ಅ.1 ರಿಂದ ಉತ್ಪಾದನೆಯಾಗುವ ಕಾರುಗಳಿಗೆ ಏರ್ ಬ್ಯಾಗ್‌ ಕಡ್ಡಾಯ | 6 ಏರ್ ಬ್ಯಾಗ್‌ ಕಡ್ಡಾಯದ ಕರಡು ಪ್ರಸ್ತಾವನೆ |

April 14, 2022
10:02 PM

ದೇಶದಲ್ಲಿ ಇನ್ನು ಮುಂದೆ ಪ್ರಯಾಣಿಕ ಕಾರುಗಳಲ್ಲಿ ಆರು ಏರ್ ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅಕ್ಟೋಬರ್ 1 ರಿಂದ ಉತ್ಪಾದನೆಯಾಗುವ ಕಾರುಗಳಿಗೆ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಕರಡು ನಿಯಮಗಳು ರಸ್ತೆ ಸುರಕ್ಷತಾ ಕ್ರಮಗಳ ಸರಣಿಯ ಭಾಗವಾಗಿದ್ದು, ಅಂತಿಮ‌ ತೀರ್ಮಾನ‌ ಹೊರ ಬೀಳಬೇಕಿದೆ.

ಆರು ಏರ್‌ ಬ್ಯಾಗ್‌ ರಚನೆಗೆ ಈಗಾಗಲೇ ಹೆಣಗಾಡುತ್ತಿರುವ ಕಂಪನಿಗಳಿಗೆ ಈ ನಿಯಮ ಇನ್ನಷ್ಟು ಒತ್ತಡವನ್ನು ಉಂಟು ಮಾಡಿದೆ. ಪ್ರಯಾಣಿಕ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಪ್ಲಾನ್ ಬಗ್ಗೆ ಮಾರುತಿ ಸುಜುಕಿ ಕಳವಳ ವ್ಯಕ್ತಪಡಿಸಿದ್ದು ಸಂಭಾವ್ಯ ಖರೀದಿದಾರರು ದರ ದುಬಾರಿಯಾಗುವ ಕಾರಣ ಖರೀದಿಯಿಂದ ದೂರವಾಗಬಹುದು‌, ಮಾರಾಟದ ಮೇಲೆ ಪರಿಣಾಮ ಬೀರಲಿದೆ ಎಂದು ಮಾರುತಿ ಸುಜುಕಿ ಅಧ್ಯಕ್ಷ ಆರ್‌.ಸಿ. ಭಾರ್ಗವ ತಿಳಿಸಿದ್ದಾರೆ.

ಎಲ್ಲಾ ಕಾರುಗಳಲ್ಲಿ ಚಾಲಕ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿಗೆ ಏರ್‌ಬ್ಯಾಗ್‌ ಕಡ್ಡಾಯವಾಗಿದೆ.‌ ಇನ್ನೂ ನಾಲ್ಕು ಏರ್‌ಬ್ಯಾಗ್‌ಗಳನ್ನು ಸೇರಿಸುವುದರಿಂದ ವೆಚ್ಚವು 17,600 ರೂ. ನಷ್ಟು ಹೆಚ್ಚಾಗುತ್ತದೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು
March 6, 2026
8:22 PM
by: ದ ರೂರಲ್ ಮಿರರ್.ಕಾಂ
ರಾಜ್ಯ ಬಜೆಟ್‌ 2026-27: ಕೃಷಿ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಯೋಜನೆಗಳ ಘೋಷಣೆ
March 6, 2026
8:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 06-03-2026 | ಕರಾವಳಿಯಲ್ಲಿ ಮೋಡ ಕವಿದ ಆಕಾಶ, ಕೆಲವೆಡೆ ತುಂತುರು ಮಳೆಯ ಸಾಧ್ಯತೆ
March 6, 2026
4:13 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror