ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ #Independence Day. ದೇಶಕ್ಕೆಲ್ಲಾ ಹಬ್ಬ. ಹಾಗೆ ಬೆಂಗಳೂರಿನ ನಾಗರೀಕರಿಗೇ ವಿಶೇಷ ಆಕರ್ಷಣೆ ಲಾಲ್ ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಲ್ಪಡುವ ಪ್ಲವರ್ ಶೋ. ಲಾಲ್‍ಬಾಗ್ ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದು, ಇಡೀ ಲಾಲ್ ಬಾಗ್ ಮದುವಣ ಗಿತ್ತಿಯಂತೆ ಹೂವುಗಳಿಂದ ಸಿಂಗಾರಗೊಂಡಿದ್ದು ನಳನಳಿಸುತ್ತಿದೆ.
ಬೆಂಗಳೂರಿನಲ್ಲಿ ಪ್ರತಿ ವರ್ಷ ಹೂಗಳ ಹಬ್ಬವನ್ನು ಲಾಲ್‍ಬಾಗ್ ಫ್ಲವರ್ ಶೋ ಮೂಲಕ ಆಯೋಜಿಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಿದೆ. ಬಗೆ ಬಗೆ ಹೂವುಗಳು ಜನರ ಕಣ್ಮನ ಸೆಳೆಯುತ್ತಿವೆ. ಆಗಸ್ಟ್ 04 ರಂದು ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಕೆಂಗಲ್ ಹನುಮಂತಯ್ಯನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದ್ದಾರೆ. ಈ ಫ್ಲವರ್ ಶೋ ಆಗಸ್ಟ್ 15ರವರೆಗೆ ಅಂದ್ರೆ ಒಟ್ಟು 12 ದಿನಗಳವರೆಗೆ ನಡೆಯಲಿದೆ.
ಸಿಎಂ ಸಿದ್ದರಾಮಯ್ಯಗೆ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ಪರಿಷತ್ ಸದಸ್ಯರಾದ ಶರವಣ, ಗೋವಿಂದ ರಾಜ್ ಸಾಥ್ ನೀಡಿದ್ದಾರೆ. ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನವಾಗಿದ್ದು, ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯ ಅವರ ಥೀಮ್‍ನಲ್ಲಿ ಇದೆ. ಅಲ್ಲದೇ ಈ ಬಾರಿ ಫ್ಲವರ್ ಶೋಗೆ 2 ಕೋಟಿ ಅಧಿಕ ವೆಚ್ಚ ತಗುಲಿದೆಯಂತೆ. ಲಾಲ್ ಬಾಗ್ ಶುಚಿತ್ವದ ಉದ್ಯಾನವನ. 140 ಎಕರೆ ವಿಸ್ತಿರ್ಣ ಇರೋ ಉದ್ಯಾನ, ಇಲ್ಲಿ ಎಲ್ಲ ಮರಗಿಡಗಳು ಇವೆ. ಕೆಂಗಲ್ ಹನುಮಂತಯ್ಯ 40 ಎಕರೆ ಅಕ್ವೈರ್ ಮಾಡಿ, ವಿಸ್ತೀರ್ಣ ಹೆಚ್ಚಿಸಿದ್ದಾರೆ.
ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಕ್ಕಳಿಗೆ, ಮಹಿಳೆಯರಿಗೂ ಸಹ ಕೆಲ ಕಾರ್ಯಕ್ರಮಗಳು ಇರಲಿವೆ. ಒಟ್ಟು 4 ಗೇಟ್ಗಳಲ್ಲಿ ಜನರಿಗೆ ಎಂಟ್ರಿ ನೀಡಲಾಗುತ್ತೆ. ಈ ಬಾರಿ ಟಿಕೆಟ್ ದರ ಜಾಸ್ತಿ ಇಲ್ಲ. ವೀಕ್ ಡೇಸ್ನಲ್ಲಿ ಹಿರಿಯರಿಗೆ 70 ರೂಪಾಯಿ ಹಾಗೂ ಮಕ್ಕಳಿಗೆ 30 ರೂಪಾಯಿ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆ .
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…