ಕುಮ್ಕಿ,ಕಾನ,ಬಾಣೆ ಭೂಮಿಯನ್ನು ಅವರ ಹೆಸರಿಗೆ ನೀಡಲು ಸರ್ಕಾರ ಕ್ರಮ |ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ವ್ಯವಸ್ಥೆ | ಕಂದಾಯ ಸಚಿವರ ಹೇಳಿಕೆ |

ದಕ್ಷಿಣ ಕನ್ನಡ ಭಾಗದಲ್ಲಿ ಕುಮ್ಕಿ ಬಾಣಿ ಭೂಮಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಟ್ಟ, ಹಾಡಿಗಳು, ಮೈಸೂರು ಭಾಗದಲ್ಲಿ ಕಾನ ಮತ್ತು ಸೊಪ್ಪಿನ ಬೆಟ್ಟ ಭೂಮಿಗಳು, ಕೊಡಗಿನಲ್ಲಿ ಜಮ್ಮಾ ಮತ್ತು ಬಾಣಿ, ಹೈದರಾಬಾದ್ ಪ್ರದೇಶದಲ್ಲಿ ತೆರಿಗ ಭೂಮಿಗಳ ಬಗೆಗಿನ ವಿಶೇಷಾಧಿಕಾರಗಳನ್ನು ಮುಂದುವರೆಸಲು ಸರ್ಕಾರ ನಿರ್ಧರಿಸಿದೆ. ಹಲವಾರು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

Advertisement
Advertisement
ಬ್ರಿಟಿಷರ ಕಾಲದಿಂದಲ್ಲೂ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ರೈತರಿಗೆ ಭೂಮಿ ನೀಡುವಂತೆ ಸೂಚನೆ ನೀಡಿದೆ. ರಾಜ್ಯಾದ್ಯಂತ ಈ ರೀತಿ ಲಕ್ಷಾಂತರ ಎಕರೆ ಭೂಮಿ ಇದೆ. ಚಿಕ್ಕಮಗಳೂರಿನಲ್ಲಿ 45 ಸಾವಿರ ಎಕರೆ, ಹಾಸನದಲ್ಲಿ 35 ಎಕರೆ ಇದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿಲ್ಲ. ರೈತರಿಗೂ ಇಲ್ಲ ಎಂಬಂತಾಗಿದೆ. ಅದಕ್ಕಾಗಿ ಈ ಭೂಮಿಗಳನ್ನು ಉಳುಮೆ ಮಾಡುತ್ತಿದ್ದ ರೈತರಿಗೆ ನೀಡಬೇಕು ಎಂಬ ಮನಸ್ಥಿತಿಯಲ್ಲಿ ನಮ್ಮ ಸರ್ಕಾರ ಇದೆ ಎಂದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಕುಮ್ಕಿ,ಕಾನ,ಬಾಣೆ ಭೂಮಿಯನ್ನು ಅವರ ಹೆಸರಿಗೆ ನೀಡಲು ಸರ್ಕಾರ ಕ್ರಮ |ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ವ್ಯವಸ್ಥೆ | ಕಂದಾಯ ಸಚಿವರ ಹೇಳಿಕೆ |"

Leave a comment

Your email address will not be published.


*