ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಂಟು ಪ್ರಯಾಣಿಕರನ್ನು ಸಾಗಿಸಬಹುದಾದ ವಾಹನಗಳನ್ನು ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಒದಗಿಸುವುದನ್ನು ಅಟೋಮೊಬೈಲ್ ತಯಾರಕರು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.
ಶುಕ್ರವಾರದ ಸರಣಿ ಟ್ವೀಟ್‌ಗಳಲ್ಲಿ ಜುಲೈ 1 2019 ರಿಂದ ಜಾರಿಗೆ ಬರುವಂತೆ ಡ್ರೈವರ್ ಏರ್ ಬ್ಯಾಗ್ ಮತ್ತು ಫ್ರಂಟ್ ಸಹ ಪ್ಯಾಸೆಂಜರ್ ಏರ್‌ಬ್ಯಾಗ್‌ನ ಫಿಟ್‌ಮೆಂಟ್ ಅನ್ನು ಜನವರಿ 1, 2022 ರಿಂದ ಜಾರಿಗೆ ಬರುವಂತೆ ತಮ್ಮ ಸಚಿವಾಲಯವು ಈಗಾಗಲೇ ಕಡ್ಡಾಯಗೊಳಿಸಿದೆ 8 ಪ್ರಯಾಣಿಕರನ್ನು ಹೊತ್ತೊಯ್ಯುವ ಮೋಟಾರು ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯ್ನು ಹೆಚ್ಚಿಸುವ ಸಲುವಾಗಿ, ನಾನು ಈಗ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ಸಾಮಾನ್ಯ ಶಾಸನಬದ್ಧ ನಿಯಮಗಳು ಅಧಿಸೂಚನೆಯನ್ನು ಅನುಮೋದಿಸಿದ್ದೇನೆ ಎಂದು ಗಡ್ಕರಿ ಹೇಳಿದರು.
ಮುಂಭಾಗ ಮತ್ತು ಹಿಂಭಾಗದ ಎರಡೂ ವಿಭಾಗಗಳಲ್ಲಿ ಕುಳಿತಿರುವ ಪ್ರಯಾಣಿಕರ ಮೇಲೆ ಮುಂಭಾಗದ ಮತ್ತು ಪಾರ್ಶ್ವದ ಘರ್ಷಣೆಯ ಪರಿಣಾಮವನ್ನು ಕಡಿಮೆ ಮಾಡಲು, ಎಮ್1 ವಾಹನ ವಿಭಾಗದಲ್ಲಿ ನಾಲ್ಕು ಹೆಚ್ಚುವರಿ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.