#FlowerShow | ಹೂವಿನ ಲೋಕದಲ್ಲೊಮ್ಮೆ ವಿರಮಿಸಿ ಬನ್ನಿ | ಕಣ್ಮನ ಸೆಳೆಯುತ್ತಿದೆ ಲಾಲ್‍ಬಾಗ್ ಫ್ಲವರ್ ಶೋ |

August 5, 2023
1:22 PM
ಲಾಲ್‌ ಬಾಗ್‌ ನಲ್ಲಿ 214 ನೇ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯ ಅವರ ಥೀಮ್‍ನಲ್ಲಿ ಮಾಡಲಾಗಿದೆ. ಅಲ್ಲದೇ ಈ ಬಾರಿ ಫ್ಲವರ್ ಶೋಗೆ 2 ಕೋಟಿ ಅಧಿಕ ವೆಚ್ಚ ಮಾಡಲಾಗಿದೆ.

ಆಗಸ್ಟ್‌ 15, ಸ್ವಾತಂತ್ರ್ಯ ದಿನಾಚರಣೆ #Independence Day. ದೇಶಕ್ಕೆಲ್ಲಾ ಹಬ್ಬ. ಹಾಗೆ ಬೆಂಗಳೂರಿನ ನಾಗರೀಕರಿಗೇ ವಿಶೇಷ ಆಕರ್ಷಣೆ ಲಾಲ್‌ ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಲ್ಪಡುವ ಪ್ಲವರ್‌ ಶೋ. ಲಾಲ್‍ಬಾಗ್ ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದು, ಇಡೀ ಲಾಲ್‌ ಬಾಗ್‌ ಮದುವಣ ಗಿತ್ತಿಯಂತೆ ಹೂವುಗಳಿಂದ ಸಿಂಗಾರಗೊಂಡಿದ್ದು ನಳನಳಿಸುತ್ತಿದೆ.

Advertisement

ಬೆಂಗಳೂರಿನಲ್ಲಿ ಪ್ರತಿ ವರ್ಷ ಹೂಗಳ ಹಬ್ಬವನ್ನು ಲಾಲ್‍ಬಾಗ್ ಫ್ಲವರ್ ಶೋ ಮೂಲಕ ಆಯೋಜಿಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಿದೆ. ಬಗೆ ಬಗೆ ಹೂವುಗಳು ಜನರ ಕಣ್ಮನ ಸೆಳೆಯುತ್ತಿವೆ. ಆಗಸ್ಟ್ 04 ರಂದು ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಕೆಂಗಲ್ ಹನುಮಂತಯ್ಯನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದ್ದಾರೆ. ಈ ಫ್ಲವರ್ ಶೋ ಆಗಸ್ಟ್ 15ರವರೆಗೆ ಅಂದ್ರೆ ಒಟ್ಟು 12 ದಿನಗಳವರೆಗೆ ನಡೆಯಲಿದೆ.

ಸಿಎಂ ಸಿದ್ದರಾಮಯ್ಯಗೆ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ಪರಿಷತ್ ಸದಸ್ಯರಾದ ಶರವಣ, ಗೋವಿಂದ ರಾಜ್ ಸಾಥ್ ನೀಡಿದ್ದಾರೆ. ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನವಾಗಿದ್ದು, ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯ ಅವರ ಥೀಮ್‍ನಲ್ಲಿ ಇದೆ. ಅಲ್ಲದೇ ಈ ಬಾರಿ ಫ್ಲವರ್ ಶೋಗೆ 2 ಕೋಟಿ ಅಧಿಕ ವೆಚ್ಚ ತಗುಲಿದೆಯಂತೆ. ಲಾಲ್ ಬಾಗ್ ಶುಚಿತ್ವದ ಉದ್ಯಾನವನ. 140 ಎಕರೆ ವಿಸ್ತಿರ್ಣ ಇರೋ ಉದ್ಯಾನ, ಇಲ್ಲಿ ಎಲ್ಲ ಮರಗಿಡಗಳು ಇವೆ. ಕೆಂಗಲ್ ಹನುಮಂತಯ್ಯ 40 ಎಕರೆ ಅಕ್ವೈರ್ ಮಾಡಿ, ವಿಸ್ತೀರ್ಣ ಹೆಚ್ಚಿಸಿದ್ದಾರೆ.

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸರ್ಪಸಂಸ್ಕಾರವು ಈ ಶಾಪದಿಂದ ಮುಕ್ತಿಯನ್ನು ಒದಗಿಸುವ ಮಾರ್ಗ
August 1, 2025
8:52 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 31-07-2025 | ಇನ್ನೊಂದು ವಾಯುಭಾರ ಕುಸಿತದ ಲಕ್ಷಣ |
July 31, 2025
1:37 PM
by: ಸಾಯಿಶೇಖರ್ ಕರಿಕಳ
ಹಾವೇರಿಯಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ ಮಾರಾಟ ಜಾಲ ಸಕ್ರಿಯ | ರಾಜ್ಯದ 639 ರೈತರಿಗೆ ವಂಚನೆ |
July 30, 2025
9:32 PM
by: The Rural Mirror ಸುದ್ದಿಜಾಲ
ಕಾಡಾನೆಗಳ ನಿಯಂತ್ರಣಕ್ಕೆ ಕೇಂದ್ರ ಅರಣ್ಯ ಸಚಿವರಿಗೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ
July 30, 2025
9:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group