ಗದಗ ಜಿಲ್ಲೆಯ ಮುಂಡರಗಿಯ ಬಸಾಪುರದಲ್ಲಿ ರೈತರೊಬ್ಬರು ತಮ್ಮ ಬಂಜರು ಭೂಮಿಯನ್ನು ಕೆರೆಯನ್ನಾಗಿಸಿ ಮೀನುಗಾರಿಕೆಗೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಮುಂಡರಗಿ ತಾಲೂಕಿನಲ್ಲಿ ಕಲ್ಲು ಪುಡಿ ಮಾಡಿ ಐದು ಸಣ್ಣ ಕೆರೆಗಳನ್ನಾಗಿ ಮಾಡಲಾಗಿದ್ದು, ಅಲ್ಲಿ 25 ಲಕ್ಷ ಸಣ್ಣ ಮೀನುಗಳ ಸಾಕಾಣಿಕೆಯನ್ನು ಮಾಡಿದ್ದಾರೆ.
Advertisement
ಜಮೀನು ಫಲವತ್ತಾಗಿಲ್ಲ ಎಂಬ ಕಾರಣದಿಂದಾಗಿ 57 ವರ್ಷದ ಹನುಮಂತಪ್ಪ ಆ ಭೂಮಿಯನ್ನು ಸುಮ್ಮನೆ ಬಿಡಲಿಲ್ಲ, ತಜ್ಞರನ್ನು ಭೇಟಿ ಮಾಡಿ ಏನಾದರೂ ಮಾಡಲು ನಿರ್ಧರಿಸಿದರು. ಮೀನುಗಾರಿಕೆ ಇಲಾಖೆ ಸಿಬ್ಬಂದಿ ಹನುಮಂಪ್ಪ ಅವರಿಗೆ ಈಗ ಮಾರ್ಗದರ್ಶನ ನೀಡುತ್ತಿದ್ದಾರೆ.
Advertisement
ಬೋರ್ವೇಲ್ ಅಳವಡಿಸಿ ನೀರಿನ ಮೂಲ ಮಾಡಿಕೊಂಡು ಮೀನು ಸಾಕಾಣಿಕೆ ಆರಂಭಿಸಿದೆ. ಈ ವೇಳೆ ಮೀನುಗಳನ್ನು ತಿನ್ನಲು ಪಕ್ಷಿಗಳು ಬರಲು ಆರಂಭಿಸಿದ್ದವು. ಆಗ ಪಕ್ಷಿಗಳಿಂದ ಮೀನುಗಳನ್ನು ಉಳಿಸಲು ಅವರು ಕನ್ನಡಿಗಳಿಂದ ಕೆಲವು ಬುಟ್ಟಿಗಳನ್ನು ಸಹ ಮಾಡಿದರು. ಇದೀಗ ಬಿಸಿಲು ನಾಡಿನಲ್ಲೂ ಮೀನುಗಾರಿಕೆ ಸಾಧ್ಯವೆಂದು ಮಾಡಿ ತೋರಿಸಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement