ಮಹಾರಾಷ್ಟ್ರದ ಭೌಸಾಹೇಬ್ ಕಾಂಚನ್ ಎಂಬವರು ತಮ್ಮ ಮನೆಯಲ್ಲಿರುವ ಟೆರೇಸ್ ಅನ್ನು ಸೊಂಪಾದ ದ್ರಾಕ್ಷಿ ತೋಟವನ್ನಾಗಿ ಪರಿವರ್ತಿಸಿ, ಸುಮಾರು 250 ಕಿಲೋ ದ್ರಾಕ್ಷಿ ಬೆಳೆಯ ಕೊಯ್ಲು ಮಾಡಿದ್ದಾರೆ.
Advertisement
ಭೌಸಾಹೇಬ್ ನೆದರ್ಲ್ಯಾಂಡ್ಸ್, ಜರ್ಮನಿ, ಫ್ರಾಂಕ್‌ಫರ್ಟ್ ಮತ್ತು ಹಾಲೆಂಡ್‌ಗೆ ಪ್ರಯಾಣಿಸಿದರು. ಅಲ್ಲಿ ಹಾಲೆಂಡ್‌ನ ಅನೇಕ ರೈತರು ತಮ್ಮ ಹಿತ್ತಲಿನಲ್ಲಿ ದ್ರಾಕ್ಷಿಯನ್ನು ಬೆಳೆಸುತ್ತಿದ್ದರು. ಬಳ್ಳಿಗಳು ಉದ್ದವಾಗಿ ಬೆಳೆಯುತ್ತವೆ ಮತ್ತು ಅವುಗಳನ್ನು ಛಾವಣಿಯ ಉದ್ದಕ್ಕೂ ಹಬ್ಬಿಸಿರುವುದು ನೋಡಿ ಮನೆಯಲ್ಲೇ ದ್ರಾಕ್ಷಿಯನ್ನು ಬೆಳೆಸಲು ಸಾಧ್ಯವೇ ಎಂಬುದನ್ನು ಪ್ರಯೋಗ ಮಾಡಿದರು.
Advertisement
ನಂತರ ಭೌಸಾಹೇಬ್ ತನ್ನ ಮನೆಯಲ್ಲಿಯೇ ದ್ರಾಕ್ಷಿತೋಟವನ್ನು ಮಾಡಲು ನಿರ್ಧರಿಸಿದರು. ನೈಸರ್ಗಿಕ ಪೋಷಣೆಯನ್ನು ಮಾಡುತ್ತಿರುವ ಅವರು ಹೇರಳವಾಗಿ ಹಸುವಿನ ಸಗಣಿ, ಕಾಂಪೋಸ್ಟ್, ಸಾವಯವ ಗೊಬ್ಬರ ಮತ್ತು ಗೋಮೂತ್ರವನ್ನು ಬಳಸಿದ್ದಾರೆ. ಇದರಿಂದಾಗಿ ಬಳ್ಳಿಗಳು 32 ಅಡಿಗಳವರೆಗೆ ಬೆಳೆದವು ಎಂದು ಹೇಳಿದ್ದಾರೆ. ಇದೀಗ ಉತ್ತಮ ಆದಾಯವೂ ಬರುತ್ತಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement