ಅಕ್ರಮ ಸಕ್ರಮ ಯೋಜನೆ ಮತ್ತೆ ಜಾರಿ | ಸರ್ಕಾರದಿಂದ ಸಾಗುವಳಿ ಚೀಟಿ ವಿತರಣೆ

March 31, 2023
6:16 PM

ಸರ್ಕಾರವು ಹಲವಾರು ಜನರಿಗೆ ಈಗಾಗಲೇ ಸಾಗುವಳಿ ಪತ್ರವನ್ನು ಹಂಚಿಕೆ ಮಾಡುತ್ತಿದೆ.  ಸರ್ಕಾರವು ಈಗ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಡ ಸಾಗುವಳಿ ಪತ್ರವನ್ನು ನೀಡುತ್ತಿದೆ. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೂಡ ಸಾಗುವಳಿ ಚೀಟಿಯನ್ನು ನೀಡಲಾಗುತ್ತಿದೆ. ಸಾಗುವಳಿ ಚೀಟಿಯನ್ನು ಪಡೆದ ರೈತರು ಕೃಷಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಹಾಯವನ್ನು ಉಚಿತವಾಗಿ ನೀಡಲಾಗುತ್ತದೆ.

ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಸಾಗುವಳಿ ಪತ್ರವನ್ನು ವಿತರಿಸಲಾಗಿದೆ. ಮೇ 31 ರೊಳಗೆ ಎಲ್ಲಾ ರೈತರಿಗೆ ಅರ್ಜಿ ಸಲ್ಲಿಸಲು ಸರ್ಕಾರವು ಆದೇಶ ಹೊರಡಿಸಿದೆ. ಯಾರು ಅರ್ಜಿಸಿಲ್ಲ ಎಲ್ಲಾ ಅರ್ಹ ರೈತರು ಕೂಡ ಅರ್ಜಿ ಸಲ್ಲಿಸಬಹುದು. ರೈತರಿಗಾಗಿ ಸರ್ಕಾರವು ಅದು ಸಾಗುವಳಿ ಪತ್ರ ಹೊಂದಿರುವ ರೈತರಿಗೆ ಎಲ್ಲಾ ರೀತಿಯ ಸಹಾಯಧನ ನೀಡಲಾಗುತ್ತಿದೆ. ಈ ಸಹಾಯಧನವನ್ನು ಪಡೆಯಲು ಸಾಗುವಳಿ ಪತ್ರ ಇರುವಂತಹ ಎಲ್ಲಾ ರೈತರಿಗೂ ಕೂಡ ಸರ್ಕಾರದಿಂದ ಉಚಿತ ಸೌಲಭ್ಯ ಸಿಗುತ್ತದೆ.

ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವವರಿಗೆ ಸರ್ಕಾರವು ಈಗ ಸಾಗುವಳಿ ಪತ್ರವನ್ನು ನೀಡಲಾಗುತ್ತಿದೆ. ಸಾಗುವಳಿ ಪತ್ರ ಇರುವ ರೈತರಿಗೆ ಎಲ್ಲಾ ರೀತಿಯಲ್ಲೂ ಅಂದರೆ ಉಚಿತವಾಗಿ ಪಂಪ್ಸೆಟ್‌, ಟಾರ್ಪಲ್‌, ರೈತರ ಮಕ್ಕಳಿಗೆ ಸ್ಕಾಲರ್ಶಿಪ್‌, ಬೆಳೆ ಹಾನಿ ಪರಿಹಾರ, ಕೃಷಿಕರ ಖಾತೆಗೆ 10 ಸಾವಿರ ಸಹಾಯಧನ ಹಾಗೂ ಬಿತ್ತನೆ ಬೀಜ ನೀಡಲಾಗುತ್ತದೆ. ಈ ಎಲ್ಲಾ ಅವಕಾಶವನ್ನು ಎಲ್ಲಾ ಅರ್ಹ ರೈತರು ಬಳಸಿಕೊಳ್ಳಬೇಕು. ಕೃಷಿಕರು ಸ್ವಾವಲಂಬಿಯಾಗಬೇಕೆಂದು ಸರ್ಕಾರ

ಸರ್ಕಾರವು ಅರ್ಜಿ ಸಲ್ಲಿಸುವುದಕ್ಕೆ ಇನ್ನೂ ಎರಡು ತಿಂಗಳವರೆಗೆ ಸಮಯವನ್ನು ನೀಡಿದೆ ಅಂದರೆ ಏಪ್ರಿಲ್ ಮತ್ತು ಮೇ ತಿಂಗಳವರೆಗೆ ನೀವು ಸಕ್ರಮವಾಗಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಬೇಕಾದರೆ ನೀವು ನಾಡಕಚೇರಿಯನ್ನು ಸಂಪರ್ಕಿಸಬೇಕು ಅಲ್ಲಿ ಅರ್ಜಿ ನಮೂನೆ ಐವತ್ತೇಳರ ಅರ್ಜಿಯನ್ನು ಮೊದಲು ಹಾಕಬೇಕು ನಂತರ ಅದನ್ನು ತುಂಬಬೇಕು ಇದಾದ ಮೇಲೆ ನಿಮಗೆ ಸರ್ಕಾರದಿಂದ ಸ್ವಂತ ಭೂಮಿಯನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ.

ಅಕ್ರಮ ಸಕ್ರಮ ಯೋಜನೆ ಎಷ್ಟು ಜಮೀನಿಗೆ ಈ ಅವಕಾಶ ಮತ್ತು ಎಲ್ಲಿ? : ಅಕ್ರಮ – ಸಕ್ರಮ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇರು ಕೃಷಿ ಉದ್ದೇಶಕ್ಕಾಗಿ ಗುತ್ತಿಗೆಗೆ ನೀಡಲಾಗಿರುವ ಸುಮಾರು 4,292 ಎಕರೆ ಜಮೀನನ್ನು ಮಾರ್ಗಸೂಚಿ ಮೌಲ್ಯ ವಿಧಿಸಿ ಖಾಯಂ ಆಗಿ ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ಗೆ ತಿದ್ದುಪಡಿ ತರಲು ಬಿಜೆಪಿ ಸರ್ಕಾರವು ಕರಡು ಅಧಿಸೂ ಚನೆ ಹೊರಡಿಸಿದೆ . ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿ ಸಕ್ರಮಗೊಳಿಸಲು ನಮೂನೆ -57 ರಲ್ಲಿ ಅರ್ಜಿ ಸಲ್ಲಿಸಲು 2022 ಮೇ ಯಿಂದ ಒಂದು ವರ್ಷದ  ಅವಧಿಯವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನ | ಆತಂಕಪಡುವ ಅಗತ್ಯವಿಲ್ಲ | ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಸ್ಪಷ್ಟನೆ
March 12, 2025
10:13 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗುಡುಗು ಸಹಿತ ಗಾಳಿ-ಮಳೆ | ಎರಡನೇ ಬಾರಿ ಸುರಿದ ಧಾರಾಕಾರ ಮಳೆ |
March 12, 2025
10:03 PM
by: ದ ರೂರಲ್ ಮಿರರ್.ಕಾಂ
ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್
March 12, 2025
7:19 AM
by: The Rural Mirror ಸುದ್ದಿಜಾಲ
 ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ
March 12, 2025
7:13 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror