ಪ್ರಸಕ್ತ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ (ಕೆಎಂಎಸ್) 94.15 ಲಕ್ಷ ರೈತರಿಂದ ಇದುವರೆಗೆ 1.36 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಭತ್ತದ ಖರೀದಿಯನ್ನು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ.
ಹಿಂದಿನ ವರ್ಷಗಳಲ್ಲಿ ಮಾಡಿದಂತೆ ರೈತರಿಂದ ಎಮ್‌ಎಸ್‌ಪಿ ನಲ್ಲಿ 2021-22 ಖಾರಿಫ್ ಬೆಳೆಗೆ ಹೋಲಿಸಿದರೆ ಭತ್ತ ಸಂಗ್ರಹಣೆಯು ಪ್ರಗತಿಯಲ್ಲಿದೆ. ಇಲ್ಲಿಯವರೆಗೆ ಸುಮಾರು 94.15 ಲಕ್ಷ ರೈತರು 1,36,350,74 ಕೋಟಿ ರೂಪಾಯಿಗಳ ಎಮ್‌ಎಸ್‌ಪಿ ಮೌಲ್ಯದೊಂದಿಗೆ ಲಾಭ ಪಡೆದಿದೆ ಎಂದು ಅಧಿಕೃತ ದಾಖಲೆ ತಿಳಿಸಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಪ್ರಕಾರ ಕೆಎಮ್‌ಎಸ್ 2021-22 ರಲ್ಲಿ ಫೆಬ್ರವರಿ 20-2022 ರವರೆಗೆ 695.67 ಎಲ್‌ಎಮ್‌ಟಿ ( ಲಕ್ಷ ಮೆಟ್ರಿಕ್ ಟನ್ ) ಭತ್ತವನ್ನು ಖರೀದಿಸಲಾಗಿದೆ. ಮಾತ್ರವಲ್ಲ ಪಂಜಾಬ್‌ನಿಂದ ಅತ್ಯಧಿಕ ಪ್ರಮಾಣದ ಖರೀದಿ ಮಾಡಲಾಗಿದ್ದು, 1,86,85,532 ಮೆಟ್ರಿಕ್ ಟನ್ ಭತ್ತವನ್ನು 36,623.64 ಕೋಟಿ ರೂ ಗೆ ಸಂಗ್ರಹಿಸಲಾಗಿದ್ದು, 9,24.299 ರೈತರಿಗೆ ಲಾಭವಾಗಿದೆ. ಛತ್ತಿಸ್‌ಗಢ ಮತ್ತು ತೆಲಂಗಾಣ ನಂತರದ ಸ್ಥಾನದಲ್ಲಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…