ಹಚ್ಚಹಸುರಾಗಿ ಬಂದ ಈರುಳ್ಳಿ ಬೀಜದ ಹೂ, ಇನ್ನೇನು ಒಳ್ಳೆಯ ಬೀಜ ದೊರೆಯುತ್ತವೆ ಎನ್ನುವ ಸಮಯದಲ್ಲಿ ಆವರಿಸಿದ ಮಂಜಿನಿಂದ ಈರುಳ್ಳಿ ಹೂ ಹೂವು ಬಾಡುತ್ತಿದೆ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಗೆಡ್ಡೆ ಹೂ ಬಿಡಲಿದ್ದು, ಏಪ್ರಿಲ್‌ನಲ್ಲಿ ಬೀಜ ಪಡೆದು, ಹಸನು ಮಾಡಲಾಗುತ್ತದೆ. ಮುಂಗಾರು ಶುರುವಾಗುವ ಸಮಯ ಮೇ ಅಥವಾ ಜೂನ್ ತಿಂಗಳಲ್ಲಿ ಈರುಳ್ಳಿ ಬೀಜಗಳನ್ನು ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ಪ್ರಕಾಶ್ ಎಚ್.
ಕಳೆದ ಹಂಗಾಮಿನಲ್ಲಿ ಈರುಳ್ಳಿಗೆ ಬೇಡಿಕೆ ಬಂದು ಉತ್ತಮ ಬೆಲೆಗೆ ಮಾರಾಟವಾಗಿದ್ದು, ಈ ವರ್ಷವೂ ಈರುಳ್ಳಿಗೆ ಉತ್ತಮ ಧಾರಣೆ ಸಿಗುವ ಆಶಾಭಾವನೆ ರೈತರಿಗಿದೆ. ಹೀಗಾಗಿ ಈರುಳ್ಳಿ ಬೆಳೆಯಲು ರೈತರು ಮುಂದಾಗಿರುವುದರಿಂದ ಈರುಳ್ಳಿ ಬೀಜಕ್ಕೆ ಭಾರಿ ಬೇಡಿಕೆ ಬರುವ ನಿರೀಕ್ಷೆ ಇದೆ. ಇದರಿಂದ ನಮ್ಮ ಶ್ರಮಕ್ಕೆ ತಕ್ಕ ಬೆಲೆ ಸಿಕ್ಕಿ ನೆಮ್ಮದಿಯಿಂದ ಜೀವನ ಸಾಗಿಸಬಹುದು ಎನ್ನುತ್ತಾರೆ ಕಬ್ಬಿನಕೆರೆ ರೈತ ಕಾಂತರಾಜು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel