Advertisement
ಮಾಹಿತಿ

#Agritourism | ಕೃಷಿ ಪ್ರವಾಸೋದ್ಯಮ | ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಸಬಲೀಕರಣದ ಪರಿಕಲ್ಪನೆ |

Share

ಕೃಷಿ ಪ್ರವಾಸೋದ್ಯಮವನ್ನು #agritourism ನಮ್ಮ ಕೃಷಿ #agriculture, ಆಹಾರ #food ಮತ್ತು ಗ್ರಾಮೀಣ #village ಸಂಸ್ಕೃತಿಗೆ ಅನುಗುಣವಾಗಿ ವಿನ್ಯಾಸಗೊಳಿಸಬೇಕು. ಕೃಷಿಯ ಮಹತ್ವ ಹಾಗು ಗ್ರಾಮೀಣ ಪರಿಸರ ಪರಿಚಯಿಸುವ ಉದ್ದೇಶದಿಂದ ರೂಪಿಸುವ ಯೋಜನೆಯ ಮಾದರಿಯನ್ನು ಕೃಷಿ ಪ್ರವಾಸೋದ್ಯಮ ಎಂದು ಕರೆಯಬಹುದು.

Advertisement
Advertisement

-ಕೃಷಿ ಪ್ರವಾಸೋದ್ಯಮವು ಕೃಷಿ ಆಧಾರಿತ ಚಟುವಟಿಕೆಗಳನ್ನು ಪರಿಚಯಿಸಲು ಪ್ರವಾಸಿಗರನ್ನು ಜಮೀನಿಗೆ ಕರೆತರುವುದು,
ಆತಿಥ್ಯ ಮತ್ತು ಮನೋರಂಜನೆ ನೀಡುವುದು ಒಳಗೊಂಡಿರುತ್ತದೆ.

Advertisement

– ಕೃಷಿ ಪ್ರವಾಸೋದ್ಯಮವು ಕೃಷಿ ಉತ್ಪಾದನೆ, ಕೊಯ್ಲು, ಸಂಸ್ಕರಣೆ, ಮಾರುಕಟ್ಟೆ, ಇತ್ಯಾದಿ ಕೃಷಿ ಚಟುವಟಿಕೆಗಳನ್ನು ಪ್ರವಾಸೋದ್ಯಮದೊಂದಿಗೆ ಬೆಸೆಯುವುದು ಮತ್ತು ಆ ಮೂಲಕ ಪ್ರವಾಸಿಗರನ್ನು ಕೃಷಿಕರು ತಮ್ಮ ಕೃಷಿ ಭೂಮಿಗೆ ನಿರ್ದಿಷ್ಟ ಸೇವಾ ಶುಲ್ಕ ನಿಗದಿಪಡಿಸಿ ಅಹ್ವಾನ ಮಾಡುವುದರಿಂದ ಕೃಷಿಕರಿಗೆ ಹೆಚ್ಚುವರಿ ಆದಾಯಗಳಿಸುವ ಅವಕಾಶ ಮತ್ತು ಕೃಷಿ ಭೂಮಿಯ ನಿರ್ವಹಣಾ ವೆಚ್ಚವನ್ನು ನಿಭಾಯಿಸಲು ಸುಲಭವಾಗುತ್ತದೆ.

– ಕೃಷಿ ಪ್ರವಾಸೋದ್ಯಮ ಕೇಂದ್ರಗಳು ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್, ಹೋಮ್ ಸ್ಟೇ ಅಲ್ಲ ಮತ್ತು ಕುಡಿತ, ಜೂಜಾಟ, ಮೋಜು-ಮಸ್ತಿ ಮಾಡುವ ಸ್ಥಳಗಳಲ್ಲ. ಈ ವ್ಯತ್ಯಾಸವನ್ನು ಕೃಷಿಕರು ಮತ್ತು ಅತಿಥಿಗಳು/ಪ್ರವಾಸಿಗರು ಸ್ಪಷ್ಟವಾಗಿ ತಿಳಿದಿರಬೇಕು.

Advertisement

– ಕೃಷಿ ಪ್ರವಾಸೋದ್ಯಮ ಕೇಂದ್ರ ಹೆಚ್ಚಿನ ಬಂಡವಾಳ ಹೂಡಿ ನಗರದಲ್ಲಿರುವ ಐಷರಾಮಿ ಹೋಟೆಲ್, ರೆಸಾರ್ಟ್ ಮಾದರಿಯ ವ್ಯವಸ್ಥೆ ಕಲ್ಪಿಸುವುದಲ್ಲ. ಈಗಾಗಲೇ ನಿರ್ಮಿಸಿರುವ ತೋಟದ ಮನೆ, ಗ್ರಾಮದಲ್ಲಿರುವ ಕೃಷಿಕರ ಮನೆಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಿಸಿ ಪ್ರವಾಸಿಗರಿಗೆ ತಂಗುವ ವ್ಯವಸ್ಥೆ ಮಾಡುವುದು ಮತ್ತು ಅವರಿಗೆ ಹಳ್ಳಿಯ ವಾಸ, ಸಂಪ್ರಾದಾಯಿಕ ಅಡುಗೆ ರುಚಿ ಸವಿಯಲು ನೀಡುವುದು, ವೈವಿದ್ಯಮಯ ಕೃಷಿ ಅನುಭವ ನೀಡುವುದು ಕೃಷಿ ಪ್ರವಾಸೋದ್ಯಮದ ಪ್ರಮುಖ ಬಂಡವಾಳವಾಗಿರುತ್ತದೆ.

– ಕೃಷಿ ಪ್ರವಾಸೋದ್ಯಮ ಕೇಂದ್ರದಲ್ಲಿ ಪರಿಸರ ಕೃಷಿ, ಬೆಳೆ ವೈವಿಧ್ಯತೆ, ಬೀಜೋತ್ಪಾದನೆ, ಸಸ್ಯತಳಿ ಸಂರಕ್ಷಣೆ, ಕಸಿ ಕಟ್ಟುವ ವಿಧಾನ, ಕೃಷಿ ಬೆಳೆಯ ತಾಕುಗಳು, ತೋಟಗಾರಿಕೆ ನರ್ಸರಿ, ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳು, ಜೈವಿಕ ಉದ್ಯಾನವನ, ತೋಟಗಾರಿಕೆ, ಹಣ್ಣಿನ ತೋಟಗಳು, ದ್ರಾಕ್ಷಿತೋಟಗಳು, ವೈನ್ ತಯಾರಿಕೆ, ಹಸಿರು ಮನೆ, ಮೀನುಗಾರಿಕೆ, ರೇಷ್ಮೆ ಕೃಷಿ, ಅಣಬೆ, ಜೇನು ಕೃಷಿ, ಹಸು/ಕೋಳಿ /ಮೇಕೆ/ ಹಂದಿ ಸಾಕಾಣಿಕೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕ, ಸಾವಯವ ಉತ್ಪನ್ನಗಳ ಮಾರುಕಟ್ಟೆ ಇತ್ಯಾದಿ ಕೃಷಿ ಸಂಬಂಧಿತ ಘಟಕಗಳನ್ನು ಒಳಗೊಂಡಿರಬಹುದು. ಈ ಘಟಕಗಳಲ್ಲಿ ಕೃಷಿ ಶಿಬಿರ, ಹಣ್ಣುಗಳು ಅಥವಾ ತರಕಾರಿಗಳನ್ನು ಕುಯ್ಲು ಮಾಡುವುದು, ಪ್ರಾಣಿಗಳಿಗೆ ಆಹಾರ ನೀಡುವುದು, ಬಿತ್ತನೆಯಿಂದ ಕೊಯ್ಲು ಮಾಡುವವರೆಗೆ ಕೃಷಿ ಪ್ರಕ್ರಿಯೆಯಲ್ಲಿ ರೈತರೊಂದಿಗೆ ಸಂವಾದದಂತಹ ಚಟುವಟಿಕೆಗಳನ್ನು ಒಳಗೊಂಡಿರಬೇಕು.

Advertisement

– ಕೃಷಿ ಪ್ರವಾಸೋದ್ಯಮ ಕೇಂದ್ರ ನೆಡೆಸುವಾಗ ಕೃಷಿ ಮುಖ್ಯ ಉದ್ಯೋಗವಾಗಿರಬೇಕು ಮತ್ತು ಪ್ರವಾಸೋದ್ಯಮ ಅದರ ಪೂರಕ ಉದ್ಯೋಗವಾಗಿರಬೇಕು.

– ಕೃಷಿ ಪ್ರವಾಸೋದ್ಯಮ ಕೇಂದ್ರಗಳು ಕೃಷಿ ಉತ್ಪನ್ನಗಳ ನೇರ ಮಾರಾಟ ಕೇಂದ್ರ ಮತ್ತು ಕೃಷಿ ತರಬೇತಿ /ಅಧ್ಯಾಯನ /ಜ್ಞಾನ/ಕಲಿಕಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.ಸದರಿ ಕೇಂದ್ರಗಳಲ್ಲಿ ಕೃಷಿ ವಿಚಾರ,ಬೀಜಗಳ ಸಂರಕ್ಷಣೆ ,ಬೆಳೆ ಆಯೋಜನೆ, ಮೌಲ್ಯವರ್ಧನೆ,ಮಾರುಕಟ್ಟೆ, ಮಣ್ಣು ಮತ್ತು ನೀರಿನ ಸಂರಕ್ಷಣೆ,ಇನ್ನಿತರೇ ಸುಸ್ಥಿರ ಕೃಷಿ ವಿಚಾರಗಳ ಬಗ್ಗೆ ವಿಚಾರಗೋಷ್ಠಿ,ಚರ್ಚೆ,ಕಲಿಕೆ, ವಿಚಾರ ವಿನಿಮಯ ನೆಡೆಯುವ ಸ್ಥಳ ಅಷ್ಟೇ,ಇದು ಕೂಡ ಕೃಷಿಯ ಒಂದು ಭಾಗ.

Advertisement

– ಕೃಷಿ ಪ್ರವಾಸೋದ್ಯಮ ಕೇಂದ್ರಗಳು ವಾಣಿಜ್ಯೋದ್ಯಮ ಕೇಂದ್ರಗಳಲ್ಲ,ಇದು ಕೃಷಿ ಚಟುವಟಿಕೆಗಳನ್ನು ನೆಡೆಸುವ ಮತ್ತು ತಿಳಿಸುವ ಕೇಂದ್ರ.

– ಒಂದು ಅಧ್ಯಾಯನದ ಪ್ರಕಾರ 50% ನಗರದಲ್ಲಿ ವಾಸ ಮಾಡುತ್ತಿರುವ ಜನರಿಗೆ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಸಂಬಂಧಿಕರುಗಳಿಲ್ಲ,ಅವರು ಹಳ್ಳಿ ತೊರೆದಿದ್ದಾರೆ.93% ನಗರವಾಸಿಗಳು ಹಳ್ಳಿಯ ಸೌಂದರ್ಯ,ಸೊಗಡು ಸವಿಯಲು ಬಯಸುತ್ತಾರೆ. ಈ ಕಾರಣಗಳು ಕೃಷಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ.

Advertisement

– ಕೃಷಿ ಪ್ರವಾಸೋದ್ಯಮ ಕೇಂದ್ರವನ್ನು ಮೇಲಿನ ತತ್ವಗಳ ಆಧಾರದಲ್ಲಿ ಈಗಾಗಲೇ ನೆಡೆಸುತ್ತಿರುವ ಮತ್ತು ಪ್ರಾರಂಭ ಮಾಡಲು ಉದ್ದೇಶಿಸಿರುವ ಕೃಷಿಕರೊಂದಿಗೆ ಕಾರ್ಯಗಾರ ನೆಡೆಸಲು ಯೋಜನೆ ರೂಪಿಸಲಾಗುತ್ತಿದ್ದು,ಆಸಕ್ತರು ಸಂಪರ್ಕಿಸಲು ಕೋರಲಾಗಿದೆ.

-ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು, ಮೊಬೈಲ್:9342434530

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ…

16 hours ago

ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?

ಪರಿಸರ(Environment) ಸ್ವಾಸ್ಥ್ಯದಿಂದರೇ ಮಾತ್ರ ಅದರ ಭಾಗವಾದ ಮಾನವರಾದ(Human) ನಾವು ಸ್ವಾಸ್ಥ್ಯದಿಂದಿರಬಹುದು. ನಮ್ಮ ಆರೋಗ್ಯಕ್ಕೆ(Health)…

16 hours ago

ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?

ಭಾರತೀಯ(Indian) ಆಹಾರ ಪದ್ಧತಿಯಲ್ಲಿ(Food Style).... ಸಮುದ್ರದ ಉಪ್ಪು(Sea salt), ಅಯೋಡಿಕರಿಸಿದ ಟೇಬಲ್ ಉಪ್ಪು(Iodized…

17 hours ago

ಕೆಲ ಜಿಲ್ಲೆಯ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ : ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ

ಪ್ರಕೃತಿ ವಿಕೋಪಕ್ಕೆ(Natural disaster) ರೈತ(Farmer) ಬೆಳೆದ ಬೆಳೆಗಳು(Crop) ನಾಶವಾಗುವುದು ಸಾಮಾನ್ಯ. ಮಳೆ(Rain) ಜಾಸ್ತಿಯಾಗಿ…

17 hours ago

ವರುಣ ಕೃಪೆ ತೋರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…

19 hours ago

Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |

ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…

21 hours ago