ಬೆಳೆ ಸಂರಕ್ಷಣೆಯಲ್ಲಿ ಹೊಸ ತಂತ್ರಜ್ಞಾನ | ಕೃಷಿಯಲ್ಲಿ ಯಾಕೆ ಹೊಸ ಔಷಧಿಗಳು ಬರುತ್ತಿಲ್ಲ…?

January 22, 2026
6:42 AM
2025ರಲ್ಲಿ ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳು ಬೆಳೆ ರಕ್ಷಣೆಯ ಮೇಲೆಯೇ ಕೇಂದ್ರೀಕೃತವಾಗಿವೆ. ಕೀಟ, ರೋಗ ಮತ್ತು ಕಳೆಯಿಂದ ಬೆಳೆ ಕಾಪಾಡುವ ಸುಲಭ ಮಾಹಿತಿ ರೈತರಿಗೆ.

ಆಧುನಿಕ ಜಗತ್ತಿನಲ್ಲಿ ಜನಸಂಖ್ಯೆ ಹೆಚ್ಚುತ್ತಿರುವಂತೆ ಆಹಾರದ ಬೇಡಿಕೆಯೂ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ರೈತರು ಕೇವಲ ಬೆಳೆ ಬೆಳೆದರೆ ಸಾಲದು, ಬೆಳೆದ ಬೆಳೆಯನ್ನು ಕೀಟ ಮತ್ತು ರೋಗಗಳಿಂದ ರಕ್ಷಿಸುವುದು ಅತಿ ದೊಡ್ಡ ಸವಾಲಾಗಿದೆ. ಹೀಗಾಗಿ ವರದಿಗಳ ಪ್ರಕಾರ, ಇಡೀ ಪ್ರಪಂಚದಲ್ಲಿ, ಕೃಷಿ ಕ್ಷೇತ್ರದಲ್ಲಿ ಸದ್ಯ ಕೃಷಿ ತಂತ್ರಜ್ಞಾನವು ಈಗ ಬೆಳೆ ಉತ್ಪಾದನೆಗಿಂತಲೂ ಹೆಚ್ಚಾಗಿ ಬೆಳೆ ಸಂರಕ್ಷಣೆಯ (Crop Protection) ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದೆ. ಈ ಕಾರಣದಿಂದ ಕೀಟ, ರೋಗ ಮತ್ತು ಕಳೆಯಿಂದ ಬೆಳೆ ಹಾನಿಯಾಗದಂತೆ ಮಾಡುವ ಈಗ ಇರುವ ಔಷಧಿಗಳನ್ನೇ ಹೆಚ್ಚು ಪರಿಣಾಮಕಾರಿಯಾಗಿ ಬಳಕೆಯಾಗಿವಂತೆ ಮಾಡಲಾಗುತ್ತಿದೆ.

Advertisement
Advertisement

ಹೊಸ ಔಷಧಿ ತರುವುದಕ್ಕಿಂತ, ರೈತರು ಈಗಾಗಲೇ ಬಳಸುತ್ತಿರುವ ಔಷಧಿಗಳು ಇನ್ನಷ್ಟು ದಿನ ಚೆನ್ನಾಗಿ ಕೆಲಸ ಮಾಡುವಂತೆ ಮಾಡಲಾಗುತ್ತಿದೆ. ಇದರಿಂದ ಬೆಳೆ ನಷ್ಟ ಕಡಿಮೆಯಾಗುತ್ತದೆ ಮತ್ತು ರೈತರಿಗೆ ಖರ್ಚು ಕೂಡ ಕಡಿಮೆಯಾಗುತ್ತದೆ ಎನ್ನುವುದು ವರದಿಗಳು. ಇತ್ತೀಚೆಗೆ ಜೈವಿಕ ಔಷಧಿಗಳು ಕೂಡ ಬಳಕೆಗೆ ಬರುತ್ತಿವೆ. ಇವು ರಾಸಾಯನಿಕ ಔಷಧಿಗಳಿಗೆ ಬದಲಾಗಿ ಅಲ್ಲ, ಅವುಗಳ ಜೊತೆ ಸೇರಿ ಬಳಸುವಂತೆಯೇ ಇರುತ್ತವೆ. ಇದರಿಂದ ಕೀಟ ನಿಯಂತ್ರಣ ಉತ್ತಮವಾಗುತ್ತದೆ ಮತ್ತು ಭೂಮಿಗೂ ಹಾನಿ ಕಡಿಮೆ ಆಗುತ್ತದೆ.  ಮೆಕ್ಕೆಜೋಳ, ಹತ್ತಿ, ಸೋಯಾಬೀನ್‌, ಗೋಧಿ ಮುಂತಾದ ಹೆಚ್ಚು ಬೆಳೆಸುವ ಬೆಳೆಗಳ ಮೇಲೆಯೇ ಈ ಹೊಸ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ. ಇದರಿಂದ ಹೆಚ್ಚಿನ ರೈತರಿಗೆ ಇದರ ಲಾಭ ಸಿಗಲಿದೆ. ಹೀಗಾಗಿ ಈಗ ಕೃಷಿಯಲ್ಲಿ ನಡೆಯುತ್ತಿರುವ ಹೊಸ ಕೆಲಸಗಳು ರೈತರು ಬೆಳೆ ಉಳಿಸಿಕೊಳ್ಳಲು ಸಹಾಯ ಮಾಡುವುದೇ ಮುಖ್ಯ ಗುರಿಯನ್ನು ಹೊಂದಿವೆ.

ಇಂದಿನ ಹವಾಮಾನ ಸಂಕಷ್ಟ ಹಾಗೂ ಇತರ ಹವಾಮಾನ ಬದಲಾವಣೆಯ ಸಂದರ್ಭ ಕೃಷಿಯಲ್ಲಿ ಔಷಧಿ ಬಳಕೆಯ ಸಂಶೋಧನೆಗಳು ಅಷ್ಟು ಸುಲಭವಲ್ಲ. ಹೊಸ ರಾಸಾಯನಿಕಗಳನ್ನು ಕಂಡುಹಿಡಿಯುವುದು ಬಹಳ ವೆಚ್ಚದಾಯಕ ಮತ್ತು ಸಮಯ ತೆಗೆದುಕೊಳ್ಳುವ ಕೆಲಸ. ಆದ್ದರಿಂದ, ವಿಜ್ಞಾನಿಗಳು ಈಗ ರೈತರು ಈಗಾಗಲೇ ಬಳಸುತ್ತಿರುವ ಔಷಧಿಗಳನ್ನೇ ಹೆಚ್ಚು ಪರಿಣಾಮಕಾರಿಯಾಗಿಸಲು, ಔಷಧದ ಗುಣಮಟ್ಟವನ್ನು ಸುಧಾರಿಸುವ ಮೂಲಕ ಅವು ಗಿಡಗಳ ಮೇಲೆ ಹೆಚ್ಚು ಕಾಲ ಉಳಿಯುವಂತೆ ಮತ್ತು ಕೀಟಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಪದೇ ಪದೇ ಔಷಧ ಸಿಂಪಡಿಸುವ ಹೊರೆ ಕಡಿಮೆಯಾಗಿ, ಖರ್ಚು ಉಳಿತಾಯವಾಗುತ್ತಿದೆ.

ಈ ಕಾರಣದಿಂದ ಈಗ ಹೊಸ ಕೀಟನಾಶಕಗಳು , ಕೇವಲ ಅಡಿಕೆಗೆ ಮಾತ್ರವೇ ಬಳಸಲಾಗುವ ಕೀಟನಾಶಕ, ಕ್ರಿಮಿನಾಶಕಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ವಿಜ್ಞಾನಿಗಳು ಕೂಡಾ ಪದೇ ಪದೇ ಕೀಟನಾಶಕ, ಕ್ರಿಮಿನಾಶಕಗಳ ಬದಲಾವಣೆಗೂ ಇದೇ ಕಾರಣದಿಂದ ಸಲಹೆಯನ್ನೂ ನೀಡುತ್ತಾರೆ.

ಈಗ ಕಡಿಮೆ ಖರ್ಚಿನಲ್ಲಿ  ಹೆಚ್ಚಿನ ಕೃಷಿ ಸಂರಕ್ಷಣೆಯ ತತ್ತ್ವವನ್ನು ಅಳವಡಿಸಿಕೊಳ್ಳಲಾಗುತ್ತಿದೆ.  ರೈತರು ತಮ್ಮ ಕಷ್ಟದ ಶ್ರಮವನ್ನು ಕೀಟಗಳ ಪಾಲಾಗದಂತೆ ತಡೆಯಲು ಈ ಆಧುನಿಕ ಸಂಶೋಧನೆಗಳು ವರದಾನವಾಗುತ್ತಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror