ರೈತರ ಮೊಗದಲ್ಲಿ ಮಂದಹಾಸ | ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ನೀಡುವ ಗುರಿ | ಇಂಧನ ಸಚಿವ

February 17, 2023
11:20 AM

ಬೇಸಿಗೆ ಕಾಲ, ಸುಡು ಬಿಸಿಲು, ಬೆಳೆಗಳಿಗೆ ನೀರು ಹಾಯಿಸೋದೆ ರೈತರ ಚಿಂತೆ. ಅದರ ಜೊತೆಗೆ ಪದೇ ಪದೇ ಕೈ ಕೊಡುವ ಕರೆಂಟ್ ನಿಂದ ರೈತರು ಬೇಸತ್ತು ಹೋಗಿದ್ದಾರೆ.  ಆದರೆ ಇಂಧನ ಸಚಿವರ ಈ  ಭರವಸೆ ರೈತರ ಮೊಗದಲ್ಲಿ  ಮಂದಹಾಸ ಮೂಡಿಸಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿವರ್ಷ ಸಬ್ಸಿಡಿ ರೂಪದಲ್ಲಿ ರಾಜ್ಯ ಸರ್ಕಾರ 12 ಸಾವಿರ ಕೋಟಿ ರೂ.ಗಳನ್ನು ನೀಡುತ್ತಿದೆ. ರೈತರಿಗೆ 7 ಗಂಟೆಗಳ ಕಾಲ ನಿರಂತರ ಗುಣ ಮಟ್ಟದ ವಿದ್ಯುತ್‌ ನೀಡಲು ಆದ್ಯತೆ ಕೊಡಲಾಗುವುದು ಎಂದು ಇಂಧನ ಸಚಿವ ಸುನಿಲ್‌ ಕುಮಾರ್ ಹೇಳಿದರು.

Advertisement
Advertisement

ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್‌ ನ   ಸಿ.ಎನ್.  ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಿಸೆಂಬರ್ 2012 ರ ಅಂತ್ಯಕ್ಕೆ ರಾಜ್ಯದ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ 1,31,143 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಮರು ವಿದ್ಯುತ್ ಕಡೆ ಹೆಜ್ಜೆಯನ್ನು ಇಡಲಾಗುತ್ತಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸಿಎಂ ಕುಸಮ್ ಯೋಜನೆಯಡಿ ರೈತರ ಪಂಪಸೆಟ್ ಗಳಿಗೆ ಕೇಂದ್ರ ಸರ್ಕಾರದಿಂದ 7.5 ಹೆಚ್ ಪಿ ಸಾಮಾರ್ಥ್ಯದ ಸೌರ ಪಂಪಸೆಟ್ ಗೆ ಶೇ.10 ರಷ್ಟು ಕೇಂದ್ರ ಸಹಾಯಧನ ಒದಗಿಸಲಿದೆ. ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದ ರೈತ ಫಲಾನುಭವಿಗಳಿಗೆ ಶೇ.30 ರಷ್ಟು ಹಾಗೂ ಪರಿಶಿಷ್ಟ ಜಾತಿ/ಪಂಗಡ ವರ್ಗದ ಫಲಾನುಭವಿಯ ಪಂಪಸೆಟ್‌ಗೆ ಶೇ.50 ರಷ್ಟು ರಾಜ್ಯದಿಂದ ಸಹಾಯಧನ ಒದಗಿಸಲಾಗುವುದು.  ಇನ್ನುಳಿದ ಹಣ ರೈತ ಫಲಾನುಭವಿಗಳಿಂದ ಭರಿಸಿ ಯೋಜನೆಯನ್ನು ಕೈಡಲ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ರಾಜ್ಯದ ಬೆಸ್ಕಾಂ, ಹೆಸ್ಕಾಂ, ಫೆಸ್ಟ್‌ ವಿದ್ಯುತ್ ಸರಬರಾಜು ಕಂಪನಿಗಳಿಗೆ ಒಟ್ಟು 3,37,331 ಕೃಷಿ ಪಂಪ್‌ಸೆಟ್‌ಗಳನ್ನು ಹಂಚಿಕೆ ಮಾಡಲಾಗಿದೆ.ರಾಜ್ಯದಲ್ಲಿ 1302 ಮನಾ ಸಾಮರ್ಥ್ಯದ ಸೋಲಾರ್ ಘಟಕ ಅನುಷ್ಟಾನಗೊಳಿಸಲಾಗುವುದು ಎಂದು ತಿಳಿಸಿದರು.

ನಿಗದಿತ ಅವಧಿಯಲ್ಲಿ ಬಿಲ್ ಕಟ್ಟದಿದ್ದರೆ ಪವರ್ ಕಟ್ :

Advertisement

ಭಾಗ್ಯಜ್ಯೋತಿ, ಕುಟೀರಜ್ಯೋತಿ ಯೋಜನೆಯಡಿ ಕಡುಬಡವರಿಗೆ 40 ಯುನಿಟ್ ವರೆಗೆ ಉಚಿತವಾಗಿ ನೀಡಲಾಗುತ್ತಿದೆ. 40 ಯುನಿಟ್ ನಂತರ ಆಗುವ ಬಿಲ್‌ನ್ನು ಭರಿಸಲು ಹಿಂದೇಟು ಹಾಕಿದರೆ ಅಂತಹವರ ಮನೆಯ ಪದ‌ ಕಟ್ ಮಾಡಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು. ಬಿಜೆಪಿಯ ಡಿ.ಎಸ್.ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಚಿತ ವಿದ್ಯುತ್‌ ನೀಡುವ ಭರಾಟೆಯಲ್ಲಿ ಹೆಸ್ಕಾಂ, ಕೆಪಿಟಿಸಿಎಲ್ ಹಾಗೂ ಇನ್ನಿತರ ಕಂಪನಿಯನ್ನು ದಿವಾಳಿತನದತ್ತ ಕೊಂಡೊಯ್ಯಲು ಸಾಧ್ಯವಿಲ್ಲ.

ವಿದ್ಯುತ್ ಕಂಪನಿಗಳನ್ನು ಸುಸ್ತಿರಗೊಳಿಸಲು ಸಹಕಾರ ನೀಡಬೇಕಾಗಿದೆ ಎಂದರು. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಲ್ಲಿ  ರಾಜ್ಯದ 26 ಲಕ್ಷ 8 ಸಾವಿರ ಫಲಾನುಭವಿಗಳು ಇದ್ದಾರೆ. ಉಚಿತವಾಗಿ ಕೃಷಿ ಪಂಪಸೆಟ್‌ಗಳಿಗೆ ವಿದ್ಯುತ ಪಡೆಯುವ ರೈತರ ಸಂಖ್ಯೆ 33 ಲಕ್ಷ 4 ಸಾವಿರ ಇದೆ, ಅಮೃತ ಯೋಜನೆಯಡಿ 75 ಯುನಿಟ್‌ವರೆಗೆ ಎಸ್ಸಿ, ಎಸ್ಟಿ ವರ್ಗದ 24 ಲಕ್ಷ ಫಲಾನುಭವಿಗಳು ವಿದ್ಯುತ್ ಪಡೆದುಕೊಳ್ಳುತ್ತಿದ್ದಾರೆ. ಬೆಸ್ಕಾಂ, ಮೆಸ್ಕಾಂ ಹೆಸ್ಕಾಂ, ಜೆಸ್ಕಾಂ, ಸೆಸ್ಕ್, ಕೆಪಿಟಿಸಿಎಲ್, ಕೆಪಿಸಿಎಲ್‌ ವಿದ್ಯುತ್‌ ಕಂಪನಿಗಳ ಒಟ್ಟು ಸಾಲ 72,114.84 ಕೋಟಿಯಷ್ಟು ಇದೆ ಎಂದು ತಿಳಿಸಿದರು.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ
ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ
May 22, 2025
9:45 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group