Advertisement
ಅಂಕಣ

ಬದಲಾದ ಕೃಷಿ ಕಾಯಿದೆಗಳಿಂದ ರೈತರಿಗೆ ನಿಜವಾಗೂ ಏನು ಪರಿಣಾಮ ?

Share
ತ್ತೀಚೆಗೆ ಕೇಂದ್ರ ಸರಕಾರದ ಮೂಲಕ ಅಂಗೀಕಾರವಾದ ಕೃಷಿ ಕಾಯಿದೆಗಳು ದೇಶದ ರೈತರು ಇಂದು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರದಲ್ಲಿ ಹೊಸ ಹಾದಿಯನ್ನು ತೋರಬಲ್ಲದು.
50ರ ದಶಕದಲ್ಲಿ ಅಂದಿನ ಕೇಂದ್ರ ಸರಕಾರ ದೇಶದ ಆಹಾರದ ಕೊರತೆಯ ಹಿನ್ನೆಲೆಯಲ್ಲಿ ಹಸುರು ಕ್ರಾಂತಿ ಎಂಬ ಮುನ್ನುಡಿಯೊಂದಿಗೆ ಕೃಷಿ ನೀತಿಯನ್ನು ರಚಿಸಿತ್ತು ಹಾಗೂ ಮುಂದಿನ ಮೂವತ್ತು ವರ್ಷಗಳಲ್ಲಿ ದೇಶ ತನಗೆ ಬೇಕಾಗುವಷ್ಟು ಆಹಾರ ಉತ್ಪಾದನೆ ಸಾಧಿಸುವಲ್ಲಿ ಅದು ಪೂರಕವಾಗಿತ್ತು. ನಂತರ ಸಾಕಷ್ಟು ಆಹಾರ ಉತ್ಪಾದನೆಯ ಉತ್ತರದಲ್ಲಿ ಆಹಾರದ ಗುಣಮಟ್ಟ ಸುಧಾರಿಸುವುದು ಅವಶ್ಯ, ಮಕ್ಕಳಿಗೆ ಪೌಷ್ಟಿಕಾಂಶ ಭರಿತ ಆಹಾರದ ಲಭ್ಯತೆ ಯನ್ನು ಮನಗಂಡು ಹಾಲು ಉತ್ಪಾದನೆ ವೃದ್ಧಿಗಾಗಿ ಕ್ಷೀರ ಕ್ರಾಂತಿ, ಅಕ್ಕಿ, ಗೋಧಿಯ ಜತೆಯಲ್ಲಿ ಇತರ ಸಮತೂಕದ ಆಹಾರವನ್ನೂ ಒದಗಿಸುವಲ್ಲಿ ಅಂದಿನ ಕೃಷಿ ನೀತಿ ಕೇಂದ್ರಿಕೃತವಾಗಿತ್ತು. ಇಂದು ದೇಶದಲ್ಲಿ ಸಾಕಷ್ಟು ಆಹಾರ ಉತ್ತಾದನೆ ಹಾಗೂ ಉತ್ತಮ ಗುಣಮಟ್ಟ ಎರಡೂ ಸುಮಾರಾಗಿ ಸಾಧಿಸಲಾಗಿದ್ದು ಇಂದು ಸರಕಾರ ಸಮಸ್ಯೆಯಲ್ಲಿರುವ ರೈತರಿಗೆ ಪೂರಕ ಅಂಶ ಒದಗಿಸುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನವೇ ಈ ಹೊಸ ಕೃಷಿ ಖಾಯಿದೆಗಳು.
ರೈತರಿಗೆ ಇಂದಿರುವ ಹಲವಾರು ಸಮಸ್ಯೆಗಳಲ್ಲಿ ಪ್ರಮುಖ ಅನ್ನುವಂತಹದ್ದು, ರೈತರ ಉತ್ಪನ್ನಗಳು ಹಣವಾಗಿ ಪರಿವರ್ತನೆ (MONETISATION OF FARM PRODUCE) ಆಗುವ ಹಂತದಲ್ಲಿ ತೊಡಕಾಗಿರುವ ಮಾರುಕಟ್ಟೆ ಸಮಸ್ಯೆಗಳು. APMC ಗಳು ದಶಕಗಳ ಕಾಲದಿಂದ ಈ ಪ್ರಯತ್ನ ಮಾಡಿದ್ದು ಸತ್ಯವೇ ಆದರೂ ಇಂದು ಅವುಗಳ ಪರಿಣಾಮ ರೈತರಿಗೆ ನಗಣ್ಯ ಅನ್ನುವ ವಾತಾವರಣ ಇದೆ. ಕೃಷಿ ಮಾರುಕಟ್ಟೆಯಲ್ಲಿ ರೈತರಿಗೆ ಆಗುವ ಬವಣೆ, ನಿರೀಕ್ಷಿತ ಬೆಲೆ ದೊರೆಯದಿರುವದು ಹಾಗೂ ವ್ಯಾಪಾರಿಗಳು ಮತ್ತು ಅಧಿಕಾರಿಗಳ ಒಗ್ಗಟ್ಟು ಹಾಗೂ ರಾಜಕೀಯ ಪ್ರೇರಿತ ಆಡಳಿತ ಸಮತಿಗಳು ಪರಿಣಾಮಕಾರಿ ಆಗಿರದಿರುವುದು ಎಲ್ಲವೂ ರೈತರು ಅನುಭವಿಸಿದ ಸತ್ಯವೇ. ಆ ಹಿನ್ನೆಲೆಯಲ್ಲಿ ರೈತರಿಗೆ ಮಾರಾಟ ಮಾಡುವಲ್ಲಿ ಇನ್ನು ಹಲವು ಅವಕಾಶಗಳು ದೊರೆಯಲ್ಲಿ ಅಂತ ಮಾಡಿರುವ ಪರಿಣಾಮಕಾರಿ ಪ್ರಯತ್ನ ಇದು.
ಆರಂಭದಲ್ಲಿ ಕೃಷಿ ಬೆಳೆಯಲ್ಲಿ ಈಗಾಗಲೇ ಅವಶ್ಯಕ ವಸ್ತುಗಳು ಅಂತ ಘೋಷಣೆ ಆಗಿರುವ ಅಕ್ಕಿ, ಜೋಳ ವಗೈರೆ ವಸ್ತುಗಳನ್ನು ಯುದ್ದ, ಬರಗಾಲದಂತಹ ವಿಶೇಷ ಸನ್ನಿವೇಶಗಳ ಹೊರತಾಗಿ ಅವಶ್ಯಕ ವಸ್ತುಗಳು ಅಂತ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ತಿದ್ದುಪಡಿ ಮಸೂದೆ ತೀರ್ಮಾನಿಸಿದೆ. ರೈತರು ದೊಡ್ಡ ರೀತಿಯಲ್ಲಿ ಇತರ ಪ್ರದೇಶಗಳಲ್ಲಿ ವಸ್ತುಗಳನ್ನು ಮಾರಲು ಇದ್ದಂತಹ ಈ ತೊಡಕು ಈ ಮೂಲಕ ಪರಿಹಾರ ಆಗಿದೆ. ಬೆಲೆಯಲ್ಲಿ 100% ಕ್ಕಿಂತ ಹೆಚ್ಚಿನ ವ್ಯತ್ಯಾಸ ಆದಲ್ಲಿ ಈಗಲೂ ಆ ವಸ್ತುವನ್ನು ಅವಶ್ಯಕ ವಸ್ತು ಅಂತ ಪರಿಗಣಿಸಿ ಅದರ ದಾಸ್ತಾನು ಮಾಡುವದನ್ನು ನಿಷೇಧಿಸಲೂ ಈಗಲೂ ಅವಕಾಶ ಇದೆ.
ಇನ್ನು ಎರಡನೇ ಖಾಯಿದೆಯಂತೆ,
ರೈತರು ತಾವು ಬೆಳೆದ ವಸ್ತುಗಳನ್ನು APMC  ಹೊರತು ಪಡಿಸಿ ದೇಶದ ಯಾವುದೇ ಪ್ರದೇಶದಲ್ಲಿ ತಾನೇ, ಅಥವಾ ತಂಡವನ್ನು ರಚಿಸಿ ಅಥವಾ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟ ಮಾಡಲು ಅವಕಾಶ ನೀಡುವುದು. ಯಾವ ರೈತರಿಗೆ ಇಂತಹ ಕೌಶಲ್ಯ ಇದೆಯೋ ಅವರು ಇದನ್ನು ಉಪಯೋಗಿಸಿ ತಮ್ಮ ವಸ್ತುಗಳಿಗೆ ಹೆಚ್ಚಿನ ಬೆಲೆ ಪಡೆಯಲು ಅವಕಾಶ. ಯಾರಿಗೆ ಇದು ಸಾಧ್ಯ ಇಲ್ಲವೋ ಅಂತಹವರು APMC  ವ್ಯಾಪ್ತಿಯ ಒಳಗೇ ಈಗಿನಂತೆ ಮಾರಾಟ ಮಾಡುವಲ್ಲಿ ಯಾವುದೇ ಸಮಸ‍್ಯೆ ಇನ್ನು ಮುಂದೆಯೂ ಇರಲ್ಲ.
ಮೂರನೇಯದಾಗಿ,
ರೈತ ಒಪ್ಪಂದ ಬೆಳೆ ಮಾರಾಟಕ್ಕಾಗಿ (CONTRACT FARMING) ಯಾವುದೇ ಸಂಸ್ಥೆಯೊಂದಿಗೆ ಒಪ್ಪಂದ ಮಾಡಬಹದು ಅಂತ, ದೊಡ್ಡ ದೊಡ್ಡ ಸಂಸ್ಥೆಗಳು
1) ರೈತನ ಜತೆ  ಅಥವಾ
2) ರೈತ ಸಮೂಹದ ಜತೆ  ಅಥವಾ
3) ಸಹಕಾರಿ ಸಂಸ್ಥೆಗಳ ಜತೆ ಈ ಒಪ್ಪಂದ ಮಾಡಿ ರೈತನಿಗೆ ಗುಣಮಟ್ಟದ ಬೆಳೆ ಬೆಳೆಯಲು ಬೇಕಾದ ಆರ್ಥಿಕ ಸಹಾಯ, ತಂತ್ರಜ್ಞಾನ ಒದಗಿಸಿ ನಿಗದಿತ ಬೆಲೆಯಲ್ಲಿ ಖರೀದಿ ಮಾಡುವ ವ್ಯವಸ್ಥೆ ಇದಾಗಿದೆ.
ಇದರಲ್ಲಿ ರೈತ ಬಹುರಾಷ್ಟ್ರೀಯ ಸಂಸ್ಥೆಗಳ ಅಡಿಯಾಳಾಗುವ ಸಂಭವ ಇರಬಾರದು ಎಂದು
1) ಬೆಳೆಯ ಗುಣಮಟ್ಟವನ್ನು ಕಂಪನಿ ರೈತನ ಬಾಗಿಲ್ಲೇ ಖಚಿತ ಪಡಿಸುವುದು (FARM GATE),
2) ಬೆಲೆ ನಿಗದಿ ಸಮಯದಲ್ಲಿ ಸರಕಾರಿ ಏಜೆನ್ಸಿ ಸಾಕ್ಷಿಯಾಗಿರುವುದು,
3) ಯಾವುದೇ ಸಂದರ್ಭದಲ್ಲಿಯೂ ಸಂಸ್ಥೆ ಕೃಷಿಗೆ ಎಷ್ಟೇ ಹಣ ಹಾಕಿದರೂ ಉತ್ಪನ್ನಗಳ ಮಾಲಿಕತ್ವ ರೈತನಲ್ಲಿ ಉಳಿಯುವುದು,
4) ಯಾವುದೇ ಸಂದರ್ಭದಲ್ಲಿ ರೈತನ ಭೂಮಿಯ ಮಾಲಕತ್ವವನ್ನು ಸಂಸ್ಥೆ ಪಡೆಯಬಾರದು ಹಾಗೂ ಭೂಮಿ ಅಡಮಾನ ಮಾಡಬಾರದು ವಗೈರೆ ಅಂಶಗಳನ್ನು ಸೇರಿಸಲಾಗಿದೆ.
ಸರಕಾರ ಸಮಯ ಸಮಯಕ್ಕೆ ಇನ್ನು ಸಾಕಷ್ಟು ಹೆಜ್ಜೆಗಳನ್ನು ಪಾರ್ಲಿಮೆಂಟಿನ ಗಮನಕ್ಕೆ ತಂದೇ ಸೇರಿಸಬಹುದು ಮೊದಲಾದ ಅಂಶಗಳು ರೈತನಿಗೆ ರಕ್ಷಣೆ ಒದಗಿಸಬಲ್ಲದು. ಅಲ್ಲದೇ ರೈತ ಒಪ್ಪಂದ ಮಾಡುವ ಆಸಕ್ತಿ ಹೊಂದಿಲ್ಲವಾದರೆ ಅಥವಾ ಭಯ ಇದ್ದಲ್ಲಿ ಮತ್ತೆ  APMC  ವ್ಯವಸ್ಥೆಯೊಳಗೆ ಮಾರಾಟ ಮಾಡುವ ಅವಕಾಶ ಇನ್ನೂ ಮುಕ್ತವಾಗಿ ಇಟ್ಟುಕೊಳ್ಳಲಾಗಿದೆ.
ಪರಿವರ್ತನೆಗೆ ತಕ್ಷಣ ಒಗ್ಗಿಕೊಳ್ಳಬೇಕಾದ್ದು ಇಂದಿನ ಅನಿವಾರ್ಯತೆ. ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಗಳು ಕಾಲ ಕಾಲಕ್ಕೆ ಬರುತ್ತಿದ್ದು ಅಜ್ಜ ನೆಟ್ಟ ಆಲದ ಮರಕ್ಕೇ ಸುತ್ತು ಹಾಕ್ತೀನಿ ಅನ್ನೋ ಮನಸ್ಥಿತಿಯಿಂದ ರೈತರೂ ಹೊರ ಬರಬೇಕು ಹಾಗು ದೊರಕಿರುವ ಅವಕಾಶಗಳನ್ನು ತಮ್ಮ ಪರವಾಗಿ ಉಪಯೋಗಿಸುವ ಧೈರ್ಯ ಹಾಗೂ ತಿಳುವಳಿಕೆಯನ್ನು ಹೊಂದಬೇಕು.  ಅವಾಗ ಮಾತ್ರ ರೈತ ತಮ್ಮ ಸಮಸ್ಯೆಗಳ ಸುಳಿಯಿಂದ ಹೊರಬರಲು ಅವಕಾಶಗಳ ಲಭ್ಯವಾಗುವುದು.
ವಿಪಕ್ಷಗಳು ಆಡಳಿತ ಪಕ್ಷಕ್ಕೆ ವಿರೋಧ ತೋರಿದಾಗ ಅವುಗಳು ಸಹಜವಾಗಿಯೇ ಅವರ ಕರ್ತವ್ಯ ನಿರ್ವಹಿಸಿದಂತಾಗುವುದು. ಆದರೆ ಅವರ ವಾದಗಳು ಸಮಾಜಕ್ಕೆ ಹಾಗೂ ಖಾಯಿದೆ ಪರಿಣಾಮ ಬೀರುವ ಸಮೂಹಕ್ಕೆ ಪೂರಕವಾಗಿರ ಬೇಕು. ಅವಾಗ ಸರಕಾರವೂ ಎಚ್ಚೆತ್ತುಗೊಳ್ಳುವುದು ಹಾಗು  ಸಮಸ್ಯೆಗಳೂ ಸಾಕಷ್ಟು ಪರಿಹಾರ ಆಗುವುದು. ಅದನ್ನು CONSTRUCTIVE OPPOSITION ಎಂದು ಹೇಳ್ತಾರೆ. ಈ ವಿಚಾರದಲ್ಲಿಯೂ ವಿಪಕ್ಷಗಳು ನಿರೀಕ್ಷೆಯಂತೆ ಪ್ರತಿರೋಧ ಒಡ್ಡಿರುವುದು ಸತ್ಯ. ಆದರೆ ಅದಕ್ಕೆ ಸದೃಡವಾದ ಕಾರಣಗಳನ್ನು ಕೊಡಲು  ಈ ಹಂತದಲ್ಲಿ ವಿಫಲ ಆಗಿದೆ ಅಂತಾ ಅನಿಸಿಕೆ. ಕಾರಣ ಪಾರ್ಲಿಮೆಂಟಿನಲ್ಲಿ ಮಾತನಾಡಿದ ಯಾವುದೇ ವಿಪಕ್ಷದ ಸಂಸದ ಮಸೂದೆಯ ವಿರೋಧಕ್ಕೆ ಲಾಜಿಕಲ್ ಕಾರಣ ಕೊಡದೇ, ಕೇವಲ ರೈತರ ಹಿತಾಸಕ್ತಿ ಕಾಪಡುವಲ್ಲಿ ಈ ಮಸೂದೆ ಮಾರಕ ಅಂತ ಹೇಳಿದ್ದಾರೆ ಮತ್ತು  ಅದನ್ನು ಪುಷ್ಟೀಕರಿಸುವಲ್ಲಿ ಎಡವಿವೆ.
# ವಿಶ್ವೇಶ್ವರ ಭಟ್ ಬಂಗಾರಡ್ಕ
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

22 hours ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

24 hours ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

2 days ago

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

2 days ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

3 days ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

3 days ago