ದೆಹಲಿ ಪ್ರದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದ್ದು ಇದಕ್ಕೆ ಕಾರಣ ಹರಿಯಾಣ ಮತ್ತು ಪಂಜಾಬ್‍ನಲ್ಲಿ ರೈತರು ಒಣಹುಲ್ಲು ಸುಡುವಿಕೆಯಿಂದ ಸಮಸ್ಯೆಗಳು ಹೆಚ್ಚಾಗಿವೆ. ಇದಕ್ಕೆ ಕಾರಣವಾಗುವ ಒಣಹುಲ್ಲು ಸುಡುವಿಕೆಯನ್ನು ತಡೆಯಲು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ವಿವರಣೆಯನ್ನು ಕೇಳಿದ್ದು, ಮುಂದಿನ ವಿಚಾರಣೆ ನವೆಂಬರ್ 17 ರಂದು ನಡೆಯಲಿದೆ.
ದೆಹಲಿಯಲ್ಲಿ ಇಂದು ವಾಯುಮಾಲಿನ್ಯ ಸೂಚ್ಯಂಕ 400 ರ ಗಡಿ ದಾಟಿದ್ದು, ಮಾಲಿನ್ಯವನ್ನು ತಡೆಯಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಜಿಆರ್‍ಎಪಿ ನ ಮೂರನೇ ಹಂತದ ಅಡಿಯಲ್ಲಿ ನಿರ್ಬಂಧಗಳು ಜಾರಿಗೊಳಿಸಲಾಗಿದೆ. ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡಿಸೇಲ್ ವಾಹನಗಳ ಸಂಚಾರವನ್ನ ನಗರದಲ್ಲಿ ನಿರ್ಬಂಧಿಸಲಾಗಿದ್ದು, ಜೊತೆಗೆ ಐದನೇ ತರಗತಿಯವರೆಗೆ ಆನ್‍ಲೈನ್ ಕ್ಲಾಸ್ ನಡೆಸುವಂತೆ ದೆಹಲಿ ಸರ್ಕಾರ ಸೂಚಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

