ಕೊರೋನಾ ವೈರಸ್ ವೇಗವಾಗಿ ಹರಡಲು ವಾಯುಮಾಲಿನ್ಯವೂ ಪರಿಣಾಮ ಬೀರುತ್ತದೆ ಹಾಗೂ ಕೊರೋನಾ ಸೋಂಕಿತರಿಗೆ ವಾಯು ಮಾಲಿನ್ಯ ಸಂಕಷ್ಟ ತರುತ್ತದೆ ಎಂಬ ಹೊಸದಾದ ವರದಿಯೊಂದು ದೆಹಲಿ ಸರಕಾರವನ್ನು ಎಚ್ಚರಿಸಿದೆ.
ಪ್ರತೀ ವರ್ಷ ದೆಹಲಿಯಲ್ಲಿ ಮಳೆಗಾಲದ ನಂತರ ವಾಯು ಮಾಲಿನ್ಯ ಒಮ್ಮೆಲೇ ಹೆಚ್ಚಾಗುತ್ತದೆ. ದೆಹಲಿಯ ಆಸುಪಾಸಿನ ಪ್ರದೇಶಗಳಲ್ಲಿ ಕೃಷಿ ಬೆಳೆ ಕಟಾವು ಬಳಿಕ ಅನಿವಾರ್ಯವಾಗಿ ಬೆಂಕಿ ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ವ್ಯಾಪಕವಾದ ಹೊಗೆ ಕಂಡುಬರುತ್ತದೆ. ಇದು ವಾಯು ಮಾಲಿನ್ಯಕ್ಕೂ ಕಾರಣವಾಗುತ್ತದೆ. ಶಾಲೆಯ ಸಂದರ್ಭ ಮಕ್ಕಳಿಗೆ ಶಾಲೆಗೆ ರಜೆ ಘೋಷಣೆ ಮಾಡುವ ಸಂದರ್ಭವೂ ಇತ್ತು. ಇದೀಗ ಕೊರೋನಾ ವೈರಸ್ ಪರಿಣಾಮದ ಹಿನ್ನೆಲೆಯಲ್ಲಿ ನಡೆದ ಅಧ್ಯಯನ ವರದಿಯೊಂದು ವಾಯು ಮಾಲಿನ್ಯವೂ ಕೊರೋನಾ ವೈರಸ್ ಹರಡುವುದಕ್ಕೆ ಹೆಚ್ಚು ಅನುಕೂಲವಾದ ವಾತಾವರಣ ಸೃಷ್ಟಿ ಮಾಡಿದರೆ ಕೊರೋನಾ ವೈರಸ್ ಸೋಂಕಿತರಿಗೆ ಶ್ವಾಸಕೋಸದ ಮೇಲೆ ವಾಯು ಮಾಲಿನ್ಯದ ಪ್ರಭಾವ ಹೆಚ್ಚಾಗಿ ಸಮಸ್ಯೆ ಉಂಟಾಗಬಹುದು ಎಂದು ಈ ಅಧ್ಯಯನ ವರದಿ ಹೇಳಿದೆ.
ಪಂಜಾಬ್ ಕೇಸರಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್ ಮೊದಲ ಎರಡು ವಾರಗಳಲ್ಲಿ ದೆಹಲಿಯ ವಾಯು ಗುಣಮಟ್ಟ ಕುಸಿದಿದೆ. ಇದು ಹೆಚ್ಚುತ್ತಾ ಸಾಗಿದರೆ ವಾಯುಮಾಲಿನ್ಯವು ಕೊರೋನವೈರಸ್ ಹರಡುವಿಕೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಕೊರೋನಾ ಸೋಂಕಿಗೆ ಒಳಗಾದವರೆಲ್ಲರೂ ಸಹ ಹೊಸ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಅದು ಎಚ್ಚರಿಸಿದೆ. ವೈದ್ಯರ ಪ್ರಕಾರ, ವೈರಲ್ ಸೋಂಕು ಹೆಚ್ಚಳದಂತಹ ಉಸಿರಾಟದ ಕಾಯಿಲೆಗಳು ಏರಿಕೆಯಾಗಬಹುದು. ಕಳಪೆ ಗಾಳಿಯ ಗುಣಮಟ್ಟವು ಶ್ವಾಸಕೋಶದಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಜನರನ್ನು ವೈರಸ್‌ಗೆ ಹೆಚ್ಚು ಗುರಿಯಾಗಿಸುತ್ತದೆ ಎಂದು ಎಚ್ಚರಿಸಲಾಗಿದೆ.
ಇದು ದೆಹಲಿ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯಗಳಲ್ಲಿನ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣವಾಗಬೇಕು ಹಾಗೂ ವಾಯು ಮಾಲಿನ್ಯದ ಕಾರಣದಿಂದಲೇ ಶ್ವಾಸಕೋಸದ ಮೇಲೆ ಪರಿಣಾಮ ಬೀರುತ್ತದೆ. ಇದೇ ಸಂದರ್ಭ ಕೊರೋನಾ ವೈರಸ್ ನಂತಹ ಸೋಂಕು ಉಂಟಾದರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಬಹುಪಾಲು ಯುವಕರಿಗೆ ಕೊರೋನಾ ವೈರಸ್