ಅಜಿನೋ ಮೋಟೋ | ಆಹಾರದ ರುಚಿಗಾಗಿ ಬಳಸುವ ವಿಷಕಾರಿ ಪದಾರ್ಥ | ಇದನ್ನು ತಿಂದರೆ ಆರೋಗ್ಯ ಕೆಡುವುದು ಖಂಡಿತ

September 23, 2023
12:35 PM
ಅಜಿನೊಮೊಟೊ ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ಆಹಾರದಲ್ಲಿನ ಇತರ ಎಲ್ಲಾ ರುಚಿಗಳನ್ನು ಸಮನ್ವಯಗೊಳಿಸುತ್ತದೆ. ಸೋಡಿಯಂ ಅಂಶವು ಕಡಿಮೆ ಇರುವ ಕಾರಣದಿಂದ ಜನರು ಇದನ್ನು ಟೇಬಲ್ ಉಪ್ಪಿನ ಬದಲು ಬಳಸುತ್ತಾರೆ. ಆದರೆ ಇದು ಜೀವಕ್ಕೆ ಮಾರಕ ಎಂಬ ವರದಿ ಇದೆ.

ಈ ದಿನಗಳಲ್ಲಿ ನಾವು ಸೇವಿಸುವ ಬಹಳಷ್ಟು ಫಾಸ್ಟ್ ಫುಡ್ ನಲ್ಲಿ ಅಜಿನೋ ಮೋಟೋ ಬಳಸುತ್ತಾರೆ. ಈ ಉಪ್ಪನ್ನು ಭಾರತಕ್ಕೆ ಚೀನಾದಿಂದ ಗೊಬ್ಬರದ ಹೆಸರಿನಲ್ಲಿ ಆಮದು ಮಾಡಿಕೊಳ್ಳಲಾಗುವುದು. ನೀವು ಚೈನೀಸ್​​ ಫುಡ್​​​ ಪ್ರಿಯರಾಗಿದ್ರೆ.. ಅದನ್ನು ತಿನ್ನುವುದನ್ನು ಇಂದೇ ಬಿಟ್ಟು ಬಿಡಿ. ಸಾಮಾನ್ಯವಾಗಿ ಫಾಸ್ಟ್​​ ಫುಡ್​ಗಳಾ ನೂಡಲ್ಸ್, ಗೋಬಿ, ಫ್ರೈಡ್‌ ರೈಸ್‌ ಅಥವಾ ಯಾವುದೇ ಇನ್ನಿತರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬಾರದು ಎಂದು ಸಲಹೆ ನೀಡುತ್ತಾರೆ. ಆ ಸಲಹೆಗೆ ಅಜಿನೊಮೊಟೊ ಎಂಬ ಉಪ್ಪಿನಂತಹ ಅಂಶವೇ ದೊಡ್ಡ ಕಾರಣ.

Advertisement
Advertisement
Advertisement
Advertisement

ಅಜಿನೊಮೊಟೊ ಅಥವಾ ಟೇಸ್ಟಿಂಗ್​ ಪೌಡರ್​​ ಚೀನೀ ಪಾಕಪದ್ಧತಿಯ ಮೂಲತತ್ವವಾಗಿದೆ. ಏಕೆಂದರೆ ಇದು ಪರಿಮಳವನ್ನು ಹೆಚ್ಚಿಸುವುದಲ್ಲದೆ ವಿಶಿಷ್ಟವಾದ ಸುವಾಸನೆ, ರುಚಿಯನ್ನು ನೀಡುತ್ತದೆ. ತಾಂತ್ರಿಕವಾಗಿ ಹೇಳುವುದಾದರೆ ಅಜಿನೊಮೊಟೊ ಗ್ಲುಟಾಮೇಟ್ ಸೋಡಿಯಂ ಮತ್ತು ಗ್ಲುಟಾಮಿಕ್ ಆಸಿಡ್‌ನಿಂದ ತಯಾರಿಸಲ್ಪಟ್ಟ ಒಂದು ಸಂಯುಕ್ತವಾಗಿದೆ. ಸಸ್ಯ ಆಧಾರಿತ ಪದಾರ್ಥಗಳಾದ ಸಕ್ಕರೆ ಬೀಟ್, ಕಬ್ಬು, ಕಾರ್ನ್ ಅಥವಾ ಕಸಾವದಿಂದ ತಯಾರಿಸಲಾಗುತ್ತದೆ. ಇದು ನೈಸರ್ಗಿಕವಾಗಿ ಕಂಡುಬರುವ ಅಮೈನೊ ಆಸಿಡ್‌. ಇದನ್ನು ಸಾಮಾನ್ಯವಾಗಿ ಏಷ್ಯನ್ ಆಹಾರಗಳಾದ ನೂಡಲ್ಸ್, ಸೂಪ್ ಮತ್ತು ಫ್ರೈಡ್ ರೈಸ್‌ನಲ್ಲಿ ಹೆಚ್ಚು ಬಳಸಲಾಗುತ್ತದೆ.

Advertisement

ಪೌಷ್ಟಿಕತಜ್ಞ ಮನೀಷಾ ಚೋಪ್ರಾ ಅವರ ಪ್ರಕಾರ, ಅಜಿನೊಮೊಟೊದ ಪೌಷ್ಠಿಕಾಂಶದ ಮೌಲ್ಯ ನೋಡುವುದಾದರೆ 1000 ಗ್ರಾಂ ಅಜಿನೊಮೊಟೊದಲ್ಲಿ 12,300 ಮಿಗ್ರಾಂ ಸೋಡಿಯಂ, 21.2 ಮಿಗ್ರಾಂ ಕ್ಯಾಲ್ಸಿಯಂ ಮತ್ತು 0.4 ಮಿಗ್ರಾಂ ಐರನ್ ಅಂಶವಿದೆ. ಅಂದರೆ ಅಜಿನೊಮೊಟೊದಲ್ಲಿ ಯಾವುದೇ ವಿಟಮಿನ್ಸ್, ಪ್ರೋಟೀನ, ಫ್ಯಾಟ್‌ ಹಾಗೂ ಇತರೆ ಆರೋಗ್ಯಕರ ಅಂಶಗಳು ಇಲ್ಲ ಎಂದು ತಿಳಿಸಿದ್ದಾರೆ.

ಭಾರತದ ಯುವಕರು ಬಿಪಿ ಮತ್ತು ಮಧುಮೇಹಕ್ಕೆ ತುತ್ತಾಗುವಂತೆ ಮಾಡಲು ಚೀನಾದ ವ್ಯವಸ್ಥಿತ ಯೋಜನೆಯ ಸಂಚು ಇದು ಎಂದು ನಂಬಲಾಗಿದೆ. ಈ ಉಪ್ಪನ್ನು ಇತ್ತೀಚಿನ ದಿನಗಳಲ್ಲಿ ಪ್ರತಿ ಸಮಾರಂಭದಲ್ಲಿ ಅಡುಗೆಗಳ ಮಾಡುವ ಅಡುಗೆಯವರು ನವರು ಸಹ ಬಳಸುತ್ತಾರೆ. ಚೀನಾದಲ್ಲಿ ಇದನ್ನು ಬಳಸಿದರೆ ಮರಣದಂಡನೆಯನ್ನು ವಿಧಿಸುವ ಶಿಕ್ಷೆಯ ಸಾಧ್ಯತೆಯೂ ಇದೆ. ಈ ಉಪ್ಪನ್ನು ಬಳಸಿ ಮಾಡಿದ ಅಡುಗೆಯನ್ನು 40 ದಿನ ತಿಂದರೆ ಜೀವನ ಪರ್ಯಂತ ಬಿಪಿ, ಶುಗರ್ ನಿಂದ ಬಳಲುವುದು ಖಚಿತ. ಮಾಧ್ಯಮಗಳಲ್ಲಿ ಈ ವಿಷಯ ಚರ್ಚಿಸಲ್ಪಟ್ಟು , ಇದರ ವಿರುದ್ಧ ಮಹಾ ಚಳವಳಿ ನಡೆಸದ ಹೊರತು ಈ ದೇಶದಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ಕೆಲವು ಸಾಮಾಜಿಕ ಸಂಘಟನೆಗಳು ಚರ್ಚೆಗಳನ್ನೂ ನಡೆಸಿದವು.

Advertisement

ಈ ಉಪ್ಪಿನ ಬಳಕೆಯಿಂದ ಸಾವಿರಾರು ರುಚಿಗಳನ್ನು ಗುರುತಿಸಬಹುದಾದ ನಾಲಿಗೆ ತನ್ನ ಈ ವಿಶೇಷ “ಗುರುತಿಸುವ”ಗುಣವನ್ನು ಕಳೆದುಕೊಳ್ಳುತ್ತದೆ, ಒಂದರ್ಥದಲ್ಲಿ ನಮ್ಮ ನಾಲಿಗೆಯನ್ನೇ ಕೊಲ್ಲುತ್ತದೆ. ಅಲ್ಲದೆ ನಮ್ಮ ಮೇಧೋ ಶಕ್ತಿಯನ್ನು ನಾಶಪಡಿಸುತ್ತದೆ. ಇದನ್ನು ಎಲ್ಲಾ ಭಾರತೀಯರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಅದು ನಮ್ಮ ಕರ್ತವ್ಯವೂ ಕೂಡ.

ಅಜಿನೊಮೊಟೊ ಸಣ್ಣ ಪ್ರಮಾಣದಲ್ಲಿ ಬಳಸಲು ಸುರಕ್ಷಿತವಾಗಿದೆ. ಏಕೆಂದರೆ ಅತಿಯಾದ ಬಳಕೆಯು ದೇಹಕ್ಕೆ ಹಾನಿಕಾರಕವಾಗಿದೆ. ವಾಸ್ತವವಾಗಿ, ಗ್ಲುಟಮೇಟ್ ಮೆದುಳಿನಲ್ಲಿ ನರಪ್ರೇಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ರುಚಿಯಾದ ಅಜಿನೊಮೊಟೊದಲ್ಲಿ ಗ್ಲುಟಮೇಟ್‌ ಅಂಶವನ್ನು ಹೊಂದಿರುವ ಕಾರಣ ಇದು ಹಾನಿಕಾರಕ ಎಂದು ಅನೇಕ ಜನರು ಭಾವಿಸುತ್ತಾರೆ. ಏಕೆಂದರೆ ಗ್ಲುಟಮೇಟ್ ನಿಮ್ಮ ದೇಹಕ್ಕೆ ವಿಷಕಾರಿಯಾಗಬಹುದು. ಇದು ನರ ಕೋಶಗಳನ್ನು ಸಹ ಹಾನಿಗೊಳಿಸುತ್ತದೆ. ಆದರೆ ಯಾವುದೇ ಸಂಶೋಧನೆಗಳು ಈ ಕುರಿತು ವರದಿ ಮಾಡಿಲ್ಲ.

Advertisement
  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |
February 1, 2025
7:07 PM
by: The Rural Mirror ಸುದ್ದಿಜಾಲ
ಅರಣ್ಯದಿಂದ ಕೂಡಿದ ಗ್ರಾಮೀಣ ಭಾಗಕ್ಕೂ ನೀರು…! | ಕರಾವಳಿ ಜಿಲ್ಲೆಯ ಈಗಿನ ದೊಡ್ಡ ಯೋಜನೆ ಇದು | ಯಾಕೆ ಎಲ್ಲರೂ ಮೌನವಾಗಿದ್ದಾರೆ..? | ಈ ಕೊಳವೆಯಲ್ಲಿ ಹರಿಯುವುದು ನೀರೋ.. ಹಣವೋ..?
February 1, 2025
8:07 AM
by: ಮಹೇಶ್ ಪುಚ್ಚಪ್ಪಾಡಿ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಅಡಿಕೆ ಒಂದು ಸಮೂಹದ ಅನಿವಾರ್ಯತೆ ಮತ್ತು ಬದುಕು
January 31, 2025
8:14 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror