ಕೃಷಿ ಕೂಡಾ ಒಂದು ಇಂಜಿನಿಯರಿಂಗ್. ಹೀಗೊಂದು ಪರಿಕಲ್ಪನೆ ಮಾಡಿಕೊಂಡವರು ಕೃಷಿಕ ಲಕ್ಷ್ಮಣ ದೇವಸ್ಯ. ಭವಿಷ್ಯದ ದೃಷ್ಟಿಯಿಂದ ಕೃಷಿಯಲ್ಲಿ ಸರಳೀಕೃತ ವ್ಯವಸ್ಥೆ ಆಗಬೇಕು ಹಾಗೂ ಕೃಷಿಕರ ತೋಟವೇ ಒಂದು ಅಂಗಡಿ ಎನ್ನುವ ಯೋಚನೆ ಲಕ್ಷ್ಮಣ ಅವರದ್ದು. ಹೀಗಾಗಿ ಕೃಷಿಯಲ್ಲಿ ಅವರದು ಇಂಜಿನಿಯರಿಂಗ್ ಕೆಲಸ. ಅವರು ಈ ಬಾರಿ #ನಮ್ಮಕೃಷಿಕ ಹೆಮ್ಮೆಯಿಂದ ಹೇಳುವ #ನಾನುಕೃಷಿಕ .
ಕೃಷಿ ಮಾಡುವುದು ಸೋಲಿನ ಕೆಲಸ ಎಂದು ಅನೇಕರ ಭಾವನೆ. ತನ್ನದೇ ಕೃಷಿ ಭೂಮಿಯಲ್ಲಿ ಟ್ರಾಕ್ಟರ್ ಓಡಿಸುವುದು, ಅಟೋ ಓಡಿಸುವುದು, ಎತ್ತಿನ ಗಾಡಿ ಓಡಿಸುವುದು ಸೋಲಿನ ಜೀವನ ಎಂದು ಅನೇಕರ ಮನಸ್ಥಿತಿ. ಆದರೆ ಆ ಬದುಕೇ ಸ್ಫೂರ್ತಿಯ ಬದುಕು ಎಂದು ಸಾಧಿಸಿದವರು ಯುವ ಕೃಷಿಕ ಲಕ್ಷ್ಮಣ ದೇವಸ್ಯ. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ದೇವಸ್ಯ ಎಂಬಲ್ಲಿ ಕೃಷಿ ಭೂಮಿ ಹೊಂದಿರುವ ಲಕ್ಷ್ಮಣ ಅವರು ಓದಿದ್ದು ಇಂಜಿನಿಯರಿಂಗ್. ಡಿಸೈನ್ ಇಂಜಿನಿಯರ್ ಆಗಿ ಎಚ್‌ಎಎಲ್ ನಲ್ಲಿದ್ದರು. ವಿದೇಶದಲ್ಲೂ ಕೆಲಸ ಮಾಡಿದ್ದರು. ಅವರ ಪತ್ನಿ ದಿವ್ಯ ಕೂಡಾ ಟಾಟಾ ಸಮೂಹ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಇಬ್ಬರೂ ತೋಟದಲ್ಲಿ ಇಳಿದು ಕೆಲಸ ಮಾಡುತ್ತಿದ್ದಾರೆ. ಉತ್ತಮ ಹೈನುಗಾರರೂ ಆಗಿದ್ದಾರೆ. ಕೃಷಿಯಲ್ಲಿನ ಸಾಧ್ಯತೆಗಳ ಬಗ್ಗೆ ಸತತ ಯೋಚನೆ ಮಾಡುತ್ತಿದ್ದಾರೆ. ಕೃಷಿಯಲ್ಲಿ ಸೋಲು-ಗೆಲುವು ಎನ್ನುವುದಕ್ಕಿಂತಲೂ ಖುಷಿ ಎಲ್ಲಿದೆ ಎಂದು ಕಂಡುಕೊಂಡವರು. ಹಾಗಂತ ಸಾಫ್ಟ್ವೇ ರ್ ಬದುಕು ಬದುಕೇ ಅಲ್ಲ ಎಂದು ಎಲ್ಲೂ ಲಕ್ಷ್ಮಣ ಹೇಳುತ್ತಿಲ್ಲ. ದೇಶದ ಪ್ರಗತಿಗೆ, ಕೃಷಿ ಪ್ರಗತಿಗೆ ಅದೂ ಬೇಕು. ಆದರೆ ಹೊಲ ಬಿಟ್ಟು, ಕೃಷಿ ಬಿಟ್ಟು ಕಷ್ಟ ಎನ್ನುವುದಷ್ಟೇ ನನ್ನ ಉದ್ದೇಶ ಎನ್ನುತ್ತಾರೆ.ಅವರದೇ ಮಾತಲ್ಲಿ ನಾನು ಏಕೆ ಕೃಷಿಕ ಎಂದು ಹೇಳುತ್ತಾರೆ…
ಕೃಷಿಗೆ ಇಳಿದು ಒಂದು ವರ್ಷದ ಬಳಿಕ ಮತ್ತೆ ಅಮೇರಿಕಾದಲ್ಲಿ ಕೆಲಸ ಮಾಡಿದ ಅನುಭವವೂ ಲಕ್ಷ್ಮಣ ಚೆನ್ನಾಗಿ ವಿವರಿಸುತ್ತಾರೆ. ರಾಜಧಾನಿಯಿಂದ ಕೃಷಿಗೆ ಬಂದಾಗ ಅನೇಕ ಕೃಷಿಕರು ನೆಗೆಟಿವ್ ಆಗಿಯೇ ಮಾತನಾಡಿದರು. ಕೃಷಿ ಯಶಸ್ಸಿನ ಬಗ್ಗೆ ದಾರಿ ತೊರಿಸಲಿಲ್ಲ, ಬದಲಾಗಿ ಮಣ್ಣು ಮೆತ್ತಿಸಿಕೊಳ್ಳುವುದೇ ಸೋಲು ಎಂದೇ ಆಗಾಗ ಹೇಳಿದರು. ಈ ಎಲ್ಲದರೂ ನಡುವೆಯೂ ತಾನು ನಂಬಿದ ಬದುಕನ್ನು ಬಿಡಲಿಲ್ಲ ಎನ್ನುವ ಲಕ್ಷ್ಮಣ , ನಾನು ಕೃಷಿಗೆ ಇಳಿದಾಗ ಮೊದಲು ಹಾಕಿದ ಯೋಜನೆ ಹಟ್ಟಿ ನಿರ್ಮಾಣ. ಕೃಷಿಗೆ ಮೂಲ ಹೈನುಗಾರಿಕೆ. ಇದನ್ನೇ ಮೊದಲು ಆರಂಭಿಸಿದೆ. ಅಲ್ಲಿ ಹಂತ ಹಂತವಾಗಿ ಯಶಸ್ಸು ಕಂಡೆ ಎನ್ನುತ್ತಾರೆ. ಆ ಬಳಿಕವೇ ಪರಂಪರಾಗತವಾಗಿ ಬಂದ ಅಡಿಕೆ, ರಬ್ಬರ್, ತೆಂಗು ಕೃಷಿಯನ್ನು ಬೆಳೆಸಿದೆ. ಅದರ ಜೊತೆಗೆ ಅಡಿಕೆಯ ಸ್ವಲ್ಪ ತೆಗೆದು ಭತ್ತದ ಕೃಷಿ ಮಾಡಿದೆ, ಮೀನು ಸಾಕಾಣಿಕೆ ಆರಂಭಿಸಿದೆ, ಜೋಳ ಬೆಳೆದೆ, ಹಸುಗಳಿಗೆ ಹುಲ್ಲು ನಾಟಿ ಮಾಡಿದೆ, ನಾನೇ ಟ್ರಾಕ್ಟರ್ ಓಡಿಸುತ್ತೇನೆ, ಪತ್ನಿ ದಿವ್ಯ ಹಾಲು ಮಾರಾಟದಲ್ಲಿ ಸಹಕರಿಸುತ್ತಾರೆ ಎನ್ನುತ್ತಾ ಕೃಷಿ ವಿಸ್ತಾರದ ಬಗ್ಗೆ ವಿವರಿಸುತ್ತಾರೆ ಲಕ್ಷ್ಮಣ್.
ಇದೀಗ ಕಿಸಾನ್ ಕಿ ದುಕಾನ್ ಎಂಬ ವಿಶೇಷ ಕಲ್ಪನೆಯನ್ನು ಇರಿಸಿಕೊಂಡಿದ್ದಾರೆ. ಈಗಾಗಲೇ ಹೈನುಗಾರ ಆಗಿರುವ ಲಕ್ಷ್ಮಣ್ ಅವರು ಪತಿ ಪತ್ನಿ ಇಬ್ಬರೂ ಹೈನುಗಾರಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಕೃಷಿಕನ ಯಾವುದೇ ವಸ್ತುಗಳು ನೇರವಾಗಿ ಮಾರಾಟ ಆಗಬೇಕು. ಅಂದರೆ ಕೃಷಿಕನ ತೋಟವೇ ಅಂಗಡಿ. ಹಾಗೆಂದು ಉದ್ಯಮ ಅದಲ್ಲ. ಕೃಷಿಕರು ತಾವು ಬೆಳೆದ ವಸ್ತುಗಳ ವಿನಿಮಯ ಮಾಡಬಹುದು. ಸಣ್ಣ ಸಣ್ಣ ಹಳ್ಳಿಯಲ್ಲಿ ಅಂಗಡಿ ಸೆಲ್ಪ್ ಅಂಗಡಿ ಇಡಬಹುದು. ಅದಕ್ಕೊಂದು ನಿಗದಿತ ಜಾಗದಲ್ಲಿ ಥಂಬ್ ಮಾದರಿಯ ಪೆಟ್ಟಿಗೆ ಮಾಡಿ ಅದರೊಳಗೆ ಕೃಷಿಕ ಬೆಳೆದ ವಸ್ತುಗಳ ವಿನಿಮಯ ಮಾಡುವ ಯೋಚನ ಮಾಡಿದ್ದಾರೆ ಅದು ಕಿಸಾನ್ ಕಿ ದುಕಾನ್. ಈ ಕಲ್ಪನೆ ಈಗ ಮೂರ್ತ ರೂಪ ಪಡೆಯುತ್ತಿದೆ. ಬಹಳ ಸುಂದರವಾದ ಈ ವ್ಯವಸ್ಥೆ ಹಳ್ಳಿಯಲ್ಲಿ ತಲೆ ಎತ್ತುತ್ತಿದೆ. ಇಂತಹ ವಿನೂತನ ಯೋಚನೆಯ ಕೃಷಿ ಇಂಜಿನಿಯರ್ ಪ್ರತೀ ಹಳ್ಳಿಯಲ್ಲಿ ಹೆಮ್ಮೆಯಿಂದ ಹೆಜ್ಜೆ ಇಡುವಂತಾಗಲಿ. ಲಕ್ಷ್ಮಣ ದೇವಸ್ಯ ಸಂಪರ್ಕ : 7337857840
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…