ಕೃಷಿಯಲ್ಲಿ ಆವಿಷ್ಕಾರ | 23 ರ ಯುವಕನ ಕೃಷಿ ಸಾಧನೆ – ತೋಟದೊಳಗೆ ಓಡುವ ಮಿನಿ ಟಿಪ್ಪರ್‌

September 22, 2020
8:48 PM
ಕೃಷಿ ಕ್ಷೇತ್ರ ಬೆಳವಣಿಗೆ ಕಾಣಬೇಕು ಎಂಬುದು ಎಲ್ಲರ ಅಭಿಪ್ರಾಯ. ಕೊರೋನೋತ್ತರದಲ್ಲಿ ಕೃಷಿಯತ್ತ ಯುವಕರ ಆಕರ್ಷಣೆಯೂ ಹೆಚ್ಚಾಗಿದೆ. ಇದು  ಕೃಷಿ ಕ್ಷೇತ್ರ ಬೆಳವಣಿಗೆಗೂ ಕಾರಣವಾಗಿದೆ. ಹೊಸ ಆವಿಷ್ಕಾರಗಳು ಕೃಷಿಯಲ್ಲಿ  ಕಾಣತೊಡಗಿದೆ. ಅದರ ಒಂದು ಭಾಗವಾಗಿ 23 ವರ್ಷದ ಯುವಕ ಮಿನಿ ಟಿಪ್ಪರ್‌ ಮಾಡಿದ್ದಾನೆ, ಇದು ತೋಟದ ನಡುವೆ ಆರಾಮವಾಗಿ ಓಡಾಡುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಸಮೀಪದ ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಪುರುಷೋತ್ತಮ್ ಎಂಬ 23ರ ಯುವಕ ಸಣ್ಣ ಟಿಪ್ಪರ್ ನ ಆವಿಷ್ಕಾರ ಮಾಡಿದ ಯುವಕ. ಸ್ಕೂಟರನ್ನು ವಿಶೇಷ ವಿನ್ಯಾಸ ಮಾಡಿ  ಟಿಪ್ಪರ್ ಸಿದ್ಧ ಮಾಡಲಾಗಿದೆ. ತೋಟದ ನಡುವೆ ಸಾಗುವ ಈ ವಾಹನವನ್ನು ಕೃಷಿಯ ಎಲ್ಲಾ ಕಾರ್ಯಗಳಿಗೂ ಬಳಕೆ ಮಾಡಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಈಗಾಗಲೇ ಕಾರ್ಮಿಕರ ಕೊರತೆಯಿಂದ ಕೃಷಿ ಬೆಳವಣಿಗೆ ಕುಂಠಿತವಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಾವಲಂಬೆಯ ಕಡೆಗೆ ಕೃಷಿಕರು ಮನಸ್ಸು ಮಾಡಲೇಬೇಕಿದೆ. ಇಂತಹ ಸಂದರ್ಭದಲ್ಲಿ  ಯುವಕರ ಇಂತಹ ಆವಿಷ್ಕಾರಗಳು ನೆರವಾಗುತ್ತದೆ.  ಕೆಲಸದಾಳುಗಳ ಕೊರತೆಯಿದ್ದರೂ ಕೃಷಿ ಕೆಲಸ ಕಾರ್ಯಗಳನ್ನು ಸರಾಗವಾಗಿ ಮಾಡಬಹುದಾಗಿದೆ. ಈ ಹಿಂದೆ ಅಟೋವನ್ನು, ವಿವಿಧ ವಿನ್ಯಾಸ ಮೋಟೋ ಕಾರ್ಟ್‌ ಗಳನ್ನು ತೋಟದೊಳಗೆ ಓಡಿಸುತ್ತಿದ್ದ ಕೃಷಿಕರಿಗೆ ಈಗ ಇನ್ನೊಂದು ತಂತ್ರ ಸಿಕ್ಕಿದಂತಾಗಿದೆ.
ಇಲ್ಲಿ 130 ಸಿಸಿ ಇಂಜಿನ್ ಹೊಂದಿರುವ ಸ್ಕೂಟರ್ ಅನ್ನು ತನಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡಿರುವ ಈ ಯುವಕ  ಹಿಂದೆ ಮುಂದೆ ಸಲೀಸಾಗಿ ಸಾಗುವಂತೆ ಮಾಡಲು ಗೇರ್ ಬಾಕ್ಸ್ ಅಳವಡಿಸಲಾಗಿದೆ. ಅಲ್ಲದೆ ಇದಕ್ಕೆ ರಿವರ್ಸ್ ಗೇರ್ ಅನ್ನೂ ಫಿಟ್ ಮಾಡಲಾಗಿದ್ದು, 3 ಫೀಟ್ ಅಗಲದ ಬಾಡಿಯನ್ನೂ ನಿರ್ಮಿಸಲಾಗಿದ್ದು, ಎರಡು ಕ್ವಿಂಟಾಲ್ ತೂಕ ಹೊರುವ ಸಾಮರ್ಥ್ಯವನ್ನೂ ಹೊಂದಿದೆ.
ಪಾಲ್ತಾಡಿ ಗ್ರಾಮದ  ಬಂಬಿಲ ನಿವಾಸಿ ಬಾಬು ಶೆಟ್ಟಿ ಹಾಗೂ ಯಮುನಾ ದಂಪತಿಯ ಮಗನಾಗಿರುವ ಪುರುಷೋತ್ತಮ ನಿಂತಿಕಲ್ಲು ಕೆ.ಎಸ್.ಗೌಡ ಐಟಿಐ ನಲ್ಲಿ ಓದಿ ಇದೀಗ ಸದ್ಯಕ್ಕೆ ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಿಕೊಂಡಿದ್ದಾರೆ. ಈ ಆವಿಷ್ಕಾರವನ್ನು   ಶಾಸಕ ಅಂಗಾರರಿಂದ ಮೆಚ್ಚುಗೆ ಸುಳ್ಯ ಶಾಸಕ ಅಂಗಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಿಡ ಹಾಗೂ ಇತರ ಬೆಳೆಗಳಿರುವ ತೋಟದ ಮಧ್ಯೆ  ಈ ವಾಹನ ಸರಾಗವಾಗಿ ಓಡುತ್ತದೆ ಎಂದು ಹೇಳುತ್ತಾರೆ  ಪುರುಷೋತ್ತಮ್ ಬಂಬಿಲ.
Advertisement
Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ
January 30, 2026
6:18 PM
by: ವಿಶೇಷ ಪ್ರತಿನಿಧಿ
ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ
January 30, 2026
6:04 PM
by: ದ ರೂರಲ್ ಮಿರರ್.ಕಾಂ
AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror