ಟರ್ಕಿಶ್ ಏರ್ ಲೈನ್ಸ್ ಮಾಜಿ ಅಧ್ಯಕ್ಷ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮತ್ತು ವ್ಯವಸ್ಥಾಪಕ ನಿರ್ದೇಶಕನಾಗಿ ನೇಮಿಸಲಾಗಿದೆ ಎಂದು ಸೋಮವಾರದಂದು ಟಾಟಾ ಗ್ರೂಪ್ ಮಾಹಿತಿಯನ್ನು ನೀಡಿದೆ.
ಇಲ್ಕರ್ ಐಸಿ ಅವರ ಉಮೇದುವಾರಿಕೆಯನ್ನು ಅನುಮೋದಿಸಲು ಏರ್ ಇಂಡಿಯಾ ಮಂಡಳಿಯು ಸೋಮವಾರ ಮುಂಜಾನೆ ಸಭೆಯನ್ನು ನಡೆಸಿತು. ಈ ಸಮಯದಲ್ಲಿ ಮಂಡಳಿಯ ಸಭೆಗೆ ಟಾಟಾ ಸನ್ಸ್ ನ ಅಧ್ಯಕ್ಷ ಎನ್ ಚಂದ್ರಶೇಖರನ್ ವಿಶೇಷ ಅಹ್ವಾನಿಸಲಾಗಿತ್ತು.
ಇಲ್ಕರ್ ಅವರು ವಾಯುಯಾನ ಉದ್ಯಮದ ನಾಯಕರಾಗಿದ್ದು, ಅವರ ಅಧಿಕಾರಾವಧಿಯಲ್ಲಿ ಟರ್ಕಿಶ್ ಏರ್‌ಲೈನ್ಸ್ ಯಶಸ್ಸಿನತ್ತ ಮುನ್ನಡೆಸಿದ್ದಾರೆ. ಅವರು ಏರ್ ಇಂಡಿಯಾವನ್ನು ಹೊಸ ಯುಗಕ್ಕೆ ಕರೆದೊಯ್ಯುವ ವಿಶ್ವಾಸದಿಂದ ಟಾಟಾ ಗ್ರೂಪ್ ಇಲ್ಕರ್ ಅವರನ್ನು ಸ್ವಾಗತಿಸಲು ಸಂತೋಷಪಡುತ್ತಿದ್ದೇವೆ ಎಂದು ಟಾಟಾ ಸನ್ಸ್ ನ ಅಧ್ಯಕ್ಷ ಎನ್ ಚಂದ್ರಶೇಖರನ್ ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel