ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ ಹಬ್ಬವು ಸಂಜೆಯವರೆಗೆ ವಿವಿಧಗೋಷ್ಠಿಗಳೊಂದಿಗೆ ನಡೆಯಲಿದೆ ಎಂದು ಕೃಷಿ ಹಬ್ಬ ಸಮಿತಿಯ ಶಂಕರ ಸಾರಡ್ಕ ತಿಳಿಸಿದ್ದಾರೆ.
Advertisement
ಆರಾಧನಾ ಕಲಾಭವನ, ಮುಳಿಯ ಪಾರ್ವತಿ ಮ್ಯಾನೇಜ್ ಫಾರ್ಮ್ ಲ್ಯಾಂಡ್ಸ್, ಮಿನ್ ಶಕ್ತಿ ಹರಳು ಕ್ಯಾಲ್ಸಿಯಂ ಮತ್ತು ಡಾಲಮೈಟ್, ಕುದುಕೋಳಿ ಡೈರಿ ಫಾಮ್ಸ್ ಪ್ರಾಯೋಜಕತ್ವದಲ್ಲಿ ನಡೆಯುವ ಕೃಷಿ ಹಬ್ಬವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸತ್ಯನಾರಾಯಣ ಬೆಳೇರಿ ಉದ್ಘಾಟಿಸುವರು. ಇದೇ ವೇಳೆ ಪುಸ್ತಕ ಬಿಡುಗಡೆ ನಡೆಯಲಿದೆ. ಸಭಾಕಾರ್ಯಕ್ರಮದ ಬಳಿಕ ವಿಶೇಷವಾದ ಕೃಷಿ ಸೆಮಿನಾರ್‌ಗಳು ನಡೆಯಲಿದೆ. ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕ್ರಮಗಳು, ಬಿದಿರು ಕೃಷಿ, ಕಾರ್ಬನ್ ಕ್ರೆಡಿಟ್, ಕೂಲಿ ಸಮಸ್ಯೆ ಹಗುರಗೊಳಿಸುವ ಯಂತ್ರತಂತ್ರಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement