ಶರೀರದ ನರಗಳ ಅಸ್ವಸ್ಥತೆಗಳ ಹಾಗೂ ಮಾನಸಿಕ ಅಸೌಖ್ಯದ ನಿಯಂತ್ರಣದ ಬಗ್ಗೆ ಇದೇ ಜೂನ್ 12ರಿಂದ ಹತ್ತು ದಿನಗಳ ಕಾಲ ನಡೆಯುವ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಅರ್ಹರ ಆಯ್ಕೆಗಾಗಿ ಸಲ್ಲಿಸಲ್ಪಟ್ಟ ಪ್ರೊಫೈಲ್ ಗಳಲ್ಲಿ ಭಾರತದಿಂದ ಅಕ್ಷರ ದಾಮ್ಲೆಯವರು ಪರಿಗಣಿಸಲ್ಪಟ್ಟಿದ್ದಾರೆ .ಚೀನಾ ಸರಕಾರದ ವಾಣಿಜ್ಯ ಸಚಿವಾಲಯವು ಏರ್ಪಡಿಸಿರುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಮಂತ್ರಿತರಾಗಿದ್ದಾರೆ .
ಅವರು ಬೆಂಗಳೂರಿನ ಕೊಳೆಗೇರಿಗಳಲ್ಲಿ ಮಾನಸಿಕ ಅಸ್ವಸ್ಥತೆಯ ನಿವಾರಣೆಗಾಗಿ ಕೈಗೊಂಡ ಸೇವಾ ಕಾರ್ಯಗಳು ಹಾಗೂ 2020ರಲ್ಲಿ ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಲ್ಲಿ ಮನೋಸ್ಥೈರ್ಯ ತುಂಬುವ ಕೆಲಸ ಮಾಡಿದ್ದು , ಅವರ ಇಂಗ್ಲಿಷ್ ಲೇಖನಗಳು ಹಾಗೂ ಉಪನ್ಯಾಸಗಳ ಕೊಡುಗೆಗಳನ್ನು ಆಯ್ಕೆ ಸಮಿತಿಯು ಪರಿಗಣಿಸಿದೆ. ಇದು ಅಂತಾರಾಷ್ಟ್ರೀಯ ಸಮ್ಮೇಳನವಾದುದರಿಂದ ಭಾಗವಹಿಸುವವರಿಗೆ ಇಂಗ್ಲಿಷ್ ಜ್ಞಾನ ಇರಲೇಬೇಕೆಂಬ ಕಂಡೀಶನ್ ಇದೆ. ಅಕ್ಷರ ಅವರಿಗೆ ಸ್ನೇಹ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಣದ ಗಟ್ಟಿ ತಳಹದಿ ಸಿಕ್ಕಿತ್ತು.ಮಾನಸಿಕ ಸಮಸ್ಯೆಗಳ ನಿವಾರಣೆಯ ಬಗ್ಗೆ ಯೂಟ್ಯೂಬ್ ನಲ್ಲಿರುವ ಅವರ ಇಂಗ್ಲಿಷ್ ಭಾಷಣಗಳು ಈ ವಿಚಾರ ಸಂಕಿರಣಕ್ಕೆ ಆಯ್ಕೆಯಾಗಲು ಉಪಯುಕ್ತವಾದವು . ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ಮಾನಸಿಕ ಚಿಕಿತ್ಸೆಯ ಮನೋ ಸಂವಾದ ಸಂಸ್ಥೆಯನ್ನು ಸ್ಥಾಪಿಸಿರುವ ಅಕ್ಷರ ಅವರ ಆತಿಥ್ಯವನ್ನು ಹಾಗೂ ಪ್ರಯಾಣ ವೆಚ್ಚಗಳನ್ನು ಚೀನಾ ಸರಕಾರವೇ ಭರಿಸಲಿದೆ .
ಚೀನಾದ ರಾಜಧಾನಿ ಬೀಜಿಂಗ್‍ಗೆ ಚೀನಾದ ರಾಜಧಾನಿ ಬೀಜಿಂಗ್ ಗೆ ಸಮೀಪವಿರುವ ಅಕಾಡೆಮಿ Academy for International Business Offic ಕೇಂದ್ರದಲ್ಲಿ ಜರಗಲಿರುವ ಈ ವಿಚಾರ ಸಂಕಿರಣದಲ್ಲಿ ವಿವಿಧ ದೇಶಗಳ ಮನಶ್ಯಾಸ್ತ್ರಜ್ಞರು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…