PM Kisan AI Chatbot: ರೈತರ ಸಹಾಯಕ್ಕೆ AI : ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಇನ್ಮುಂದೆ ರೈತರಿಗೆ ಸಹಾಯಕ್ಕೆ ಬರಲಿದೆ ಎಐ ಚಾಟ್​ಬೋಟ್

September 22, 2023
2:18 PM
ಪಿಎಂ ಕಿಸಾನ್ ಮೊಬೈಲ್ ಆ್ಯಪ್​ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್#AI ತಂತ್ರಜ್ಞಾನದ ನೆರವನ್ನು ನೀಡಲಾಗಿದ್ದು, ಎಐ ಚಾಟ್​ಬೋಟ್ ಸಹಾಯವನ್ನು ರೈತರು ಪಡೆಯಬಹುದಾಗಿದೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಎಐ ಚಾಟ್​ಬೊಟ್​ಗೆ ಚಾಲನೆ ನೀಡಿದ್ದಾರೆ.

ರೈತ#Farmerರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ#PM Narendra Modi ಅನೇಕ ಹೊಸ ಹೊಸ ಯೋಜನೆ#Schemeಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ#PM Kisan Samman Nidhi Yojana ಕೂಡ ಒಂದು. ರೈತರ ಖಾತೆಗೆ ಸರ್ಕಾರದಿಂದ ನೇರವಾಗಿ ವರ್ಷಕ್ಕೆ 6000 ಹಣ ಬಂರುತ್ತದೆ. ಈಗ ಕೇಂದ್ರ ಸರ್ಕಾರದಿಂದ ಕೃಷಿಕರಿಗೆ ನೀಡಲಾಗುತ್ತಿರುವ ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ಫೀಚರ್ ಒದಗಿಸಲಾಗಿದೆ. ಪಿಎಂ ಕಿಸಾನ್ ಮೊಬೈಲ್ ಆ್ಯಪ್​ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್#AI ತಂತ್ರಜ್ಞಾನ#Technologyದ ನೆರವನ್ನು ನೀಡಲಾಗಿದ್ದು, ಎಐ ಚಾಟ್​ಬೋಟ್ ಸಹಾಯವನ್ನು ರೈತರು ಪಡೆಯಬಹುದಾಗಿದೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಎಐ ಚಾಟ್​ಬೊಟ್​ಗೆ#AI Chat bot ಚಾಲನೆ ನೀಡಿದ್ದಾರೆ. ಕೃಷಿ ಇಲಾಖೆ ಕಾರ್ಯದರ್ಶಿ ಮನೋಜ್ ಅಹುಜಾ, ಹೆಚ್ಚುವರಿ ಕೃಷಿ ಕಾರ್ಯದರ್ಶಿ ಪ್ರಮೋದ್ ಮೆಹೆರ್ದಾ ಉಪಸ್ಥಿತಿಯಲ್ಲಿ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಈ ಚಾಟ್​ಬೋಟ್ ಅನಾವರಣಗೊಳಿಸಿದ್ದಾರೆ.

Advertisement
Advertisement
Advertisement
Advertisement

ಏನಿದು ಎಐ ಚಾಟ್​ಬೋಟ್?

ಪಿಎಂ ಕಿಸಾನ್ ಯೋಜನೆ ವಿಚಾರದಲ್ಲಿ ರೈತರಿಗೆ ಎದುರಾಗುವ ಯಾವ ಸಮಸ್ಯೆ ಮತ್ತು ಗೊಂದಲಕ್ಕೂ ಎಐ ಚಾಟ್​ಬೋಟ್ ಉತ್ತರಿಸುತ್ತದೆ. ಪಿಎಂ ಕಿಸಾನ್ ಮೊಬೈಲ್ ಆ್ಯಪ್​ನಲ್ಲಿ ಈ ಬೋಟ್ ಅನ್ನು ಅಳವಡಿಸಲಾಗಿದೆ. ವಿವಿಧ ಭಾಷೆಗಳಲ್ಲಿ ಇದರ ಸೇವೆ ಲಭ್ಯ ಇದೆ. ಸದ್ಯಕ್ಕೆ ಇಂಗ್ಲೀಷ್, ಹಿಂದಿ ಅಲ್ಲದೇ, ಬಂಗಾಳಿ, ಒಡಿಯಾ ಮತ್ತು ತಮಿಳು ಭಾಷೆಗಳಲ್ಲಿ ಎಐ ಚಾಟ್​​ಬೋಟ್ ಸಂವಹನ ಮಾಡಬಲ್ಲುದು. ಮುಂದಿನ ದಿನಗಳಲ್ಲಿ ಎಲ್ಲಾ 22 ಅಧಿಕೃತ ಭಾಷೆಗಳಲ್ಲೂ ಇದು ಲಭ್ಯ ಇರುತ್ತದೆ ಎಂದು ಹೇಳಲಾಗಿದೆ. ಈ ಚಾಟ್​ಬೋಟ್ ಅನ್ನು ಭಾಷಿಣಿ ಮತ್ತು ಏಕ್​ಸ್ಟೆಪ್ ಫೌಂಡೇಶನ್ ಸಂಸ್ಥೆಗಳ ಸಹಾಯದಿಂದ ಅಭಿವೃದ್ಧಿಪಡಿಸಲಾಗಿದೆ. ‘ಪಿಎಂ ಕಿಸಾನ್ ಸ್ಕೀಮ್​ನ ಕ್ಷಮತೆ ಹೆಚ್ಚಿಸಲು ಮತ್ತು ಅದರ ವ್ಯಾಪ್ತಿ ವಿಸ್ತರಿಸಲು ಎಐ ಚಾಟ್​ಬೋಟ್ ಸಹಾಯಕವಾಗಲಿದೆ. ರೈತರ ಗೊಂದಲ ಮತ್ತು ಪ್ರಶ್ನೆಗಳಿಗೆ ಈ ಚಾಟ್​ಬೋಟ್​ನಿಂದ ನಿಖರ ಮತ್ತು ಸ್ಪಷ್ಟ ಉತ್ತರ ಸಿಗುತ್ತದೆ’ ಎಂದು ಕೃಷಿ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Advertisement

ಪಿಎಂ ಕಿಸಾನ್ ಸಮ್ಮಾನ್ ನಿಧಿ 2019ರಲ್ಲಿ ಆರಂಭವಾದ ಯೋಜನೆ. ಕೃಷಿಕರಿಗೆ ವ್ಯವಸಾಯ ಮಾಡಲು ಅನುಕೂಲವಾಗಲೆಂದು ಸರ್ಕಾರ ಪ್ರತೀ ನಾಲ್ಕು ತಿಂಗಳಿಗೊಮ್ಮೆ 2,000 ರೂ ಧನಸಹಾಯ ಒದಗಿಸುತ್ತದೆ. ವರ್ಷಕ್ಕೆ 6,000 ರೂ ಹಣವು ಫಲಾನುಭವಿಗಳ ಖಾತೆಗೆ ನೇರವಾಗಿ ಬಂದು ಬೀಳುತ್ತದೆ. ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಈವರೆಗೂ 10 ಕೋಟಿಗೂ ಹೆಚ್ಚು ಮಂದಿ ರೈತರು ಪಡೆದುಕೊಂಡಿದ್ದಾರೆ. ಈವರೆಗೆ 2,000 ರೂಗಳ 14 ಕಂತುಗಳನ್ನು ವಿತರಿಸಲಾಗಿದೆ. ಪಿಎಂ ನರೇಂದ್ರ ಮೋದಿ 14ನೇ ಕಂತಿನ ಹಣವನ್ನು ಜುಲೈ 27ರಂದು ಬಿಡುಗಡೆ ಮಾಡಿದ್ದರು. ಒಟ್ಟು 9.54 ಕೋಟಿ ಮಂದಿ ರೈತರ ಖಾತೆಗಳಿಗೆ ಸರ್ಕಾರ ಹಣ ಹಾಕಿತು. ಆಗಸ್ಟ್​ನಿಂದ ನವೆಂಬರ್​ವರೆಗಿನ ಅವಧಿಯಲ್ಲಿ 15ನೇ ಕಂತಿನ ಹಣ ಬರಲಿದೆ. ನವೆಂಬರ್ ತಿಂಗಳಲ್ಲಿ ಮುಂದಿನ ಕಂತು ಬಿಡುಗಡೆ ಆಗುವ ಸಾಧ್ಯತೆ ಇದೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ
ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ
February 19, 2025
11:16 PM
by: The Rural Mirror ಸುದ್ದಿಜಾಲ
ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ಕಾಡ್ಗಿಚ್ಚು | 25 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
February 19, 2025
7:32 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror