2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು ಮುಂದುವರಿಯಲಿವೆ ಎಂದು ವರದಿ ತಿಳಿಸಿದೆ. ING ಸಂಸ್ಥೆಯ ಕಮಾಡಿಟೀಸ್ ಔಟ್‌ಲುಕ್–2026 ವರದಿ ಪ್ರಕಾರ, 2025–26 ಅವಧಿಯಲ್ಲಿ ಜಾಗತಿಕ ಸೋಯಾಬೀನ್ ಮಾರುಕಟ್ಟೆಯಲ್ಲಿ ಪೂರೈಕೆ ಕಠಿಣವಾಗುವ ಸಾಧ್ಯತೆ ಇದೆ.
ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಒತ್ತಡಗಳ ಪರಿಣಾಮವಾಗಿ ಅಮೆರಿಕದಲ್ಲಿ ಸೋಯಾಬೀನ್ ಬಿತ್ತನೆ ಪ್ರದೇಶ ಕಡಿಮೆಯಾಗಿದ್ದು, ಇದರಿಂದ ಉತ್ಪಾದನೆ ವರ್ಷಾವರ್ಷಕ್ಕೆ 2.8 ಶೇಕಡಾ ಕುಸಿದು ಸುಮಾರು 116 ಮಿಲಿಯನ್ ಟನ್‌ಗಳಿಗೆ ಇಳಿಯಲಿದೆ. ಇತ್ತ ಬ್ರೆಜಿಲ್‌ನಲ್ಲಿ ಸೋಯಾಬೀನ್ ಉತ್ಪಾದನೆ ದಾಖಲೆ ಮಟ್ಟ ತಲುಪುವ ನಿರೀಕ್ಷೆಯಿದ್ದು, 2025–26ರಲ್ಲಿ ಕನಿಷ್ಠ 175 ಮಿಲಿಯನ್ ಟನ್ ಉತ್ಪಾದನೆ ಅಂದಾಜಿಸಲಾಗಿದೆ.
ಇನ್ನೊಂದೆಡೆ, ದಾಖಲೆಯ ಜೋಳ ಉತ್ಪಾದನೆಯಿಂದ ಈ ವರ್ಷ ಜೋಳದ ಬೆಲೆಗಳು ಒತ್ತಡಕ್ಕೆ ಒಳಗಾಗಿವೆ. ಆದರೆ 2026–27 ಮಾರುಕಟ್ಟೆ ಅವಧಿಯಲ್ಲಿ ಜಾಗತಿಕವಾಗಿ ಸುಮಾರು 39 ಮಿಲಿಯನ್ ಟನ್ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಅಮೆರಿಕ–ಚೀನಾ ಒಪ್ಪಂದದ ಹಿನ್ನೆಲೆಯಲ್ಲಿ ಜೋಳದ ಬಿತ್ತನೆ ಕಡಿಮೆಯಾಗಿ, ಸೋಯಾಬೀನ್ ಬಿತ್ತನೆ ಹೆಚ್ಚಾಗುವ ಸಾಧ್ಯತೆಯಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಗೋಧಿ ಕ್ಷೇತ್ರದಲ್ಲಿ ದಾಖಲೆಯ ಉತ್ಪಾದನೆ ಕಂಡುಬರುವ ನಿರೀಕ್ಷೆಯಿದ್ದು, ಜಾಗತಿಕ ಗೋಧಿ ಸಂಗ್ರಹ 271 ಮಿಲಿಯನ್ ಟನ್‌ಗೆ ಏರಲಿದೆ. ಸಕ್ಕರೆ ಮಾರುಕಟ್ಟೆಯಲ್ಲಿ 2025–26ರಲ್ಲಿ ಹೆಚ್ಚುವರಿ ಪೂರೈಕೆಯಿಂದ ಬೆಲೆಗಳಲ್ಲಿ ತೀವ್ರ ಇಳಿಕೆ ಕಂಡುಬಂದಿದ್ದು, ದೊಡ್ಡ ಪ್ರಮಾಣದ ಮಿಕ್ಕಳಿಕೆ ನಿರೀಕ್ಷಿಸಲಾಗಿದೆ.
ಕೋಕೋ ಬೆಳೆ ಉತ್ತಮ ಉತ್ಪಾದನೆಯಿಂದ ಮಾರುಕಟ್ಟೆಯಲ್ಲಿ ಹೆಚ್ಚುವರಿ ಪೂರೈಕೆ ಕಂಡುಬಂದಿದ್ದು, ಬೆಲೆಗಳು ಭಾರೀ ಕುಸಿತ ಕಂಡಿವೆ. ಇತ್ತ ಅರಾಬಿಕಾ ಕಾಫಿ ಬೆಲೆಗಳು ಹವಾಮಾನ ವೈಪರೀತ್ಯ ಮತ್ತು ಕಡಿಮೆ ಸಂಗ್ರಹದ ಕಾರಣ ಈ ವರ್ಷ ಏರಿಕೆಯಾದರೂ, 2026ರಲ್ಲಿ ಪೂರೈಕೆ ಸುಧಾರಣೆಯಿಂದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Source :ANI


