತು…. 2026 ರಲ್ಲಿ ಜಾಗತಿಕ ವ್ಯವಸ್ಥೆಗಳಾಗಿರುವ ತಂತ್ರಜ್ಞಾನ, ಆರ್ಥಿಕತೆ, ಪರಿಸರ ಮತ್ತು ಸಮಾಜದಲ್ಲಿ ಗಣನೀಯ ಬದಲಾವಣೆಗಳನ್ನು ಬಯಸುವ ಕ್ಷೇತ್ರಗಳಾದರೆ, ನಾವು ಕೃಷಿ – ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಏನು..?. ಈ ಬಗ್ಗೆ ಪುಟ್ಟದಾದ ಯೋಚನೆ ಹೀಗೆ….

2026ನೇ ವರ್ಷವು ಜಾಗತಿಕ ಮತ್ತು ಭಾರತದ ಈಗಿನ ಸನ್ನಿವೇಶದಲ್ಲಿ ಕೃಷಿ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಹೀಗೆ ಮೂರು ಕ್ಷೇತ್ರಗಳು ಇಲ್ಲಿ ಹೆಚ್ಚು ಪರಿಣಾಮಗಳನ್ನು ಬೀರುವ ಕ್ಷೇತ್ರ.  ಈ ಮೂರು ಕ್ಷೇತ್ರಗಳನ್ನು ಸಮನ್ವಯಗೊಳಿಸುವ ಮೂಲಕ ಒಂದೇ ಸಮಯದಲ್ಲಿ ಗ್ರಾಮೀಣ ಆದಾಯ ಮತ್ತು ಸಮುದಾಯದ ಆರೋಗ್ಯವನ್ನೂ ಕಾಪಾಡಬಹುದು.

ಕೃಷಿ ಕ್ಷೇತ್ರದಲ್ಲಿ ಹವಾಮಾನವು ಇಂದು ಬಹಳ ಗಂಭೀರವಾದ ಪರಿಣಾಮವನ್ನು ನೀಡುತ್ತಿವೆ. ಇದಕ್ಕಾಗಿ  ಹವಾಮಾನ-ಸ್ಮಾರ್ಟ್ ಕೃಷಿ ಅಗತ್ಯವಿದೆ. ಬರಗಾಲವನ್ನು ತಡೆಯುವ ಗಿಡ, ಬೀಜಗಳ ಅಗತ್ಯ ಮತ್ತು ಜಲ ಸಂರಕ್ಷಣೆ ವಿಧಾನಗಳು ಮುಖ್ಯವಿದೆ. ಹೀಗಾಗಿ ತಂತ್ರಜ್ಞಾನ ಬಳಕೆಯ ಕಡೆಗೆ ಬಂದಾಗ ಸಂವೇದಕಗಳು, ಡ್ರೋನ್‌ಗಳು,  ಎಐ ಆಧಾರಿತ ನಿರ್ಣಯ ಉಪಕರಣಗಳು,  ಮಣ್ಣಿನ ವಿವರ ಮತ್ತು ಹವಾಮಾನದ ಮಾಹಿತಿಗಳು  ಬೆಳೆ ನಿರ್ವಹಣೆ ಸುಧಾರಿಸುತ್ತವೆ. ಇದರ ಜೊತೆಗೇ, ಗೋದಾಮು, ಶೇಖರಣಾ ತಂತ್ರಜ್ಞಾನ , ಗ್ರಾಮೀಣ ಮಾರುಕಟ್ಟೆ ಸೌಲಭ್ಯಗಳು ರೈತರಿಗೆ ವ್ಯವಸ್ಥಿತ ಆದಾಯ ನೀಡುತ್ತವೆ.
ಪರಿಸರವು ಕೂಡಾ ಗಂಭೀರವಾದ ಸ್ಥಿತಿಯಲ್ಲಿರುವುದರಿಂದ ಕೃಷಿಯ ಮೂಲಕ ಪರಿಸರ ಸಂರಕ್ಷಣೆ ಸಾಧ್ಯವಿದೆ. ಇದಕ್ಕಾಗಿ  ಸಸ್ಯರಕ್ಷಣೆ, ಜೈವಿಕ ರಾಸಾಯನಿಗಳ ಬಳಕೆ ಕಡಿಮೆ ಮಾಡುವುದು, ನೀರು ಸಂರಕ್ಷಣೆಯ ಅಗತ್ಯ ಇದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ  ಸಣ್ಣ‑ಮಧ್ಯಮ ಘಟಕಗಳನ್ನು ಪ್ರೋತ್ಸಾಹಿಸುವುದು ಅಗತ್ಯ ಇದೆ. ಒಟ್ಟಾರೆಯಾಗಿ ಕೃಷಿ ಕ್ಷೇತ್ರದಲ್ಲಿ ಈಗ ಜಲ ಸಂರಕ್ಷಣೆ, ಡಿಜಿಟಲ್ ಬೆಳೆ ನಿರ್ವಹಣೆ, ಮಾರುಕಟ್ಟೆಯ ಸ್ಥಿರತೆಗೆ ಆದ್ಯತೆ ಅಗತ್ಯ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಶಿಕ್ಷಣ ಕ್ಷೇತ್ರವು ಕೂಡಾ ಬಹಳ ವೇಗವಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಪ್ರೋತ್ಸಾಹ ಹಾಗೂ ಸುಧಾರಣೆ ಅಗತ್ಯ ಇದೆ.  ಇದಕ್ಕಾಗಿ ಗ್ರಾಮೀಣ ಭಾಗದಲ್ಲೂ ಡಿಜಿಟಲ್ ಮತ್ತು ಸಂಯೋಜಿತ ಶಿಕ್ಷಣ ಮಾದರಿಗಳು,  ಉನ್ನತ ಗುಣಮಟ್ಟದ ಡಿಜಿಟಲ್ ವಿಷಯಗಳನ್ನು ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗಿಸುವುದು ಅಗತ್ಯ. ಶಿಕ್ಷಕರಿಗಾಗಿ ತರಬೇತಿ ಡಿಜಿಟಲ್ ಉಪಕರಣಗಳ ಪೂರೈಕೆ ಅಗತ್ಯಇದೆ. ಸಮುದಾಯ ಆಧಾರಿತ ಕಲಿಕೆ ಕೇಂದ್ರಗಳು, ಕೋರ್ಸ್‌ಗಳು ಮತ್ತು ವೃತ್ತಿಪರ ತರಬೇತಿಗಳನ್ನು ಗ್ರಾಮಾಂತರ ಮಟ್ಟಿಗೆ ಗಟ್ಟಿಗೊಳಿಸಬೇಕಾಗಿದೆ.

ಗ್ರಾಮೀಣಾಭಿವೃದ್ಧಿ ಇಂದು ಅತೀ ಅಗತ್ಯವಾಗಿರುವ ಇನ್ನೊಂದು ಕ್ಷೇತ್ರ.  ಮೂಲಭೂತ ಸೌಕರ್ಯಗಳ ಸಾಲಿನಲ್ಲಿ ಗ್ರಾಮೀಣ ರಸ್ತೆ, ವಿದ್ಯುತ್ , ಶುದ್ಧ ನೀರು ಮತ್ತುಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಆದ್ಯತೆ ಬೇಕಾಗಿದೆ. ಸೋಲಾರ್‌ ಇಂಧನ ಸಹಿತ ಗ್ರಾಮೀಣ ಉದ್ಯಮಗಳಿಗೆ ಬೆಂಬಲ, ಶಕ್ತಿಯ ಅಗತ್ಯ ಇದೆ. ಡಿಜಿಟಲ್‌ ಇಂಡಿಯಾ ಆಗುತ್ತಿರುವ ಕಾರಣದಿಂದ ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್‌ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳ ಅಗತ್ಯ ಇದೆ.  ಗ್ರಾಮೀಣ ಭಾಗದಲ್ಲಿರುವ  ಹ್ಯಾಂಡಿಕ್ರಾಫ್ಟ್, ಸಣ್ಣ ಕೈಗಾರಿಕೆಗಳಿಗೆ ಗ್ರಾಮೀಣ ಆಧಾರಿತ ಮಾರುಕಟ್ಟೆ ಜಾಲವನ್ನು ರೂಪಿಸುವುದು ಅಗತ್ಯ ಇದೆ. …… ಮುಂದೆ ಓದಿ……

ಹವಾಮಾನ ಪರಿಣಾಮಗಳುಗಳು ಬಹಳ ಗಂಭೀರವಾಗುತ್ತಿದೆ. ಇಂಧನ ಪರಿಣಾಮಕಾರಿ ಆಯ್ಕೆಗಳು, ಮತ್ತು ಪ್ಲಾಸ್ಟಿಕ್ ಬಳಕೆ ತಗ್ಗಿಸುವ ಕ್ರಮಗಳ ಅಗತ್ಯತೆ ಇಂದಿದೆ.  ಒಟ್ಟಾರೆಯಾಗಿ ಇಂದಿನ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪರಿಸರ-ಕೃಷಿ ಹಾಗೂ ಗ್ರಾಮೀಣ ಭಾಗವನ್ನು ಅಭಿವೃದ್ಧಿಪಡಿಸುವ ನೀತಿಗಳ ಅಗತ್ಯತೆ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 hour ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

13 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

22 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

1 day ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago