ಅಡುಗೆ ಎಣ್ಣೆ ಸ್ವಾವಲಂಬನೆಯ ಗುರಿ | 10 ಸಾವಿರ ಕೋಟಿಗೂ ಅಧಿಕ ಹಣಕಾಸು ಸೌಲಭ್ಯ | ತಾಳೆ ಬೆಳೆಯತ್ತಲೂ ಚಿತ್ತ |

October 5, 2024
9:04 PM

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಡುಗೆ ಎಣ್ಣೆ ಹಾಗೂ ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ  ಸಾಧಿಸುವ ಮಹತ್ವಾಕಾಂಕ್ಷಿ ಯೋಜನೆಗೆ  ಅನುಮೋದನೆ ನೀಡಲಾಗಿದೆ.ಪ್ರಸಕ್ತ ಸಾಲಿನಿಂದ  2030-31ರವರೆಗೆ  ಏಳು ವರ್ಷಗಳಲ್ಲಿ   ಎಣ್ಣೆ ಕಾಳುಗಳ ಉತ್ಪಾದನೆ ಮತ್ತು   ಅಡುಗೆ ಎಣ್ಣೆ  ತಯಾರಿಕೆಯಲ್ಲಿ ಆತ್ಮ ನಿರ್ಭರತೆ ಸಾಧಿಸುವ ಕಾರ್ಯ ಯೋಜನೆಗೆ  ಅನುಮೋದನೆ ನೀಡಲಾಗಿದೆ. ಇದಕ್ಕಾಗಿ  10 ಸಾವಿರದ 103 ಕೋಟಿ ರೂಪಾಯಿಗಳ  ಹಣಕಾಸು ಸೌಲಭ್ಯವನ್ನು ಒದಗಿಸಲಾಗಿದೆ.

Advertisement

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು. ಸಚಿವ ಸಂಪುಟ  ಸಭೆಯಲ್ಲಿ   ಮರಾಠಿ,  ಪಾಲಿ, ಪ್ರಾಕೃತ, ಅಸ್ಸಾಮಿ, ಬೆಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ  ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.2004ರಲ್ಲಿ  ತಮಿಳಿಗೆ,  2005ರಲ್ಲಿ ಸಂಸ್ಕೃತಕ್ಕೆ, 2008ರ ಅಕ್ಟೋಬರ್ 31ರಂದು ಕನ್ನಡ ಮತ್ತು  ತೆಲುಗಿಗೆ , 2013ರಲ್ಲಿ  ಮಳಿಯಾಲಂಗೆ   ಕೇಂದ್ರ ಸರ್ಕಾರ  ಶಾಸ್ತ್ರೀಯ ಸ್ಥಾನಮಾನ ನೀಡಿತ್ತು. ಈಗ ಹೊಸದಾಗಿ  ಐದು ಭಾಷೆಗಳಿಗೆ  ಶಾಸ್ತ್ರೀಯ ಸ್ಥಾನಮಾನದ  ಗೌರವವನ್ನು ನೀಡುವ ಮೂಲಕ ಒಟ್ಟು 11 ಭಾಷೆಗಳನ್ನು  ಶಾಸ್ತ್ರೀಯ ಪಟ್ಟಿಗೆ  ಸೇರಿಸಲಾಗಿದೆ.

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಕೃಷೋನ್ನತಿ  ಹಾಗೂ ಸುಸ್ಥಿರ ಕೃಷಿ ಅಭಿವೃದ್ಧಿ ಪ್ರಧಾನ ಮಂತ್ರಿ  ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಿಗೆ  ಸಂಪುಟ ಅನುಮೋದನೆ ನೀಡಿದ್ದು, ಒಂದು ಲಕ್ಷ ಕೋಟಿ ರೂಪಾಯಿ ಅನುದಾನ  ಒದಗಿಸಲಾಗಿದೆ ಎಂದರು.

Advertisement

ಆಹಾರ ಖಾದ್ಯವಾಗಿ ಅಡುಗೆ ಎಣ್ಣೆಗೆ ಬಹಳಷ್ಟು ಬೇಡಿಕೆ ಇದೆ. ಇದಕ್ಕಾಗಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಈಗಾಗಲೇ ತಾಳೆ ಕೃಷಿಯತ್ತ ಗಮನಹರಿಸಲಾಗಿದೆ. ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆ ಇದೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 05-08-2025 | ಆ.6 ರಂದು ಕೆಲವು ಕಡೆ ಮಳೆ | ಆ.14 ನಂತರ ಹವಾಮಾನ ಹೇಗಿರಬಹುದು..?
August 5, 2025
1:41 PM
by: ಸಾಯಿಶೇಖರ್ ಕರಿಕಳ
700 ಕ್ಕೂ ಅಧಿಕ ರೆಸಿಪಿ | ದಿವ್ಯ ಮಹೇಶ್‌ ಅವರಿಗೆ “ಪಾಕ ಪ್ರವೀಣೆ” ಪ್ರಶಸ್ತಿ
August 5, 2025
8:05 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ಪಂಜದ ಕ್ರಿಯೇಟಿವ್‌ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ |
August 5, 2025
7:48 AM
by: ದ ರೂರಲ್ ಮಿರರ್.ಕಾಂ
ವಿಶ್ವದಲ್ಲಿ ಅಡಿಕೆ ಕೃಷಿ ಹೇಗಿದೆ..? ಭಾರತದಲ್ಲಿ ಅಡಿಕೆ ಆಮದು ಎಷ್ಟು..?
August 5, 2025
7:22 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group