ಅಡಿಕೆ ಬೆಳೆಗಾರರಿಗೆ ನೂತನ ತಂತ್ರಜ್ಞಾನವೊಂದನ್ನು ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಚಾಲಿ ಅಡಿಕೆ ಸುಲಿದ ಬಳಿಕ ಗುಣಮಟ್ಟದ ಅಡಿಕೆ, ಪಠೋರ, ಕೋಕಾ ಪ್ರತ್ಯೇಕಿಸಲು ಅಥವಾ ವಿಂಗಡಿಸಲು ಎಐ ಚಾಲಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮಾದರಿಯು ಇದೀಗ ಗಮನ ಸೆಳೆದಿದೆ.
ಅಡಿಕೆ ಹಾಳೆತಟ್ಟೆ ಉದ್ಯಮವನ್ನು ನಡೆಸುತ್ತಿರುವ ನಿಡ್ಲೆಯ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ರಾವ್ ಹಾಗೂ ಸಹ-ಸಂಸ್ಥಾಪಕ ಅತಿಶಯ ಜೈನ್ ಅವರು ಎರಡು ವರ್ಷಗಳ ಹಿಂದೆ ಗುಣಮಟ್ಟದ ಆಧಾರದ ಮೇಲೆ ಹಾಳೆತಟ್ಟೆ ಬೇರ್ಪಡಿಸಲು ಎಐ ತಂತ್ರಜ್ಞಾನ ಆಧಾರಿತ ತಂತ್ರಜ್ಞಾನವನ್ನು ಬಳಸಿದ್ದರು. ಅದಾದ ಬಳಿಕ ಅದೇ ತಂಡವು ಅಡಿಕೆ ವಿಭಾಗಿಸಲು ಎಐ ತಂತ್ರಜ್ಞಾನ ಬಳಕೆ ಮಾಡಿ ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿದ್ದಾರೆ. ಸದ್ಯ ಶೇ.80 ರಷ್ಟು ಅಡಿಕೆ ದರ್ಜೆಯನ್ನು, ಗುಣಮಟ್ಟವನ್ನು ಎಐ ಆಧಾರಿತವಾಗಿ ಪತ್ತೆ ಮಾಡುತ್ತದೆ. ಇನ್ನೂ ಅಭಿವೃದ್ಧಿಪಡಿಸಲು ಇನ್ನೂ ಆರು ತಿಂಗಳುಗಳು ಬೇಕಾಗುತ್ತದೆ. ಇತರ ದರ್ಜೆಯ ಅಡಿಕೆಯನ್ನು ಗುರುತಿಸಲು ಮತ್ತು ವಿಂಗಡಿಸಲು ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದು ಎಂದು ಅವಿನಾಶ್ ರಾವ್ ಹೇಳಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಚಟುವಟಿಕೆಯನ್ನು ವೀಕ್ಷಿಸಲು ಅಡಿಕೆ ವಲಯದ ಸಹಕಾರಿ ಸಂಸ್ಥೆಗಳು ಹಾಗೂ ಪ್ರಮುಖರು ನಿಡ್ಲೆಯ ಕಂಪೆನಿಗೆ ಭೇಟಿ ನೀಡಿದರು. ಈ ಸಂದರ್ಭ ಶಾಸಕ ಆರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕ್ಯಾಂಪ್ಕೋ ಎಂಡಿ ಸತ್ಯನಾರಾಯಣ, ಶಿರಸಿಯ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ತುಮ್ಕೋಸ್ ಅಧ್ಯಕ್ಷ ಶಿವಕುಮಾರ್, ಮ್ಯಾಮ್ಕೋಸ್ ಅಧ್ಯಕ್ಷ ಉಪಾಧ್ಯಕ್ಷ ವಿ.ಪಿ.ಮಹೇಶ್, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ನಿವೃತ್ತ ಉಪನ್ಯಾಸಕ ವಿಘ್ನೇಶ್ವರ ಭಟ್ ವರ್ಮುಡಿ, ಸಂಶೋಧಕ ಬದನಾಜೆ ಶಂಕರ ಭಟ್, ಎಆರ್‌ಡಿಎಫ್ ಕಾರ್ಯನಿರ್ವಹಣಾಧಿಕಾರಿ ಡಾ.ಕೇಶವ ಭಟ್ ಮೊದಲಾದವರು ಇದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…
ಪ್ರಕೃತಿಯಲ್ಲಿ ಇರುವ ಡಿಎನ್ಎ, ಪ್ರೋಟೀನ್ಗಳಂತೆ ಪ್ಲಾಸ್ಟಿಕ್ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…
2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…
ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…
ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…
ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…