ಕೃಷಿ ಹಾನಿಗೆ ರೈತ ತತ್ತರ | ರೈತರ ಬಗ್ಗೆ ಕಾಳಜಿ ಇರುವವರು ಇದನ್ನೂ ಗಮನಿಸಿ..

September 30, 2020
10:58 AM
ಕೃಷಿ ಹಾನಿ ಈಚೆಗೆ ಹೆಚ್ಚಾಗುತ್ತಿದೆ. ಒಂದು ಕಡೆ ಕಾಡು ಪ್ರಾಣಿಗಳ ಕಾಟ, ಇನ್ನೊಂದು ಕಡೆ ವಿವಿಧ ರೋಗಗಳ ಕಾಟ. ಇದೆರಡೂ ಇಂದು ಕೃಷಿಕರಿಗೆ ಬಹುದೊಡ್ಡ ಸವಾಲಾಗಿದೆ. ನಿಜವಾಗಿಯೂ ರೈತ ಪರವಾಗಿರುವ ಮಂದಿ ಇದಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕಿದೆ.

Advertisement
Advertisement

ಮಲೆನಾಡು ಹಾಗೂ ಕರಾವಳಿ ಭಾಗ ಸೇರಿದಂತೆ ಎಲ್ಲ ಭಾಗಗಳಲ್ಲೂ ಕಾಡು ಪ್ರಾಣಿಗಳ ಹಾವಳಿ ಕೃಷಿಗೆ ಹೆಚ್ಚಾಗಿದೆ. ಆದರೆ ಸರಕಾರದಿಂದ ಯಾವ ಪರಿಹಾರವೂ ಲಭ್ಯವಾಗುತ್ತಿಲ್ಲ. ಒಂದು ವೇಳೆ ಪರಿಹಾರ ಲಭ್ಯವಾಗುತ್ತಿದ್ದರೂ ರೈತರು ಸಾಕಷ್ಟು ಬಾರಿ ಇಲಾಖೆಗಳಿಗೆ ಅಲೆದಾಟ ಮಾಡಿ ಕಿಂಚಿತ್‌ ಪರಿಹಾರ ಲಭ್ಯವಾಗುತ್ತಿದೆ. ಹೀಗಾಗಿ ಇದೊಂದು ಸಂಕಷ್ಟದಿಂದ ರೈತರನ್ನು  ಪಾರು ಮಾಡಬೇಕಿದೆ. ಸರಿಯಾಗಿ ಬೆಳೆ ಬೆಳೆಯಲು ಆಗದ ಮೇಲೆ ಮಾರಾಟ ಹೇಗೆ ಸಾಧ್ಯ ? ಇಂದು ರೈತ ಮಸೂದೆ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆ ಕಂಡುಬರುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಬೆಳೆ ಬೆಳೆಯಲೇ ಆಗದೇ ಇದ್ದರೆ ರೈತ ಬದುಕು ಸಾಗಿಸುವುದು  ಹೇಗೆ ? ಈ ಬಗ್ಗೆ ಸೂಕ್ತವಾದ ಕ್ರಮಗಳು ಅಗತ್ಯವಾಗಿದೆ.

Advertisement

ಈಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಪ್ರದೇಶದಲ್ಲಿ  ರೈತರು ಅವರ ಜಮೀನಿನಲ್ಲಿ ಬೆಳೆದ ಬೆಳೆಗೆ ಕಾಡಾನೆ ಧಾಳಿ ಮಾಡಿದೆ. ಇದರಿಂದ ಕೃಷಿ ನಾಶವಾಗಿದೆ. ಕೊಡಗು ಜಿಲ್ಲೆಯ ಮರಿಕೆಯ  ಕುಮುದಿನಿ ಅವರ ಕೃಷಿ ಜಾಗಕ್ಕೆ ಕೂಡಾ ಕಾಡಾನೆ ದಾಳಿ ಮಾಡಿ ಅಪಾರವಾದ ಕೃಷಿ ನಷ್ಟ ಗೊಂಡಿರುತ್ತದೆ. ಕೃಷಿ ಜಾಗದಲ್ಲಿ ಫಸಲು ಬರುತ್ತಿರುವ ತೆಂಗು, ಅಡಿಕೆ, ಬಾಳೆ ಕೃಷಿಯು ನಾಶಗೊಂಡಿರುತ್ತದೆ. ಕಳೆದ ತಿಂಗಳು ಸುಳ್ಯ ತಾಲೂಕಿನ ಮಂಡೆಕೋಲು, ಆಲೆಟ್ಟಿ ಪ್ರದೇಶದಲ್ಲಿ  ಕಾಡಾನೆ ಧಾಳಿ ಮಾಡಿದರೆ , ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ, ಪುತ್ತೂರು ತಾಲೂಕಿನ ಗುಂಡ್ಯ ಮೊದಲಾದ ಕಡೆಗಳಲ್ಲೂ ಆನೆ ಹಾವಳಿ ಇದೆ. ಈ ಹಾನಿ ನೋಡುವಾಗ ಯಾವುದೇ ಕೃಷಿಕನಿಗೆ ಕರುಳು ಚುರುಕ್‌ ಅನ್ನುತ್ತದೆ. ನಿಜವಾಗೂ ಇದನ್ನೊಂದು ಹೋರಾಟ ಅಂಗವಾಗಿ ಮಾಡಬೇಕಿದೆ. ಕಾಡುಪ್ರಾಣಿಗಳಿಂದ ರಕ್ಷಣೆ ಹಾಗೂ ಸೂಕ್ತ ಪರಿಹಾರಗಳು ರೈತರ ಅಲೆದಾಟ ತಪ್ಪಿಸಿ ತಕ್ಷಣವೇ ಪರಿಹಾರ ಸಿಗುವಂತೆ ಮಾಡಬೇಕಿದೆ.

Advertisement

 

Advertisement

ಇಷ್ಟೇ ಅಲ್ಲ, ರೈತ ಬೆಳೆದ ಬೆಳೆಗಳು ವಿವಿಧ ರೋಗಗಳಿಂದ ನಾಶವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಕೊಪ್ಪ ಮೊದಲಾದ ಪ್ರದೇಶಗಳಲ್ಲಿ ಅಡಿಕೆಗೆ ಹಳದಿ ರೋಗ ಬಾಧಿಸಿ ಈಗ ವ್ಯಾಪಿಸುತ್ತಲೇ ಇದೆ. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಈಗ ಅಲ್ಲಲ್ಲಿ  ಅಡಿಕೆ ಹಳದಿ ರೋಗ ಕಂಡುಬರುತ್ತಿದೆ. ಇದಕ್ಕೆ ಇದುವರೆಗೂ ಸೂಕ್ತ ಪರಿಹಾರ ಲಭ್ಯವಾಗಿಲ್ಲ. ಯಾವುದೇ ಇಲಾಖೆಗಳಿಂದಲೂ ಸೂಕ್ತವಾದ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂತಹ ರೋಗಗಳಿಗೂ ಸೂಕ್ತ ಪರಿಹಾರ ಹಾಗೂ ನ್ಯಾಯಯುತವಾದ ಪರಿಹಾರ ಮಾರ್ಗಗಳು ರೈತರಿಗೆ ಬೇಕಾಗಿದೆ. ಹೋರಾಟಗಳು ಈ ದಿಸೆಯಲ್ಲಿ  ನಡೆಯಬೇಕಿದೆ.

Advertisement

 

 

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ : ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!
April 29, 2024
3:30 PM
by: The Rural Mirror ಸುದ್ದಿಜಾಲ
ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ
April 29, 2024
2:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror