ಎಗ್ರಿಟೂರಿಸಂ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿಯೊಂದನ್ನು ತೆರೆದ ಕೃಷಿಕ ಸುರೇಶ್‌ ಬಲ್ನಾಡು |

January 28, 2025
7:05 AM
ಅಡಿಕೆಯ ವಿವಿಧ ಸಮಸ್ಯೆಗಳು ಇಂದು ಕೃಷಿಕರನ್ನು ಕಾಡಲು ಆರಂಭವಾಗಿದೆ. ಅಡಿಕೆಯ ಜೊತೆಗೆ ಇನ್ನೊಂದು ಕೃಷಿ-ಕೃಷಿ ಚಟುವಟಿಕೆ ಬೇಕು ಎನ್ನುವ ಮಾತುಗಳು ಕೇಳುತ್ತಿವೆ. ಇದೇ ವೇಳೆ ಕೃಷಿಯಲ್ಲಿ ಮಾದರಿ ತೋಟಗಳ ಬಗ್ಗೆಯೂ ಪರಿಚಯ ಅಗತ್ಯ ಇದೆ. ಆದರೆ ಸಮಯ ವ್ಯರ್ಥವಾಗದೆ, ಕೃಷಿಕನಿಗೂ ಆದಾಯವಾಗುವಂತೆ ಮಾಡುವ ಮಾದರಿಗಳು ಬೇಕಿದೆ.  ಇಂತಹದೊಂದು ಮಾದರಿಯನ್ನು ಕೃಷಿಕ ಸುರೇಶ್‌ ಬಲ್ನಾಡು ಪರಿಚಯಿಸಿದ್ದಾರೆ.

ಕಾಳುಮೆಣಸು ಕೃಷಿಯಲ್ಲಿ ವಿಶೇಷವಾಗಿ ಸಾಧನೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ  ಬಲ್ನಾಡಿನಲ್ಲಿರುವ ಕೃಷಿಕ ಸುರೇಶ್‌ ಬಲ್ನಾಡು ಅವರು ಇದೀಗ ಕೃಷಿ ಪ್ರವಾಸೋದ್ಯಮದ  ಇನ್ನೊಂದು ಅವಕಾಶವನ್ನು ಕೃಷಿಕರಿಗೆ ಪರಿಚಯಿಸಿದ್ದಾರೆ. ಈಚೆಗೆ “ಸಮ್ಮಿಲನ” ಹೆಸರಿನಲ್ಲಿ ನಡೆದ  ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ರಾಜ್ಯದ ವಿವಿದೆಡೆಯಿಂದ ಕೃಷಿಕರು ಹಾಗೂ ಕೃಷಿ ಆಸಕ್ತರು ಆಗಮಿಸಿದ್ದರು. ಕೃಷಿ ಬೆಳವಣಿಗೆಗೆ, ಗ್ರಾಮೀಣಾಭಿವೃದ್ಧಿ ಬೆಳವಣಿಗೆಗೆ ಎಗ್ರಿಟೂರಿಸಂ ಕೂಡಾ ನೆರವಾಗುತ್ತದೆ. ಕೃಷಿಕರಿಗೆ ಆದಾಯವನ್ನೂ ತರಬಲ್ಲ ಎಗ್ರಿಟೂರಿಸಂ ವಿಸ್ತರಣೆಗೆ ಅವಕಾಶಗಳೂ ಇವೆ. ಇದೊಂದು ಮಾದರಿಯಾಗಿ ಪರಿಗಣಿಸಲು ಸಾಧ್ಯವಿದೆ.…..ಮುಂದೆ ಓದಿ….

Advertisement

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಆರ್ಥಿಕ ಅಭಿವೃದ್ಧಿಯ ಪ್ರಯತ್ನಗಳನ್ನು ಬೆಂಬಲಿಸುವ ಒಂದು ಮಾರ್ಗವೆಂದರೆ ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವುದು. ಸಾಮಾನ್ಯವಾಗಿ ಮೌಲ್ಯವರ್ಧಿತ, ಕೃಷಿ ಸಂಬಂಧಿತ, ಕೆಲಸ ಮಾಡುವ ತೋಟಗಳಲ್ಲಿ ಇದು ಸಾಧ್ಯವಿದೆ.  ಕೃಷಿ ಪ್ರವಾಸೋದ್ಯಮ ಅಥವಾ ಎಗ್ರಿ ಟೂರಿಸಂ ಸಾಮಾನ್ಯವಾಗಿ ಶೈಕ್ಷಣಿಕ, ಮನರಂಜನಾ ಅಥವಾ ಮಾಹಿತಿ ಉದ್ದೇಶಗಳಿಗಾಗಿ ಸಾರ್ವಜನಿಕರನ್ನು, ಕೃಷಿಕರನ್ನು, ಕೃಷಿ ಆಸಕ್ತರನ್ನು ಫಾರ್ಮ್‌ಗೆ ಕರೆತರುವ  ಚಟುವಟಿಕೆಯನ್ನು ಹೇಳಲಾಗುತ್ತದೆ. ವಿಶೇಷವಾಗಿ ಮಾದರಿ ತೋಟಗಳಲ್ಲಿ ಪರಿಚಯಿಸುವುದು ಒಂದು ಉದ್ದೇಶವಾದರೆ, ತೋಟದಲ್ಲಿ ಬೆಳೆದ ವಸ್ತುಗಳ ಮೌಲ್ಯವರ್ಧನೆಗೂ ಈ ಎಗ್ರಿಟೂರಿಸಂ ಸಹಕಾರಿಯಾಗುತ್ತದೆ. ಉದಾಹರಣೆಗೆ ಹಣ್ಣು-ತರಕಾರಿ ಬೆಳೆ ಬಂದಾಗ ಮಾರುಕಟ್ಟೆ ಉದ್ದೇಶದಿಂದಲೇ ಎಗ್ರಿ ಟೂರಿಸಂಗೂ ಅವಕಾಶ ನೀಡಬಹುದಾದ ಕಲ್ಪನೆಯೂ ಇದೆ.

Advertisement

Advertisement

ಕೃಷಿಯಲ್ಲಿ ದಿನಂದಿಂದ ದಿನಕ್ಕೆ ವೆಚ್ಚಗಳು ಅಧಿಕವಾಗುತ್ತಿವೆ, ಸವಾಲುಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಆರ್ಥಿಕತೆ ಬೆಳೆಯಲೇಬೇಕಿದೆ, ಕೃಷಿಕರ ಆದಾಯವೂ ಹೆಚ್ಚಾಗಲೇಬೇಕಿದೆ.ಈಗಾಗಲೇ ಬೆಲೆಗಳ ಕುಸಿತ, ಏರಿದ ಕೃಷಿ ವೆಚ್ಚಗಳ ಕಾರಣಗಳಿಂದ ಸಾಂಪ್ರದಾಯಿಕ ಕೃಷಿ ಆರ್ಥಿಕತೆಗಳಿಗೆ ಸವಾಲುಗಳು ಹೆಚ್ಚಾಗಿದೆ. ಹೀಗಾಗಿ ಕೃಷಿಕರು ಆರ್ಥಿಕ ಸಾಧ್ಯತೆಗಳ ಬಗ್ಗೆಯೂ ಗಮನಹರಿಸಬೇಕಾದ್ದು ಅಗತ್ಯ. ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ ಸೇರಿದಂತೆ ಕೃಷಿ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿನ ಅವಕಾಶಗಳನ್ನು ಕಂಡುಕೊಳ್ಳುವುದು ಕೂಡಾ ಇಂದಿನ ಅನಿವಾರ್ಯತೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳು ಇವೆ. ಅನೇಕ ಪ್ರಗತಿಪತ ಕೃಷಿಕರು ಇದ್ದಾರೆ. ಕೃಷಿ ಸಾಧನೆಗಾಗಿ ಹಲವು ವರ್ಷಗಳ ಕಾಲ ಸಮಯ ವಿನಿಯೋಗ ಮಾಡಿದ್ದಾರೆ. ಈಗ ಯಶಸ್ವಿ ಕೃಷಿಕಾದವರೂ ಇದ್ದಾರೆ. ಯಶಸ್ವಿ ಕೃಷಿ ಎನಿಸಿದ ಬಳಿಕ ಹಲವು ಮಾಧ್ಯಮಗಳ ಮೂಲಕ ಬೆಳಕು ಚೆಲ್ಲಿದಾಗ ಸಾಕಷ್ಟು ಕೃಷಿಕರು -ಕೃಷಿ ಆಸಕ್ತರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿಸಾಧಕ ಕೃಷಿಕರಿಗೆ ತನ್ನ ಕೃಷಿ ಉಳಿಸಿ-ಬೆಳೆಸುವುದೇ ಸವಾಲಾಗುತ್ತದೆ. ಪ್ರತಿ ದಿನವೂ ಆಸಕ್ತರು ಆಗಮಿಸಿದರೆ ಕೃಷಿ ನಿರ್ವಹಣೆಯೂ ಕಷ್ಟ. ಹೀಗಾಗಿ ಮಾಹಿತಿಯ ಜೊತೆಗೆ ಆತಿಥ್ಯವನ್ನೂ ನೀಡಿ ದಿನ ನಿಗದಿ ಮಾಡಿ ಆಹ್ವಾನಿಸುವುದು ಕೃಷಿಗೂ-ಕೃಷಿಕನಿಗೂ ಉತ್ತಮವಾದ ವ್ಯವಸ್ಥೆ. ಅಂತಹ ಮಾದರಿಯೊಂದನ್ನು ಸುರೇಶ್‌ ಬಲ್ನಾಡು ಅವರು ಪುತ್ತೂರಿನಲ್ಲಿ ಪ್ರಯೋಗ ಮಾಡಿದ್ದಾರೆ. ಯಶಸ್ಸು ಕಂಡಿದ್ದಾರೆ.

Advertisement

ಈಚೆಗೆ ನಡೆದ “ಸಮ್ಮಿಲನ” ಕಾರ್ಯಕ್ರಮದಲ್ಲಿ ರಾಜ್ಯದ ವಿವಿದೆಡೆಯಿಂದ 120 ಕ್ಕೂ ಅಧಿಕ ಮಂದಿ ನೋಂದಾಯಿಸಿ ಭಾಗವಹಿಸಿದ್ದರು. ಸ್ಥಳೀಯರು ಹಾಗೂ ಸಂಘಟಕರು ಸೇರಿದಂತೆ 170 ರಷ್ಟು ಕೃಷಿಕರು ಇದ್ದರು. ಕೃಷಿ-ಕಾಳುಮೆಣಸು ಬಗ್ಗೆ ಮಾಹಿತಿ ನೀಡಲು ಕೃಷಿಕರೇ ಭಾಗವಹಿಸಿದ್ದರು. ಈಗಾಗಲೇ ಕಾಳುಮೆಣಸು ಕೃಷಿಯಲ್ಲಿ ಯಶಸ್ಸು ಕಂಡಿರುವ ಅಜಿತ್‌ ಪ್ರಸಾದ್‌ ರೈ, ನಿವೃತ್ತ ವಿಜ್ಞಾನಿ ಡಾ.ಯದುಕುಮಾರ್ ಸೇರಿದಂತೆ ಹಲವು ಮಂದಿ ಸಾಧಕ ಕೃಷಿಕರು ಮಾಹಿತಿ ನೀಡಿದ್ದರು. ನೀರು ಹಾಗೂ ನೀರಾವರಿ ವ್ಯವಸ್ಥೆಯ ಬಗ್ಗೆ,ಕಿರು ವಿದ್ಯುತ್‌ ಯೋಜನೆಯ ಬಗ್ಗೆಯೂ ಮಾಹಿತಿ ನೀಡಿದ್ದರು. ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾಹಿತಿ ಕಾರ್ಯಕ್ರಮ ನಡೆದವು. ಬಂದ ಎಲ್ಲರಿಗೂ ಉತ್ತಮವಾದ ಆತಿಥ್ಯವನ್ನೂ ಮಾಡಿದ್ದರು. ಆಗಮಿಸಿದ ಎಲ್ಲರಿಗೂ ಕೃಷಿ ಬೆಳವಣಿಗೆಯ ಪರಿಚಯವಾಗಿದೆ.

ಅಡಿಕೆಯ ವಿವಿಧ ಸಮಸ್ಯೆಗಳು ಇಂದು ಕೃಷಿಕರನ್ನು ಕಾಡಲು ಆರಂಭವಾಗಿದೆ. ಅಡಿಕೆಯ ಜೊತೆಗೆ ಇನ್ನೊಂದು ಕೃಷಿ-ಕೃಷಿ ಚಟುವಟಿಕೆ ಬೇಕು ಎನ್ನುವ ಮಾತುಗಳು ಕೇಳುತ್ತಿವೆ. ಇದೇವೇಳೆ ಕೃಷಿಯಲ್ಲಿ ಮಾದರಿ ತೋಟಗಳ ಬಗ್ಗೆಯೂ ಪರಿಚಯ ಅಗತ್ಯ ಇದೆ. ಆದರೆ ಸಮಯ ವ್ಯರ್ಥವಾಗದೆ, ಕೃಷಿಕನಿಗೂ ಆದಾಯವಾಗುವಂತೆ ಮಾಡುವ ಮಾದರಿಗಳು ಬೇಕಿದೆ.  ಇಂತಹದೊಂದು ಮಾದರಿಯನ್ನು ಸುರೇಶ್‌ ಬಲ್ನಾಡು ಪರಿಚಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಯೋಜನೆಗಳ ವಿಸ್ತರಣೆಗೆ ಅವಕಾಶ ಇದೆ.

Pepper and Arecanut Farmer Suresh Balnadu is making waves in the Dakshina Kannada district with his new agritourism venture. Imagine getting a hands-on farming experience while soaking in the beauty of the countryside – that’s what he’s offering! Suresh’s farm is not just about crops and cattle; it’s a full-blown experience where visitors can learn, relax, and even participate in traditional farming activities. By blending agriculture with tourism, he’s helping folks reconnect with nature, all while boosting the local economy.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 16-08-2025 | ಮಲೆನಾಡು-ಕರಾವಳಿಯಲ್ಲಿ ಉತ್ತಮ ಮಳೆ | ಆ.20 ರ ನಂತರ ಮಳೆ ಹೇಗೆ..?
August 16, 2025
3:30 PM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ
August 16, 2025
11:25 AM
by: The Rural Mirror ಸುದ್ದಿಜಾಲ
ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ
August 16, 2025
11:17 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ

ಪ್ರಮುಖ ಸುದ್ದಿ

MIRROR FOCUS

ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ
ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!
August 14, 2025
7:39 AM
by: ವಿಶೇಷ ಪ್ರತಿನಿಧಿ

Editorial pick

4,000 ವರ್ಷಗಳಷ್ಟು ಹಳೆಯ ಹಲ್ಲುಗಳಲ್ಲಿ ಅಡಿಕೆ ಜಗಿದ ಪುರಾವೆ..!
August 9, 2025
6:54 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ

ವಿಡಿಯೋ

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ
June 19, 2025
11:21 PM
by: The Rural Mirror ಸುದ್ದಿಜಾಲ
ಇದು ಬರೀ ಚಿಪ್ಪಿಯಲ್ಲ..!
June 14, 2025
8:17 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ನಾಡಿಗೆ ಬೇಕು ತರಕಾರಿ
April 5, 2025
8:14 AM
by: ದ ರೂರಲ್ ಮಿರರ್.ಕಾಂ
ಪಪ್ಪಾಯಿ ಕೃಷಿ ಕಲಿಸಿದ ಪಾಠ
March 30, 2025
11:29 PM
by: ದ ರೂರಲ್ ಮಿರರ್.ಕಾಂ

ಸುದ್ದಿಗಳು

ಹವಾಮಾನ ವರದಿ | 16-08-2025 | ಮಲೆನಾಡು-ಕರಾವಳಿಯಲ್ಲಿ ಉತ್ತಮ ಮಳೆ | ಆ.20 ರ ನಂತರ ಮಳೆ ಹೇಗೆ..?
August 16, 2025
3:30 PM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ
August 16, 2025
11:25 AM
by: The Rural Mirror ಸುದ್ದಿಜಾಲ
ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ
August 16, 2025
11:17 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ
August 15, 2025
2:23 PM
by: ಸಾಯಿಶೇಖರ್ ಕರಿಕಳ
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ
August 15, 2025
6:54 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ

ವಿಶೇಷ ವರದಿ

4,000 ವರ್ಷಗಳಷ್ಟು ಹಳೆಯ ಹಲ್ಲುಗಳಲ್ಲಿ ಅಡಿಕೆ ಜಗಿದ ಪುರಾವೆ..!
August 9, 2025
6:54 AM
by: ದ ರೂರಲ್ ಮಿರರ್.ಕಾಂ
ಈ ಬಾರಿಯ ಮಳೆಯಿಂದ ಅಡಿಕೆಗೆ ಕೊಳೆರೋಗ | ಮರ ಏರಿ ಔಷಧಿ ಸಿಂಪಡಿಸಿದ ಮಹಿಳೆ |
August 6, 2025
7:16 AM
by: ವಿಶೇಷ ಪ್ರತಿನಿಧಿ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ

OPINION

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಹಸುರೆಂಬ ಉಸಿರಿನ ಮಹತ್ವ ಇದು…
July 13, 2025
10:55 PM
by: ಎ ಪಿ ಸದಾಶಿವ ಮರಿಕೆ
ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group