ಕೃಷಿಕನ ಆವಿಷ್ಕಾರ | ಸೇತುವೆ ಸಮಸ್ಯೆಗೆ ಪರಿಹಾರ ಕಂಡುಹಿಡಿದ ಕಾಸರಗೋಡು ಕೃಷಿಕ…! |

February 12, 2022
11:11 PM

ಇಲ್ಲಿ ಕೃಷಿಕರಿಗೆ ಹೊಳೆ ಸಮಸ್ಯೆ ಅಲ್ಲ. ಕೃಷಿ ನೀರು ಬೇಕು, ಹೊಳೆಯೂ ಬೇಕು. ಆದರೆ ಹೊಳೆ ದಾಟುವುದು ಸಮಸ್ಯೆಯಾಗಿತ್ತು. ಹೊಳೆಯ ಆ ಕಡೆಯ ಕೃಷಿ ವಸ್ತುಗಳು ಈ ಕಡೆಗೆ ಬರುವುದು  ಸಮಸ್ಯೆಯಾಗಿತ್ತು. ಅದಕ್ಕೆ ಪರಿಹಾರ ಕಂಡುಕೊಂಡ ಕೃಷಿಕನ ಸಾಹಸಗಾಥೆ ಬಹು ಕುತೂಹಲ. ಇವರು ಕಾಸರಗೋಡು ಜಿಲ್ಲೆಯ ಪೆರಡಾಲ ಗ್ರಾಮದ ಕೃಷಿ ಭೀಮೇಶ್.

Advertisement

ಕಾಸರಗೋಡು ಜಿಲ್ಲೆಯ ಪೆರಡಾಲ ಗ್ರಾಮವು  ಗುಡ್ಡ ತಟ್ಟುಗಳಿಂದ ಕೂಡಿದ ಪ್ರದೇಶ.‌ ಪೆರಡಾಲ ವರದಾ ನದಿಯ ಸುತ್ತಮುತ್ತ ಸಂಪೂರ್ಣ ಅಡಿಕೆ, ತೆಂಗು, ಕೃಷಿಯಿಂದ ಕೂಡಿದೆ. ಇಲ್ಲಿ ಕೃಷಿಕರು ತಮ್ಮ ಕೃಷಿ ಉತ್ಪನ್ನಗಳನ್ನು ಮನೆಗೆ ಸಾಗಿಸಲು ಹರಸಾಹಸವನ್ನು ಪಡುತ್ತಿರುವುದು  ಅನೇಕ ವರ್ಷಗಳಿಂದಲೂ ಇದೆ. ಇಂತಹ ಸಮಸ್ಯೆಯ ಸುಳಿಯಲ್ಲಿ ಪೆರಡಾಲದ ಮಿಂಚಿನಡ್ಕದಲ್ಲಿ ಪರಂಪರಾಗತವಾಗಿ ಕೃಷಿಯನ್ನೇ ನೆಚ್ಚಿಕೊಂಡ ಕುಟುಂಬದಿಂದ ಬಂದ ಭೀಮೇಶ್ ಅವರು ತಮ್ಮ ಪ್ರಯತ್ನದಿಂದ ಈ ಸಮಸ್ಯೆಗೆ ವಿರಾಮವನ್ನು ನೀಡಿದ್ದಾರೆ. ಇವರು ತಮ್ಮ ಪ್ರಯತ್ನದ ಮೂಲಕ ಹೊಳೆಯ ಎರಡೂ ಬದಿಗೆ ಸಾಗಲು ರೋಪ್‌ವೇ ಟ್ರಾಲಿ ನಿರ್ಮಿಸಿದ್ದಾರೆ.ಈಗ ಸಮಸ್ಯೆಯಿಂದ ಮುಕ್ತರಾಗಿದ್ದಾರೆ.

ಚಿತ್ರ : ಶ್ಯಾಮ ಪ್ರಸಾದ್‌ ಸರಳಿ

ಕ್ಯಾಂಪ್ಕೋ ಸಂಸ್ಥೆಯ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ ಕೃಷಿ ಮೇಳಕ್ಕೆ ತೆರಳಿದ ವೇಳೆ ಭೀಮೇಶ್‌ ಅವರಿಗೆ ರೂಪ್‌ವೇ ನಿರ್ಮಾಣ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು. ಇದರಂತೆ ಅವರು ಪುತ್ತೂರು ವಿವೇಕಾನಂದ ಕಾಲೇಜಿನ ಮೆಕ್ಯಾನಿಕ್ ವಿಭಾಗದಲ್ಲಿ 8 ವರ್ಷ ಉಪನ್ಯಾಸಕರಾಗಿ ಅನುಭವವಿರುವ ಶಿವಮೊಗ್ಗ ಮೂಲದ ಸುನಿಲ್ ಬಿ. ಲಕ್ಕುಂಡಿ ಜತೆ ಮಾತಾಡಿ, ಅವರ ಸಲಹೆಯ ಮೇರೆಗೆ ಈ ರೂಪ್‌ವೇ ನಿರ್ಮಾಣವಾಗಿದೆ.

ಮಂಗಳೂರು ಬಂದರಿನಲ್ಲಿ ಹಡಗಿನ ಉಪಯೋಗಕ್ಕಿರುವ ತುಕ್ಕು ಹಿಡಿಯದಂತಹ ಕಬ್ಬಿಣದ ಕಂಬಗಳು ರೋಪ್ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ತರಿಸಿಕೊಂಡು.  ಸುಮಾರು 60 ಸಾವಿರ ರೂ ವೆಚ್ಚದಲ್ಲಿ ಈ ರೋಪ್‌ವೇ ನಿರ್ಮಾಣಗೊಂಡಿತು. ತೊಟ್ಟಿಗೆ ನೈಲಾನ್ ಬಳ್ಳಿಯನ್ನು ಕಟ್ಟಿ ರಾಟೆಯ ಮೂಲಕ ಕುಳಿತಲ್ಲಿಂದಲೇ ಎರಡೂ ಬದಿಗೆ ಸಾಗಬಹುದಾದಂತಹ ವ್ಯವಸ್ಥೆಯನ್ನೂ ಅಳವಡಿಸಿದ್ದಾರೆ. ಅಡಿಕೆ ಕೊಯ್ಲು ನಡೆಸಿ ತೋಟದಲ್ಲೇ ಅಡಿಕೆಯನ್ನು ಗೊನೆಯಿಂದ ಬೇರ್ಪಡಿಸಿ ಗೋಣಿ ಚೀಲದಲ್ಲಿ ತುಂಬಿಸಿ ರೋಪ್ ವೇ ಮೂಲಕ ಸಾಗಿಸಬಹುದು ಮಾತ್ರವಲ್ಲ ತೋಟಕ್ಕೆ ಗೊಬ್ಬರ ಸಾಗಾಟಕ್ಕೂ ಇದನ್ನು ಬಳಸಬಹುದು. ಯಾವುದೇ ಕೃಷಿ ಉತ್ಪನ್ನವನ್ನು ತೊಟ್ಟಿನಲ್ಲಿ ಇಟ್ಟು ಹಗ್ಗವನ್ನು ಎಳೆಯುವುದು ಅಥವಾ ಅಳವಡಿಸಲಾದ ಚಕ್ರವನ್ನು ತಿರುಗಿಸಿದರೆ ಅಲ್ಲಿಂದ ಮುಂದಕ್ಕೆ ಸರಾಗವಾಗಿ ಟ್ರಾಲಿ ಓಡಾಡುತ್ತದೆ. ಒಮ್ಮೆಗೆ ಸುಮಾರು ಎರಡೂವರೆ ಕ್ವಿಂಟಾಲ್‌ ಸಾಗಾಟ ಮಾಡಲು ಈಗ ಸಾಧ್ಯವಾಗುತ್ತದೆ.

ಚಿತ್ರ : ಶ್ಯಾಮ ಪ್ರಸಾದ್‌ ಸರಳಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಬೃಹತ್‌ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ಬಯಲು | 2.25 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ |
April 21, 2025
7:37 AM
by: The Rural Mirror ಸುದ್ದಿಜಾಲ
ಪ್ರೀತಿಯಲ್ಲಿ ನಿಪುಣರು ಈ ರಾಶಿಯವರು…!
April 21, 2025
7:13 AM
by: ದ ರೂರಲ್ ಮಿರರ್.ಕಾಂ
ಧರ್ಮವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ – ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್
April 20, 2025
8:55 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-04-2025 | ಕೆಲವು ಕಡೆ ಸಾಮಾನ್ಯ ಮಳೆ ಸಾಧ್ಯತೆ | ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆ ನಿರೀಕ್ಷೆ
April 20, 2025
5:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group